220ಕ್ಕೂ ಮಿಕ್ಕ ಜಾತಿಯ 600ವಿವಿಧ ಡೇರೆಗಿಡದ ಸುಂದರ ನೋಟ.ಮನಸಿಗೆಮುದ ಸಂಭ್ರಮ.Varieties of Dahlia.

Описание к видео 220ಕ್ಕೂ ಮಿಕ್ಕ ಜಾತಿಯ 600ವಿವಿಧ ಡೇರೆಗಿಡದ ಸುಂದರ ನೋಟ.ಮನಸಿಗೆಮುದ ಸಂಭ್ರಮ.Varieties of Dahlia.

#happymoments #dahlias#ಹೂದೋಟದಿ#ಡೇರೆಹೂ #ಕೈತೋಟ
ಹೂದೋಟದಿ ನೀ ಕಂಡೆ ಚಂದದಿ
ಮನ ಹಿಡಿದಂತಿದೆ ನಿನ್ನತ್ತ ಹಾದಿ
ಮರೆಸಿದೆ ನೀ ಮನಸಾಗುವ ಹಾದಿ
ದಾರಿ ತಪ್ಪಿದೆ ನಿನ್ನಂದವ ನೋಟದಿ .
ಮಳೆಗಾಲದ ಮನ ತಣಿಸುವ ಸುಂದರಿಯರು.
ಡೇರೆ ಹೂಗಳನ್ನು ಗೆಡ್ಡೆಯಿಂದ ಕಿಲ್ಲುಗಳಿಂದ ಹೆರೆಗಳಿಂದ ಮತ್ತು ಬೀಜಗಳಿಂದ ಬೆಳೆಯಬಹುದು. ಡೇರೆ ಹೂವಿನ ಗೆಡ್ಡೆಯನ್ನು ಜೂನ್ ತಿಂಗಳ ಮೊದಲ ವಾರದಲ್ಲಿ ಮಣ್ಣಿಗೆ ಹಾಕಬೇಕು. ಹೇಗೆಂದರೆ ಕಾಡು ಮಣ್ಣು, ಸಾವಯವ ಗೊಬ್ಬರ. ಸ್ಪಲ್ಪ ಮರಳು ಮಿಶ್ರ ಮಾಡಿ ಒಂದು ದೊಡ್ದ ಗ್ರೋ ಬ್ಯಾಗ್ ಅಥವಾ ಸಿಮೆಂಟ್ ಚೀಲಕ್ಕೆ ಮಣ್ಣು ಹಾಕಿ ಅದರಲ್ಲಿ ಗೆಡ್ಡೆಯನ್ನು ಹಾಕಬೇಕು. 8 - 10 ದಿನಕ್ಕೆ ಗಿಡಗಳು ಮೊಳಕೆಯೊಡೆಯುತ್ತವೆ. ಅಲ್ಲಿಂದಲೇ ಶುರು ನಮ್ಮ ಗಿಡಗಳ ಶೋಧನೆ ಯಾವ ಇಡ ಇದೆ. ಯಾವಗಿಡ ಈ ವರ್ಷ ಇಲ್ಲ ಎ೦ದು. ಗೆಳತಿಯರಿಗೆ ಫೋನ್ ಶುರುವಾಗುತ್ತದೆ. ನಮ್ಮ ಮನೆಯಲ್ಲಿ ಆಗಿಡ ಇಲ್ಲ ಈ ಗಿಡ ಇಲ್ಲ ಎ೦ದು. ಕೆಲವು ಮಹಿಳೆಯರು ಗಿಡ ನೋಡಿದ ಕೂಡಲೇ ಇದು ಇಂಥ ಜಾತಿಯ ಹೂವೇ ಎ೦ದು ಹೇಳುತ್ತಾರೆ. ಅಷ್ಟು ಪ್ರವೀಣರು.
ಹಾಗೆ 1 ರಿಂದ ೩ ಅಡಿ ಗಿಡ ಆದ ಕೂಡಲೇ ಜಾಸ್ತಿ ಕಿಲ್ಲುಗಳು ಬಂದರೆ ಕಿತ್ತು. 2 ಅಥವಾ 3 ಗಿಡ ಇಡಬೇಕು. ನಂತರ ಗಿಡಗಳ ಕುಡಿ ಚಿವುಟಿ ಗಿಡಕ್ಕೆ ಗೂಟ ಕೊಟ್ಟು ಕಟ್ಟಿ. ಮಣ್ಣನ್ನು ಹಾಕಬೇಕು.ನಾನು ಮೊದಲ ಸಲ ಸ್ವಲ್ಪ D. A. P. ಗೊಬ್ಬರ ಕೊಡುತ್ತೇನೆ. ನಂತರ ಹದಿನೈದು ದಿನಗಳಿಗೊಮ್ಮೆ ಸಗಣಿ ನೀರನ್ನು ಹಾಕುತ್ತೇನೆ
ಗಿಡಗಳು ದೊಡ್ಡ ಆದ ಹಾಗೆ, ಬುಡಕೊಳೆಯುವುದು. ಕೀಟಗಳ ಭಾದೆ ಬಹಳ ಕೊಳೆಯುವದಕ್ಕೆ ಸ್ವಲ್ಪ ಸುಣ್ಣ . ಮೈಲುತುತ್ತ ಮಿಕ್ಸ್ ಮಾಡಿ, ಗಿಡಗಳಿಗೆ ಸ್ಪ್ರೆ ಮಾಡುತ್ತೇನೆ ಗಿಡಗಳಿಗೆ ತುಂಬಾ ಸರ್ಕಾರಿ ಗೊಬ್ಬರ ಹಾಕುವದರಿಂದ ಗೆಡ್ಡೆಗಳಿಗೆ ಹಾನಿಯಾಗುತ್ತವೆ.
