Janapada Impu | ಬೆಳ್ಳಾನೆ ಎರಡೆತ್ತು | ರೈತನ ಜನಪದ ಗೀತೆ|Bellane Eradettu |Farmers Song| Kannada Folk Song

Описание к видео Janapada Impu | ಬೆಳ್ಳಾನೆ ಎರಡೆತ್ತು | ರೈತನ ಜನಪದ ಗೀತೆ|Bellane Eradettu |Farmers Song| Kannada Folk Song

Janapada Impu | Kannada Folk Songs Series | ಬೆಳ್ಳಾನೆ ಎರಡೆತ್ತು | ರೈತನ ಜನಪದ ಗೀತೆ | Bellane Eradettu | Farmers Song|

Janapada Impu (ಜನಪದಇಂಪು) a series of Kannada Folk songs is an attempt to present Janapada Songs in its simplest raw form without the use of any musical instruments. In this Educational Series we present to you many Janapada songs which you can learn, hum along and sing.

This folk song "Bellane Eradetthu" gives us a glimpse into the life of our hardworking farmer. The dreams and aspirations of a farmer are expressed in this folk song beautifully. Farmer is saying with pride that he will take the bulls to the fair to buy them a pair of bells. If one year brings joy to the farmer, the next year he may experience loss due to drought. Mindful of this, he is praying to the God that the next year should also be a good crop year. He is also hoping that the next year will bring good rains and better yield.

This song is dedicated to our farmers who are the backbone of our country.

Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language.

Come let’s celebrate Kannada!!


ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಗೋಲು
ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಗೋಲು
ಬಂಗಾರದಾ ಸೆಡ್ಡೆ ಬಲಗೈಲಿ
ಬಂಗಾರದಾ ಸೆಡ್ಡೆ ಬಲಗೈಲಿ ಹಿಡಕೊಂಡು
ಹೊನ್ನ ಬಿತ್ಯಾರೋ ಹೊಲಕೆಲ್ಲ
ಹೊನ್ನ ಬಿತ್ಯಾರೋ ಹೊಲಕೆಲ್ಲ

ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ
ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ
ಸರದಾರ ನನ್ನೆತ್ತು ಸಾರಂಗ
ಸರದಾರ ನನ್ನೆತ್ತು ಸಾರಂಗ ಬರುವಾಗ
ಸರಕಾರವೆಲ್ಲ ನಡುಗಿತೋ
ಸರಕಾರವೆಲ್ಲ ನಡುಗಿತೋ

ಬೆಳೆಯಾಗೆ ಬಂದೈತೆ ಬಸವಣ್ಣನ ದಯದಿಂದ
ಬೆಳೆಯಾಗೆ ಬಂದೈತೆ ಬಸವಣ್ಣನ ದಯದಿಂದ
ಮದ್ದೂರ ಜಾತ್ರೆಗೆ ಹೋಗ್ತೀನಿ
ಮದ್ದೂರ ಜಾತ್ರೆಗೆ ಹೋಗ್ತೀನಿ ನಿಮಗಾಗಿ
ಉರಿ ಗೆಜ್ಜೆ ಗಂಟೆ ತರುತ್ತೀನಿ
ಉರಿ ಗೆಜ್ಜೆ ಗಂಟೆ ತರುತ್ತೀನಿ

ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಗೋಲು
ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಗೋಲು
ಬಂಗಾರದಾ ಸೆಡ್ಡೆ ಬಲಗೈಲಿ
ಬಂಗಾರದಾ ಸೆಡ್ಡೆ ಬಲಗೈಲಿ ಹಿಡಕೊಂಡು
ಹೊನ್ನ ಬಿತ್ಯಾರೋ ಹೊಲಕೆಲ್ಲ
ಹೊನ್ನ ಬಿತ್ಯಾರೋ ಹೊಲಕೆಲ್ಲ

ಆ ವರ್ಷ ಹಂಗಾತು ಈ ವರ್ಷ ಹಿಂಗಾತು
ಆ ವರ್ಷ ಹಂಗಾತು ಈ ವರ್ಷ ಹಿಂಗಾತು
ಮುಂದಿನ ವರುಷ ಬೆಳೆ ಬರಲು
ಮುಂದಿನ ವರುಷ ಬೆಳೆ ಬರಲು ಬಸವಣ್ಣ
ಕೊರಳಾಗ ಬಂಗಾರದ ಸಿರಿ ಗೆಜ್ಜೆ
ಕೊರಳಾಗ ಬಂಗಾರದ ಸಿರಿ ಗೆಜ್ಜೆ

ಆ ತೇರು ಈ ತೇರು ಜ್ಯೋತಿರ್ಲಿಂಗನ ತೇರು
ಆ ತೇರು ಈ ತೇರು ಜ್ಯೋತಿರ್ಲಿಂಗನ ತೇರು
ಅಪ್ಪ ಕಳಿಸಯ್ಯ ಹೊಸ ತೇರು
ಅಪ್ಪ ಕಳಿಸಯ್ಯ ಹೊಸ ತೇರು ಬರುವಾಗ
ಆಕಾಶದ ಗಂಟೆ ನುಡಿದಾವೋ
ಆಕಾಶದ ಗಂಟೆ ನುಡಿದಾವೋ

ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಗೋಲು
ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಗೋಲು
ಬಂಗಾರದಾ ಸೆಡ್ಡೆ ಬಲಗೈಲಿ
ಬಂಗಾರದಾ ಸೆಡ್ಡೆ ಬಲಗೈಲಿ ಹಿಡಕೊಂಡು
ಹೊನ್ನ ಬಿತ್ಯಾರೋ ಹೊಲಕೆಲ್ಲ
ಹೊನ್ನ ಬಿತ್ಯಾರೋ ಹೊಲಕೆಲ್ಲ
ಹೊನ್ನ ಬಿತ್ಯಾರೋ ಹೊಲಕೆಲ್ಲ


#janapada #janapadageetegalu #kannadafolksongs #folksong #farmersong #BellaneEradettu
#kannadajanapada #MelodiousKannadaSong #SrideviNachiket #CelebrateKannada #ಸುಮಧುರಗೀತೆಗಳು #ಜನಪದಗೀತೆಗಳು #ಜನಪದ #ರೈತನಜನಪದಗೀತೆ #ಕನ್ನಡಜನಪದಗೀತೆ
#ಬೆಳ್ಳಾನೆಎರಡೆತ್ತು #ಶ್ರೀದೇವಿನಚಿಕೇತ #ಸೆಲೆಬ್ರೇಟ್ಕನ್ನಡ

Комментарии

Информация по комментариям в разработке