ಬಂದಾಳು ನಮ್ಮ ಮನೆಗೆ | Bandalu namma maanege with kannada lyrics | Purandara Dasaru | Varamahalakshmi

Описание к видео ಬಂದಾಳು ನಮ್ಮ ಮನೆಗೆ | Bandalu namma maanege with kannada lyrics | Purandara Dasaru | Varamahalakshmi

#bhajane #daasarapadagalu #varamahalakshmiSpecial #PurandaraDasaru

ಬಂದಾಳು ನಮ್ಮ ಮನೆಗೆ
ಶ್ರೀ ಮಹಾಲಕ್ಷ್ಮಿ ಸಂಜೆಯ ಹೊತ್ತಿನಲಿ||
ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲ್ಲಿ
ನಂದ ಕಂದನ ರಾಣಿ ಇಂದಿರೇಶನ ಸಹಿತ||

ಹೆಜ್ಜೆ ಮೇಲೆ ಹೆಜ್ಜೆ ಇಕ್ಕುತ
ಗೆಜ್ಜೆಯ ಕಾಲು ಘಲ್ಲು ಘಲ್ಲು ರೆನ್ನುತ್ತ|
ಮೂರ್ಜಗ ಮೋಹಿಸುತ ಮುರಹರನ ರಾಣಿಯು
ಸಂಪತ್ತು ಕೊಡಲಿಕ್ಕೆ ಶ್ರೀನಿವಾಸನ ಸಹಿತ||

ಮಾಸ ಶ್ರಾವಣ ಮಾಸವು
ಶುಕ್ರವಾರ ಪೌರ್ಣಮಿ ದಿನದಲ್ಲಿ
ಭೂಸುರರೆಲ್ಲ ಸೇರಿ ಸಾಸಿರ ನಾಮ ಪಾಡಿ
ವಾಸವಾಗಿರಲಿಕ್ಕೆ ವಾಸುದೇವನ ಸಹಿತ||

ಕನಕವಾಯಿತು ಮಂದಿರ ಜನನಿ ಬರಲು
ಜಯ ಜಯ ಜಯವೆನ್ನಿರೋ
ಸನಕಾದಿ ಮುನಿಗಳ ಸೇವೆಯನು ಸ್ವೀಕರಿಸಿ
ಕನಕವಲ್ಲಿಯು ತನ್ನ ಕಾಂತನ ಕರೆದುಕೊಂಡು||

ಉಟ್ಟ ಪೀತಾಂಬರವು ಹೊಳೆಯುತ್ತಾ
ತೊಟ್ಟ ಕಂಕಣ ಕೈ ಪಿಡಿಯುತ್ತಾ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ
ಪಟ್ಟದರಸಿ ನಮಗೆ ಇಷ್ಟಾರ್ಥ ಕೊಡಲಿಕ್ಕೆಂದು||

Комментарии

Информация по комментариям в разработке