Sreemanta Show in Dubai | Saadukokila | Hassan Ramesh | Anna Takies

Описание к видео Sreemanta Show in Dubai | Saadukokila | Hassan Ramesh | Anna Takies

ಬಾಲಿವುಡ್ ಸ್ಟಾರ್ ಸೋನು ಸೂದ್ ನಟಿಸಿರುವ, ಹಾಸನ್ ರಮೇಶ್ ನಿರ್ದೇಶನದ ‘ಶ್ರೀಮಂತ’ ಚಿತ್ರದ ವಿಶೇಷ ಪ್ರದರ್ಶನ ಸೆ.29ರಂದು ದುಬೈನಲ್ಲಿ ನಡೆಯಿತು. ದುಬೈನ ಅಲ್ ಘರೈರ್ ಸೆಂಟರ್ ನಲ್ಲಿ ಸೆ.29ರ ಮ.2ಗಂಟೆಗೆ ನಡೆದ ಶ್ರೀಮಂತ ಚಿತ್ರದ ಸ್ಪೆಷಲ್ ಶೋಗೆ ಸಂಗೀತ ನಿರ್ದೇಶಕ ಹಾಗು ನಟ ಸಾಧು ಕೋಕಿಲ, ನಿರ್ದೇಶಕ ಹಾಗು ನಿರ್ಮಾಪಕರಾದ ಹಾಸನ್ ರಮೇಶ್, ನಿರ್ಮಾಪಕ ಸಂಜಯ್ ಬಾಬು, ನಟ ಕ್ರಾಂತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಮ್ಮ ರೈತರ ಪರಿಶ್ರಮ, ಬದುಕು ಬವಣೆ ಹಾಗೂ ಹೋರಾಟದ ಕಥನವನ್ನು ಒಳಗೊಂಡ ಈ ಚಿತ್ರವನ್ನು ದುಬೈನ ಖ್ಯಾತ ವೈದ್ಯರಾದ ಡಾ. ರಶ್ಮಿ ನಂದ ಕಿಶೋರ್, ದುಬೈ ಕನ್ನಡ ಮಿತ್ರರು UAE ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಹಾಗೂ ವೀಕ್ಷಕರಿಂದ ಅಪಾರ ಪ್ರಶಂಸೆ ಗಳಿಸಿ ಯಶಸ್ವಿ ಪ್ರದರ್ಶನ ಕಂಡಿತು. ಸೋನು ಸೂದ್ ಅಭಿನಯ ಹಾಗೂ ಹಂಸಲೇಖ ಅವರ ಸಾಹಿತ್ಯ, ಸಂಗೀತದ ಹಾಡುಗಳು ಶ್ರೀಮಂತ ಚಿತ್ರದ ಹೈಲೈಟ್ ಆಗಿತ್ತು. ಈ ವಿಶೇಷ ಪ್ರದರ್ಶನವನ್ನು ದುಬೈನ ಖ್ಯಾತ ವಿತರಕರಾದ OMG ಸಂಸ್ಥೆಯ ಸೆಂಥಿಲ್, ಮಮತ ಆಯೋಜಿಸಿದ್ದರು.

Комментарии

Информация по комментариям в разработке