Kannada Nadina Jeevanadi Kaveri - HD Video Song - Jeevanadi | Dr.Vishnuvardhan | Kushboo | SPB

Описание к видео Kannada Nadina Jeevanadi Kaveri - HD Video Song - Jeevanadi | Dr.Vishnuvardhan | Kushboo | SPB

Jeeva Nadi Kannada Movie Song: Kannada Nadina Jeevanadi Ee Kaveri - HD Video
Actor: Vishnuvardhan, Kushboo
Music: Koti
Singer: S. P. Balasubrahmanyam
Lyrics: R N Jayagopal
Year :1996

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Jeevanadi – ಜೀವನದಿ 1996*SGV

Kannada Nadina Jeevanadi Ee Kaveri Song Lyrics In Kannada:

ಗಂಡು : ಆಆ.. ಆಆ.. ಆಆಆ.... ಆಆಆಅ .... ಅಅ... ಅಅ... ಅಅ... ಅಅ...
ಅಅ... ಅಅ... ಅಅ... ಅಅ... ಆಆಹ್
ಕೋರಸ್ : ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನಿ ಪುಣ್ಯನದಿ
ಬಳುಕುತ ಕಲುಕುತ ಹರುಷವ ಚೆಲ್ಲುತ ಸಾಗುವ ಪುಣ್ಯನದಿ
ತಾ ಇಟ್ಟ ಹೆಜ್ಜೆಗೆ ಅಮೃತ ಹರಿಸಿ ಕಾಯುವ ಭಾಗ್ಯನದಿ ...
ಗಂಡು : ಕನ್ನಡ ನಾಡಿನ ಜೀವನದಿ ಈ ಕಾವೇರಿ ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ .. ಒಹ್.. ಒಹ್.. ಒಹ್.. ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ... ಸಂತೋಷದ ಸಕ್ಕರೆ..
ಮಮತೆಯ ಮಾತೆಗೆ.. ಭಾಗ್ಯದ ಧಾತೆಗೆ...ಮಾಡುವೇ... ಭಕ್ತಿಯ ವಂದನೆ.. ಓಹ್ ಹ.. ಹ ..
ಕನ್ನಡ ನಾಡಿನ ಜೀವನದಿ ಈ ಕಾವೇರಿ ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ

ಕೋರಸ್ : ಹೂಹೂಹೂಹೂಹೂಹೂಹೂಹೂಹೂಹೂಹೂ ಹೂಹೂಹೂಹೂಹೂಹೂ
ಗಂಡು : ಕೊಡಗಲಿ ನೀ ಹುಟ್ಟಿ ಹರಿಯುವೆ ನದಿಯಿಂದ ತರುತಲಿ ಎಲ್ಲೆಲ್ಲೂ ಆನಂದ...
ಹಸುರಿನ ಬೆಳೆ ತಂದು ಕುಡಿಯುವ ಜಲ ತಂದು ಚೆಲ್ಲಿದೆ ನಗೆ ಎಂಬ ಶ್ರೀಗಂಧ
ಧುಮುಕುತ ವೇಗದ ಜಲಪಾತದಲಿ... ವಿದ್ಯುತ ನೀಡುವೇ
ಬಯಲಲಿ ಕಾಡಲಿ ಕಲ ಕಲ ಹರಿಯುತ... ನಾಟ್ಯವ ಮಾಡುವೇ
ಮಂದಗಾಮಿನಿ.. ಶಾಂತಿವಾಹಿನಿ ..
ಚಿರ ನೂತನ ಚೇತನ ಧಾತೆಯು ನೀನೆ ದಕ್ಷಿಣ ಮಂದಾಕಿನಿ
ಕನ್ನಡ ನಾಡಿನ ಜೀವನದಿ ಈ ಕಾವೇರಿ ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ

ಕೋರಸ್ : ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಗಂಡು : ಹುಟ್ಟುವ ಕಡೆ ಒಂದು.. ಫಲ ಕೊಡೊ ಕಡೆ ಒಂದು ಸಾಗರದಲ್ಲಿ ನದಿಗೆಂದು ಸಂಗಮವೂ...
ತವರಿನ ಮನೆಯೊಂದು ಗಂಡನ ಮನೆಯೊಂದು ಹೆಣ್ಣಿಗೆ ಇದೆ ಎಂದು ಜೀವನವೂ
ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವೂ...
ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೇ ಸಂತೋಷವೂ
ಮನೆಯ ದೀಪವು.. ಬಾಳ ಸಂಗೀತವು
ಮನ ಮೆಚ್ಚಿದ ಮಡದಿಯು ಸಿಕ್ಕಿದ ಮೇಲೆ ಸ್ವರ್ಗ ಸಂಸಾರವೂ
ಕನ್ನಡ ನಾಡಿನ ಜೀವನದಿ ಈ ಕಾವೇರಿ ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ
ಅನ್ನವ ನೀಡುವ ದೇವನದಿ ಈ ವಯ್ಯಾರಿ .. ಒಹ್.. ಒಹ್.. ಒಹ್.. ದೇವನದಿ ಈ ವಯ್ಯಾರಿ
ಈ ತಾಯಿಯು ನಕ್ಕರೆ... ಸಂತೋಷದ ಸಕ್ಕರೆ..
ಮಮತೆಯ ಮಾತೆಗೆ.. ಭಾಗ್ಯದ ಧಾತೆಗೆ...
ಮಾಡುವೇ... ಭಕ್ತಿಯ ವಂದನೆ.... ಓಹ್ ಹ.... ಹ ..

Комментарии

Информация по комментариям в разработке