" ಹಸಿ ತೊಗರಿ ಉಂಡೆ ಸಾರು " ಮದುವೆ ಸಾಂಬಾರ್. ದೇವಸ್ಥಾನದ ಸಾಂಬಾರ್. ದಿಢೀರ್ ಸಾಂಬಾರ್. ತಮಿಳುನಾಡು ಸಾಂಬಾರ್

Описание к видео " ಹಸಿ ತೊಗರಿ ಉಂಡೆ ಸಾರು " ಮದುವೆ ಸಾಂಬಾರ್. ದೇವಸ್ಥಾನದ ಸಾಂಬಾರ್. ದಿಢೀರ್ ಸಾಂಬಾರ್. ತಮಿಳುನಾಡು ಸಾಂಬಾರ್

ಹಸಿ ತೊಗರಿ ಉಂಡೆ ಸಾರು. ಪೌಷ್ಟಿಕ, ಆರೋಗ್ಯಕರ, ಋತುಮಾನದ ಸಾರು. ಸಸ್ಯಹಾರಿಗಳಿಗೆ ನಾನ್ ವೆಜ್ ರುಚಿ.
1) ತೊಗರಿ ಉಂಡೆಗೆ ಬೇಕಾದ ಸಾಮಗ್ರಿಗಳು

1 ಕಪ್ ಹಸಿ ತೊಗರಿ ಕಾಳು
2" ಹಸಿ ಶುಂಠಿ
3-4 ಹಸಿಮೆಣಸಿನಕಾಯಿ
6-7 ಬೆಳ್ಳುಳ್ಳಿ ಏಸಳು
1/4 ಚಮಚ ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು
ಎಲ್ಲವನ್ನು ಮಿಕ್ಸಿಗೆ ಹಾಕಿ ತರಿತರಿ ರುಬ್ಬಿ ಪ್ಲೇಟಿಗೆ ಹಾಕಿ ಅದಕ್ಕೆ 2 ಚಮಚ ಕಡ್ಲೆ ಬೇಳೆ ಹಿಟ್ಟು ಸೇರಿಸಿ ಚೆನ್ನಾಗಿ ಕಳಿಸಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಬೇಕು.

2) ರುಬ್ಬುವ ಮಸಾಲಕ್ಕೆ ಬೇಕಾಗುವ ಸಾಮಗ್ರಿಗಳು

2 ಚಮಚ ಎಣ್ಣೆ
1 ಚಮಚ ಸಾಸಿವೆ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
2 ಚಮಚ ಒಣ ಕೊಬ್ಬರಿ ತುರಿ
1 ಚಮಚ ಗಸಗಸೆ
1( ಮೀ ) ಈರುಳ್ಳಿ ಸಣ್ಣಗೆ ಹೆಚ್ಚಿದ್ದು
2 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
ಎಲ್ಲವನ್ನು ಹುರಿದು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು

3) ಹುಂಡಿ ಸಾರು ಮಾಡುವ ವಿಧಾನ

ಬಾಣಲಿಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿದ ನಂತರ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಹುರಿದು ಅರ್ಧ ಲೀಟರ್ ನೀರು ಸೇರಿಸಿ, ಕುದಿಸಿ ನಂತರ '1 ಚಮಚ ಕಾರದಪುಡಿ ' 1 ಚಮಚ ದನಿಯಪುಡಿ' 2 ಪಲಾವ್ ಎಲೆ ,1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಿಸಿ ಚೆನ್ನಾಗಿ ಕುದಿಸಿ ನಂತರ ಬೇಕಾಗುವಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ ( ಅಂದಾಜು ಒಂದು ಲೀಟರ್ ನೀರು) ಕೊನೆಗೆ '1/2 ಚಮಚ ಗರಂ ಮಸಾಲ ' ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಮುಚ್ಚಳ ಮುಚ್ಚಿ ಕುದಿಸಿದರೆ " ಹಸಿ ತೊಗರಿ ಕಾಳು ಉಂಡೆ ಸಾರು " ರೊಟ್ಟಿ, ಕಟಗುರೊಟ್ಟಿ , ಚಪಾತಿ ಜೊತೆ ಸವಿಯಲು ಸಿದ್ದ.

Комментарии

Информация по комментариям в разработке