ವಿಶಿಷ್ಟ ಫೀಚರ್ ಗಳುಳ್ಳ, ಆಕರ್ಷಕ ಸ್ಟೈಲ್ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಒದಗಿಸುವ ಎಕ್ಸ್‌ಯುವಿ 3ಎಕ್ಸ್ಓ ‘ರಿವ್ಎಕ್ಸ್’ ಸರಣಿಯನ್ನು ಬಿಡುಗಡೆ ಮಾಡಿದ ಮಹೀಂದ್ರಾ; ಆರಂಭಿಕ ಬೆಲೆ ₹8.94 ಲಕ್ಷ
● ಕಾರಿನ ದೇಹದ ಬಣ್ಣದ ಗ್ರಿಲ್, ಕಪ್ಪು ಅಲಾಯ್ ಚಕ್ರಗಳು, ಡ್ಯುಯಲ್-ಟೋನ್ ರೂಫ್ ಮತ್ತು ವಿಶಿಷ್ಟ ಬ್ಯಾಡ್ಜಿಂಗ್ ಹೊಂದಿದ್ದು ಆಕರ್ಷಕ ಹೊಸ ಬಾಹ್ಯರೂಪವನ್ನು ಗಳಿಸಿದೆ.
● 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಸಿ-ಎಸ್‌ಯುವಿ ವಿಭಾಗದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯವನ್ನು ನೀಡುವ ಲೆದರೆಟ್ ಸೀಟ್ ಗಳು ಮತ್ತು ಸನ್‌ರೂಫ್ ಹೊಂದಿದ್ದು, ಪ್ರೀಮಿಯಂ ಒಳಾಂಗಣ ದೊರೆಯಲಿದೆ.
ಬೆಂಗಳೂರು ಜುಲೈ 26, 2025: ಭಾರತದ ಪ್ರಮುಖ ಎಸ್‌ಯುವಿ ತಯಾರಕ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಕಂಪನಿ ಇಂದು ಅತ್ಯುತ್ತಮ ಫೀಚರ್ ಗಳುಳ್ಳ, ಆಕರ್ಷಕ ವಿನ್ಯಾಸ ಮತ್ತು ಅಪೂರ್ವ ಕಾರ್ಯಕ್ಷಮತೆ ಹೊಂದಿರುವ ತನ್ನ ಹೊಸ ಆಕರ್ಷಕ ಎಕ್ಸ್‌ಯುವಿ 3ಎಕ್ಸ್ಓ ‘ರಿವ್ಎಕ್ಸ್’ ಸರಣಿಯನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋರೂಮ್ ಬೆಲೆ ₹8.94 ಲಕ್ಷ ಆಗಿದೆ.
ಎಕ್ಸ್‌ಯುವಿ 3ಎಕ್ಸ್ಓ ಇತ್ತೀಚೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಮಾರಾಟವಾಗಿರುವ ಮೈಲಿಗಲ್ಲು ಸಾಧನೆ ಮಾಡಿದೆ. ಇದು ಅತಿ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ಮಹೀಂದ್ರಾದ ಎಸ್‌ಯುವಿ ಆಗಿದೆ. ರಿವ್ಎಕ್ಸ್ ಸರಣಿಯು ಪ್ರೀಮಿಯಂ ವೈಶಿಷ್ಟ್ಯಗಳು, ವಿಶಿಷ್ಟ ಸ್ಟೈಲ್ ಮತ್ತು ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು ಎಕ್ಸ್‌ಯುವಿ 3ಎಕ್ಸ್ಓ ಸರಣಿಯನ್ನು ಉನ್ನತೀಕರಿಸಿದೆ. ವಿಶೇಷವಾಗಿ ಗ್ರಾಹಕರ ಆಕಾಂಕ್ಷೆಗಳಿಗೆ ತಕ್ಕಂತೆ ಮೌಲ್ಯವನ್ನು ನೀಡುತ್ತದೆ.
ತಮ್ಮ ವೈಯಕ್ತಿಕ ಸ್ಟೈಲ್ ಅನ್ನು ಪ್ರತಿಬಿಂಬಿಸುವ ವಾಹನಗಳನ್ನು ಬಯಸುವ ವ್ಯಕ್ತಿಗಳಿಗೆ ಸೂಕ್ತವಾಗಿ ರೂಪುಗೊಂಡಿರುವ ರಿವ್ಎಕ್ಸ್ ಸರಣಿಯು ವೈಯಕ್ತಿಕ ಅಭಿವ್ಯಕ್ತಿಯನ್ನು ಸಂಭ್ರಮಿಸುತ್ತದೆ. ಏಕೆಂದರೆ ಇದು ವಿಭಿನ್ನವಾಗಿ ಕಾಣುವ ಆಕಾಂಕ್ಷೆ ಹೊಂದಿರುವವರಿಗೆ ಇಷ್ಟವಾಗುವ "ವಿಭಿನ್ನತೆಯನ್ನು ಹೊಂದಿದೆ."
