ಜಗದಂಬೆಗೆ ಆರತಿ

Описание к видео ಜಗದಂಬೆಗೆ ಆರತಿ

ಸಂಗೀತ ಮತ್ತು ಗಾಯನ ದತ್ತಾತ್ರೇಯ
ರಚನೆ ಅಚ್ಯುತ ಕುಲಕರ್ಣಿ

||ಜಗದಂಬೆಗೆ ಆರತಿ||

ಶಿವನ ಜೊತೆಯಲಿ ಸುಶೋಭಿತ
ನನ್ನಮ್ಮ ಪಾರ್ವತಿಗಿಂದು ಆರತಿ. |ಪ|

ದುರ್ಗೆಯ ರೂಪದಲಿ ಅವತರಿಸಿ
ರಕ್ಕಸ ಸಂಹಾರಕೆಂದು ಧರೆಗಿಳಿದೆ
ಜಗದಿ ದುಷ್ಟಶಕ್ತಿಗಳ ನಾಶಮಾಡಿ
ಶಾಂತಿ ತಂದದವಳಿಗೆ ಆರತಿಗೈದೆ. |1|

ನಾರಿಶಕ್ತಿಯ ರೂಪವ ತೋರುತ
ಕಾಳಿಯಾಗಿ ಮೆರೆದೆಯಮ್ಮ ನೀನು
ಸೃಷ್ಟಿಕರ್ತೆಯ ಮಹಿಮೆ ತೋರಿದ
ನಿನಗೆ ಆರತಿಯನು ಬೆಳಗುವೆನು. |2|

ಅನ್ನಪೂರ್ಣೇಶ್ವರಿಯ ರೂಪದಲಿ
ಜಗದಲಿ ದಯಾದೃಷ್ಟಿಯ ಬೀರಿದೆ
ಲೋಕದಲ್ಲಿ ಸುಖಶಾಂತಿ ಹರಿಸಿದ
ಮಮತಾಸಿರಿಗೆ ಆರತಿಯ ಬೆಳಗಿದೆ. |3|

ಗೊತ್ತು ಭುವನೇಶ್ವರಿಯು ನೀನಮ್ಮ
ಸರ್ವಸ್ವರೂಪಿಣಿ ಅಮ್ಮ ಜಗದಂಬೆ
ಸದಾ ಮಹಿಮೆಯ ತೋರಿದವಳಿಗೆ
ಬೆಳಗಿದೆ ಆರತಿ ಭಕ್ತಿಯಲಿ ಅಂಬೆ. |4|

ರಚನೆ ಅಚ್ಯುತ ಕುಲಕರ್ಣಿ

Комментарии

Информация по комментариям в разработке