ಇವು ವಿವಿಧ ಆಕಾರ, ಗಾತ್ರ. ಬಣ್ಣಗಳಿಂದ ಕ೦ಗೊಳಿಸುವುದರಿಂದ ನೋಡುವವರ ಕಣ್ಣಿಗೂ ಮನಸ್ಸಿಗೆ ಮುದ ನೀಡುತ್ತವೆ.
ರಂಗೀ ತರಂಗವಾಗಿ ಬಿಂಬಿಸುವ. ಕಡ್ಡಿ ತಾವರೆ, ಕುತ್ರಿ. ಪೂನ ತಾವರೆ, ಹಾಲವಾಣ ಪಕ್ಕ ತಾವರೆ, ಕಿರಣ ಕಡ್ಡಿ, ಗೌರಿ ತಾವರೆ, ಡಿಶ್ ಹಾಗೆ ಕಾಣುವ ಡಿಶ್ ತಾವರೆ ಗಿಡ್ಡ ಕಮಲ . ಉದ್ದ ಕಮಲ, ಅಗ್ನಿಯಂತೆ ಪ್ರಜ್ಞ ಲಿಸುವ ಅಗ್ನಿ ಕುಂಡ. ದೀಪದ ಸುಳಿ ದಾಳಿಂಬೆ ತಾವರೆ, ಸಂಧಿ ತಾವರೆ, ಮಣಿಗಳು ಪೋಣಿಸಿದ ಹಾಗೆ ಲಿಲ್ಲಿ ಪುಟ್ ಹೀಗೆ ಹಲವಾರು ಹೆಸರುಗಳು.
ಹೀಗೆ ಹೂವುಗಳಿಗೆ ಹೆಸರಿಡುವ ಸಾಲಿಗೆ ಮಹಿಳೆಯರೇ ಮೊದಲು. ಹೀಗೆ ತಮ್ಮ ಸೌಂದರ್ಯವನ್ನು ಪ್ರಕೃತಿಯಲ್ಲಿ ರಾರಾಜಿಸುವ ವಿವಿಧ ಪುಪ್ಪಗಳ ಛಾಯಾಚಿತ್ರಗಳು, ನನಗಂತೂ ಡೇರೆ ಹೂವುಗಳೆಂದರೆ ತುಂಬಾ ಇಷ್ಟ.
ಸಾಮಾನ್ಯವಾಗಿ ಡೇರೆಹೂಗಳು ಮಳೆಗಾಲದಲ್ಲಿ ಎಲ್ಲರ ಮನೆಯಲ್ಲಿಯೂ ಕೆಲವೊಂದು ಗಿಡಗಳಾದರು ಇರುತ್ತದೆ ನನಗಂತೂ ಡೇರೆಹೂವೆಂದರೆ ತುಂಬಾ ಇಷ್ಟ ಡೇರೆಗೆಡ್ಡೆಯನ್ನು ಜೂನ್ ತಿಂಗಳುಅಂದರೆ ಮಳೆ ಶುರುವಾದ ಮೇಲೆ ಗೆಡ್ಡೆ ಇರುವ ಚೀಲವನ್ನು ಹೊರಗೆ ಇಡುತ್ತೇನೆ ಅದು 15 ದಿನಕ್ಕೆಲ್ಲ ಮೊಳಕೆ ಒಡೆಯುತ್ತದೆ ಗಿಡಗಳು ಅರ್ಧ ಅಡಿ ಆದ ಕೂಡಲೇ ಎರಡು ಗಿಡ ಇಟ್ಟು ತುಂಬಾ ಗಿಡಗಳು ಬಂದಿದ್ದರೆ ಅದನ್ನು ತೆಗೆದು ಹಾಕಿ ಉಳಿದ ಗಿಡಕ್ಕೆ ಸ್ವಲ್ಪ ಮಣ್ಣು ಹಾಕಿ ಅದಕ್ಕೆ ಸಗಣಿ ನೀರನ್ನು ಕೊಡುತ್ತೇನೆ ಮತ್ತೆ ಎಂಟು ದಿನ ಕಳೆದ ಮೇಲೆ ಗಿಡಗಳ ಕುಡಿ ಕಟ್ ಮಾಡುತ್ತೇನೆಹೀಗೆ ಮಾಡಿದರೆ ಗಿಡಗಳು ಹೆರೆಯೊಡೆದು ಹೂಗಳು ಜಾಸ್ತಿ ಬಿಡುತ್ತದೆ ನಂತರ ಗಿಡಗಳಿಗೆ ಒಂದು ಕೋಲು ಕೊಟ್ಟು ಹಗ್ಗ ಕಟ್ಟುತ್ತೇನೆ ಹುಳಗಳ ಭಾಧೆಬರದೇ ಇರುವ ಹಾಗೆ ಸ್ವಲ್ಪ ಗಿಡಗಳ ಬುಡದಲ್ಲಿ ಅಂದರೆ ಅರ್ಧ ಅಡಿ ದೂರ ಸುಣ್ಣವನ್ನು ಹಾಕಬೇಕು ತುಂಬಾ ಮಳೆ ಬಂದು ಗಿಡಗಳು ಕೊಳೆಯುತ್ತಿದ್ದರೆ ಬೋರ್ಡೋ ಮಿಶ್ರಣವನ್ನು ಸ್ವಲ್ಪ ನೀರು ಮಾಡಿಕೊಂಡು ಗಿಡಗಳಿಗೆ ಹೊಡೆಯಬೇಕು ಗಿಡಗಳುಒಂದುವರೆಯಿಂದ ಎರಡು ತಿಂಗಳ ಒಳಗೆ ಮೊಗ್ಗು ಬಿಡಲು ಆರಂಭಿಸುತ್ತದೆ ಈ ಗಿಡಗಳಿಗೆ 15 ದಿನಗಳಿಗೊಮ್ಮೆ ಸಗಣಿ ನೀರನ್ನು ಕೊಡುತ್ತಾ ಬರಬೇಕು ಮೊಗ್ಗು ಬಂದಮೇಲೆ ಸಗಣಿ ನೀರನ್ನು ಹಾಕುವ ಅವಶ್ಯಕತೆ ಇಲ್ಲ ಈ ಗಿಡವನ್ನು ಗೆಡ್ಡೆಯಿಂದಲೂ ಮತ್ತೆ ಗಿಡ ಮಾಡಬಹುದು ಹಾಗೂ ಹೆರೆಯಿಂದಲೂಗಿಡ ಮಾಡಬಹುದು ಬೀಜದಿಂದಲೂ ಮಾಡಬಹುದು ಮತ್ತು ಬುಡದಲ್ಲಿ ಒಡೆಯುವ ಹಿಳ್ಳುಗಳಿಂದಲೂಗಿಡ ಮಾಡಬಹುದು ಬೀಜದಿಂದ ಮಾಡಿದರೆ ಹೂಗಳು ದಪ್ಪ ಬರುವುದಿಲ್ಲ ಎಂದು ನನ್ನ ಅನಿಸಿಕೆ. ನಮ್ಮಲ್ಲಿ 200 ರಿಂದ 250 ಜಾತಿಗಳು ಇರಬಹುದು 600 ಬ್ಯಾಗಗಳಲ್ಲಿ ಗಿಡಗಳು ಇವೆ ನನಗಂತೂ ಇವುಗಳ ಬೆಳವಣಿಗೆ ದಿನದಿಂದ ದಿನಕ್ಕೆ ಏಳುವ ಸಂಭ್ರಮ ನೋಡುವುದೇ ಒಂದು ಖುಷಿ ಇವುಗಳಲ್ಲಿ ತುಂಬಾ ಹೆಸರಿನಿಂದ ಕರೆಯುತ್ತೇವೆ ಕೆಲವೊಂದು ಹೂಗಳಿಗೆ ಹೆಸರು ಗೊತ್ತಾಗದೆ ಹೋದರೆ ಯಾವ ಊರಿಂದ ಅಥವಾ ಯಾರ ಮನೆಯಿಂದ ತಂದಿರುತ್ತೇವೆಯೋ ಅವರ ಹೆಸರನ್ನೇ ಇಡುತ್ತೇವೆ ನನ್ನಲ್ಲಿ ಅಗ್ನಿಕುಂಡ ಕೆರೆ ತಾವರೆ ಲಿಲ್ಲಿಪುಟ್ ( ಇದರಲ್ಲಿ 7 ಬಣ್ಣಗಳಿವೆ) ಜಮಖಾನ ಪಟ್ಟೆಜರ್ಬೇರ ತಾವರೆ ಬೂದಿ ಕುತ್ರಿ ಬೂದಿ ತಾವರೆ ಕೆಂಪು ಪೂನ ಬಿಳಿ ಪೂನ ಹೀಗೆ ಎಲ್ಲ ಪೂನಗಳುಅಮೆರಿಕನ್ ಕಡ್ಡಿ ದೊಡ್ಡ ಕಡ್ಡಿ ಸಣ್ಣ ಕಡ್ಡಿ ಟೈಗರ್ ತಾವರೆ ಕಿರಣ ಕಡ್ಡಿ ಹೀಗೆ ತುಂಬಾ ಜಾತಿಯ ತುಂಬಾ ಜಾತಿಯ ಡೇರೆಹೂಗಳಿವೆ
MobileNo.+91 81058 65572

Комментарии

Информация по комментариям в разработке