"ಹೇಳಿ ಹೋಗು ಕಾರಣ" / Heli Hogu Karana

Описание к видео "ಹೇಳಿ ಹೋಗು ಕಾರಣ" / Heli Hogu Karana

"ಹೇಳಿ ಹೋಗು ಕಾರಣ"
By ರವಿಬೆಳಗೆರೆ

"ಪ್ರೀತಿ ಹುಟ್ಟೋಕೆ ಕಾರಣ ಬೇಕಾಗಲ್ಲಾ, ಆದರೆ ಪ್ರೀತಿಸಿದವರಿಂದ ದೂರ ಹೋಗಬೇಕಾದರೆ ಕಾರಣಗಳಿಗೆ ಮೀತಿಯೇ ಇರೋದಿಲ್ಲ". "ಹೇಳಿ ಹೋಗು ಕಾರಣ" ಇದೊಂದು ಭಾವ ಪರವಶದಿಂದ ಕೂಡಿದ ಪ್ರೇಮ ಕಾದಂಬರಿ.
ಅಕ್ಷರ ರಾಕ್ಷಸರಾದ ಬೆಳಗೆರೆ ಪ್ರತಿಯೊಂದು ಸಂದರ್ಭವನ್ನು ನೈಜತೆಯಿಂದ ಬಿಂಬಿಸಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ, ರವಿ ಬೆಳಗೆರೆ ಅವರ ರಾಕ್ಷಸತ್ವದ ಬರಹವನ್ನು ಕಾಣಬಹುದು. ಬೇಷರತ್ತಾಗಿ, ನಿರಂತರವಾಗಿ, ದೈವೀ ಭಾವವಾಗಿ ಪ್ರೀತಿಸಿದ್ದು ಹಿಮವಂತ, ತಾನು ಮಾಡುವ ಕೆಲಸಗಳಿಗೆ ಕಾರಣವಿಲ್ಲದೆ ದ್ವಂದ್ವದ ಬದುಕನ್ನು ಕಟ್ಟಿಕೊಳ್ಳಲು ಹೊರಟವಳು ಆ ನಿರ್ದಯಿ ಹುಡುಗಿ ಪ್ರಾರ್ಥನಾ. ಇವರುಗಳ ಮಧ್ಯೆ ನಿಷ್ಠೆಯಂತೆ ಕಂಡದ್ದು ಉರ್ಮಿಳಾವಾದರೆ, ಶ್ರೀಮಂತ ಬದುಕಿನ ಮಧ್ಯೆದಲ್ಲಿ ಪ್ರೀತಿಯ ಬಲೆಯನ್ನು ಕಟ್ಟಿದವನು ದೇಬೂ. ಗೆಳೆಯನಾಗಿ ಹಿಮವಂತನ ಶ್ರಮಕ್ಕೆ ರಸೂಲ್ ನಿಂತರೆ, ಹಿಮವಂತನನ್ನು ದೈವತ್ವದಂತೆ ಕಾಣುವವಳು ಕಸೂತಿ ಕಾವೇರಮ್ಮ.
ಪ್ರಸ್ತುತ ಈ ಕಾದಂಬರಿಯು ಪ್ರೀತಿ, ಕಾಮ, ತ್ಯಾಗ, ನೋವು, ದ್ವೇಷ, ಜೀವನ, ಜವಾಬ್ದಾರಿ ಮತ್ತು ಸಂಬಂಧಗಳ ಮಧ್ಯೆ ಚಲಿ‌ಸುತ್ತದೆ‌‌. ರೋಚಕ ತಿರುವುಗಳ ಜೊತೆ ಭಯನಕವಾದ ಘಟ್ಟಗಳು, ಗದ್ಗದಿತವಾದ ಸನ್ನಿವೇಶಗಳು ಓದುಗರನ್ನು ಸೆಳೆಯುತ್ತದೆ. ಪ್ರೇಯಸಿಯಲ್ಲಿ ತಾಯಿಯ ಮಮತೆ ಕಾಣುವ ಸಂದರ್ಭ ಎರಡು ನಿಮಿಷ ನಮ್ಮನ್ನು ಮೌನಿಯಾಗಿ ಮಾಡಿಬಿಡುತ್ತದೆ. ಕಟ್ಟಿದ ಆಸ್ಪತ್ರೆ ಕನಸಾಗಿಯೇ ಉಳಿದಿದೆ, ಹಿಮವಂತನ ಪ್ರೀತಿ ದಿಗ್ಭ್ರಮೆಯ ಶೋಕ ಸಾಗರದಲ್ಲಿ ಮುಳುಗಿದೆ. ಕಾದಂಬರಿಯ ಅಂತ್ಯದಲ್ಲಿ ಕಣ್ಣಂಚಿನಲ್ಲಿ ಹನಿಯಾಗಿ ಜಾರುವುದಂತೂ ಖಚಿತ. ಪ್ರತಿ ಹದಿಹರೆಯದವರು ಓದಲೇ ಬೇಕಾದ ಕಾದಂಬರಿ.


ಆಡಿಯೋ ಕೃತಿ ಗಳಿಗಾಗಿ

ಮೈಆಡಿಯೋಬಿಟ್ಸ್
ಜಾಗತಿಕ ಧ್ವನಿ ಪುಸ್ತಗಳ ಗ್ರಂಥಾಲಯ

"ಮೊದಲ ರೀಜಿಸ್ಟರ್ ಗ್ರಾಹಕರಿಗೆ 7 ದಿನಗಳು ಎಲ್ಲಾ ಆಡಿಯೋ ಪುಸ್ತಕಗಳು ಪೂರ್ತಿ ಉಚಿತ🎧📖👍🏻"

Android App : https://play.google.com/store/apps/de...

iOS App: https://apps.apple.com/in/app/myaudio...

Website
http://web.myaudiobits.com
#audiobooks #audiostories #Audio_Book #BookTalk #Read
#books #publishing #writing
#freeaudiobooks #kannadaaudiobook #kannada #kannadaliterature #kannadanews #ravibelagere

Комментарии

Информация по комментариям в разработке