ಸದ್ಗುರು ಸಮಯ Sadhguru Samaya

ಸದ್ಗುರುಗಳನ್ನು "ಮಾಡ್ರನ್ ಗುರು" ಎಂದರೆ ತಪ್ಪಾಗುವುದಿಲ್ಲ ಏಕೆಂದರೆ? ಈಗಿನ ಕಾಲಮಾನಕ್ಕೆ ತಕ್ಕಂತೆ ಆಧ್ಯಾತ್ಮದ ಆಳವಾದ ಜ್ಞಾನವನ್ನು ಸಾಮಾನ್ಯರಿಗೂ ರ‍್ಥವಾಗುವ ರೀತಿಯಲ್ಲಿ ನಮ್ಮೆಲ್ಲರಿಗೂ ತಿಳಿಸಿ ಕೊಡುತ್ತಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಜ್ಞಾನೋದಯ ಹೊಂದಿದ ಸದ್ಗುರುಗಳು, ಪ್ರತಿಯೊಬ್ಬ ಮನುಷ್ಯನು ಜೀವನದ ಉತ್ತುಂಗ ಸ್ಥಿತಿಯನ್ನು ತಲುಪಲಿ ಎಂಬ ಆಶಯದೊಂದಿಗೆ ಆಧ್ಯಾತ್ಮದ ಜ್ಞಾನವನ್ನು ಮನುಕುಲಕ್ಕೆ ಯೋಗ, ಧ್ಯಾನ ಹಾಗೂ ಪ್ರವಚನಗಳ ಮೂಲಕ ವಿಶ್ವಕ್ಕೆ ಧಾರೆ ಎರೆಯುತ್ತಿದ್ದಾರೆ.