ಪತಿಯ ಹೆಸರನ್ನ ಸತಿಯು ನಾಚುತ, ಒಡಪು ಹಾಕಿ ಹೇಳುವುದೇ ಚಂದ...😊😊😊😊❤❤❤❤

Описание к видео ಪತಿಯ ಹೆಸರನ್ನ ಸತಿಯು ನಾಚುತ, ಒಡಪು ಹಾಕಿ ಹೇಳುವುದೇ ಚಂದ...😊😊😊😊❤❤❤❤

ನಮ್ಮ ಹಳ್ಳಿಗಳಲ್ಲಿ ಗಂಡನ ಹೆಸರನ್ನು ಒಡಪು ಹಾಕಿ ಹೇಳುವ ಪದ್ದತಿ‌ ಇನ್ನೂ ಕೆಲವು ಕಡೆಗೆ ಇದೆ, ಹೇಳುವವರಿಗೆ ಮನದೊಳಗೆ ಗಂಡನ ಹೆಸರು ಹೇಳುವಾಗ ಆಗುವ ಖುಷಿ, ಕೇಳುವವರು ಇನ್ನೊಮ್ಮೆ ಹೇಳ್ರಿ ಕೇಳಸಲಿಲ್ಲ ಅಂತ ಕಾಡಿಸೋದು,

ಹಗ್ಗದಲೆ ಬಡದ್ರ ಮಗ್ಗಲಕ್ಕ ಬರತಾಳ....

ಸಪ್ಪಳಿಲ್ಲದ ಹಪ್ಪಳ ತಿಂತಾಳ.....

ಗ್ವಾದಲ್ಯಾಗ ಕುಂತ ಮಾದಲಿ ತಿಂತಾರ.....

ಕಟಕ ರೊಟ್ಟಿ, ತಟಕ ಎಣ್ಣಿ ಕಟಗೊಂಡ ಹೋಗಂದ್ರ ಶೆಟಗೊಂಡ ಹೊಕ್ಕಾರ........

❤️✍🏻: ಭಾರತದ ಧ್ವಜದಲ್ಲಿರುವುದು ಅಶೋಕ ಚಕ್ರ
ಗತಿ ಇಲ್ಲದೆ ತಿರುಗುವುದು ಕಾಲಚಕ್ರ
------- ಅವರೇ ನನ್ನ ಭಾಗ್ಯ ಚಕ್ರ....

❤️✍🏻: ಶ್ರಾವಣ ಮಾಸದಲ್ಲಿ ಬರುವುದು ಮಳಿ (ಹೊಳಿ)
ಬಾಳಿ ಗಿಡದಾಗಿರುವುದು ಸುಳಿ
------ ಅವರ ತೊಡಿ ಮ್ಯಾಲ ಅರಗಿಳಿ

❤️✍🏻: ಅಕ್ಕಮಹಾದೇವಿ ಶ್ರೀಶೈಲ ಬೆಟ್ಟ ಏರಿದ್ದು ಕೌಶಿಕನ ನಿಗ್ರಹಕ್ಕಾಗಿ , ----- ಅವರ ಹೆಸರ ಹೇಳುವೆ ನಿಮ್ಮೆಲ್ಲರ ಆಗ್ರಹಕ್ಕಾಗಿ..

❤️✍🏻: ಹಿಂದೂಸ್ತಾನಕ್ಕೆ ಪ್ರಸಿದ್ಧವಾದದು ಜೈಮಿನಿ
------ಅವರ ಸದ್ಗುಣವೇ ನನ್ನ ತವರುಮನಿ

❤️✍🏻: ದಶರಥ, ಶ್ರೀರಾಮ ಚಂದ್ರನಿಗೆ ಕಟ್ಟಬೇಕೆಂಬುದು ಯುವರಾಜ ಪಟ್ಟ, ಆ ಕಾಲಕ್ಕೆ ಪ್ರಜೆಗಳು ಹೊಂದಿದರು ಸಂತೃಷ್ಟ.......ಅವರ ಹೆಸರು ಹೇಳುವೆನು ಕನ್ನಡ ನುಡಿಯೇ ಶ್ರೇಷ್ಠ....💛❤️

ಬಹಳ ಇವೆ....ನೀವು ನೋಡಿ ಒಡಪು ಹಾಕಿ ಪತಿಯ ಹೆಸರು ಹೇಳಿ...

Комментарии

Информация по комментариям в разработке