ರಿವ್ಎಕ್ಸ್ ಸರಣಿಯ ವಿಶೇಷತೆಗಳು:
• ರಿವ್ಎಕ್ಸ್ ಎಂ (ಎಕ್ಸ್-ಶೋರೂಮ್ ಬೆಲೆ: ₹8.94 ಲಕ್ಷ) – ಈ ವೇರಿಯೆಂಟ್ 1.2L ಎಂಸ್ಟಾಲ್ಲನ್ ಟಿಸಿಎಂಪಿಎಫ್ಐ ಎಂಜಿನ್‌ನಿಂದ
ಚಾಲಿತವಾಗಿದ್ದು, 82 ಕೆಡಬ್ಲ್ಯೂ ಶಕ್ತಿ ಮತ್ತು 200 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ. ಆಕರ್ಷಕ ಬಾಹ್ಯರೂಪವನ್ನು ಹೊಂದಿದ್ದು, ಕಾರಿನ ದೇಹದ ಬಣ್ಣದ ಗ್ರಿಲ್, ಪೂರ್ಣ-ಅಗಲದ ಎಲ್ಇಡಿ ಡಿ ಆರ್ ಎಲ್ ಗಳು, ಆರ್16 ಕಪ್ಪು ವೀಲ್ ಕವರ್‌ಗಳು ಮತ್ತು ಡ್ಯುಯಲ್-ಟೋನ್ ರೂಫ್ ಹೊಂದಿದೆ. ಈ ಮೂಲಕ ಗ್ರಾಕರಿಗೆ ಆತ್ಮವಿಶ್ವಾಸ ಮತ್ತು ವಿಶಿಷ್ಟ ಸ್ಟೈಲ್ ಅನ್ನು ಒದಗಿಸುತ್ತದೆ. ಒಳಾಂಗಣದಲ್ಲಿ ಆರಾಮದಾಯಕ ಕಪ್ಪು ಲೆದರೆಟ್ ಸೀಟ್ ಗಳು, 26.03 ಸೆಂ.ಮೀ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೊಂದಿಗೆ ಸ್ಟೀರಿಂಗ್- ಮೌಂಟೆಡ್ ಕಂಟ್ರೋಲ್ ಗಳನ್ನು ಹೊಂದಿದೆ. ಜೊತೆಗೆ ಆನಂದದಾಯಕ ಕ್ಯಾಬಿನ್ ಅನುಭವಕ್ಕಾಗಿ 4-ಸ್ಪೀಕರ್ ಆಡಿಯೊ ಸೆಟಪ್ ನೊಂದಿಗೆ ಬರುತ್ತದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, 35 ಪ್ರಮಾಣಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಇದರಲ್ಲಿ ಆರು ಏರ್‌ಬ್ಯಾಗ್‌ಗಳು, ಇ ಎಸ್ ಸಿ ಜೊತೆಗೆ ಹಿಲ್ ಹೋಲ್ಡ್ ಕಂಟ್ರೋಲ್ (ಎಚ್ ಎಚ್ ಸಿ), ಮತ್ತು 4 ಡಿಸ್ಕ್ ಬ್ರೇಕ್‌ಗಳು ಸೇರಿವೆ.
• ರಿವ್ಎಕ್ಸ್ ಎಂ(ಓ) (ಎಕ್ಸ್-ಶೋರೂಮ್ ಬೆಲೆ: ₹9.44 ಲಕ್ಷ) – ಈ ವೇರಿಯೆಂಟ್ ಸಿಂಗಲ್-ಪೇನ್ ಸನ್‌ರೂಫ್ ನ ಸೇರ್ಪಡೆಯೊಂದಿಗೆ ಅತ್ಯುನ್ನತ ಕ್ಯಾಬಿನ್ ಅನುಭವ ಒದಗಿಸುತ್ತದೆ ಮತ್ತು ರಿವ್ಎಕ್ಸ್ ಎಂ ಗಿಂತ ಒಟ್ಟಾರೆಯಾಗಿ ಹೆಚ್ಚು ಆಕರ್ಷಕ ವಿನ್ಯಾಸವನ್ನು ಹೊಂದಿದೆ.
• ರಿವ್ಎಕ್ಸ್ ಎ (ಎಕ್ಸ್-ಶೋರೂಮ್ ಬೆಲೆ: ₹11.79 ಲಕ್ಷದಿಂದ ಪ್ರಾರಂಭ) – ಈ ವೇರಿಯೆಂಟ್ ಸುಧಾರಿತ 1.2 ಲೀ ಎಂಸ್ಟಾಲ್ಲನ್ ಟಿಜಿಡಿಐ ಎಂಜಿನ್‌ನಿಂದ ಚಾಲಿತವಾಗಿದ್ದು, ವಿಭಾಗದಲ್ಲಿಯೇ ಅತ್ಯುತ್ತಮವಾದ 96 ಕೆಡಬ್ಲ್ಯೂ ಪವರ್ ಮತ್ತು 230 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಎರಡರಲ್ಲೂ ದೊರೆಯುತ್ತದೆ. ಪಾನೋರಮಿಕ್ ಸನ್ ರೂಫ್, ಲೆದರೆಟ್ ಆಸನಗಳು, ಡ್ಯುಯಲ್-ಟೋನ್ ಒಳಾಂಗಣ, ಆಟೋ-ಡಿಮ್ಮಿಂಗ್ ಐ ಆರ್ ವಿ ಎಂ ಇತ್ಯಾದಿಗಳನ್ನು ಒಳಗೊಂಡಂತೆ ಕ್ಯಾಬಿನ್ ಅನುಭವವನ್ನು ಉನ್ನತಗೊಳಿಸುವ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಹೊರಾಂಗಣದಲ್ಲಿ ಇದು ದೇಹದ ಬಣ್ಣದ ಗ್ರಿಲ್, ವಿಶಿಷ್ಟ ಬ್ಯಾಡ್ಜಿಂಗ್, ಆರ್ 16 ಪೇಂಟೆಡ್ ಕಪ್ಪು ಅಲಾಯ್‌ಗಳು, ಮತ್ತು ಡ್ಯುಯಲ್-ಟೋನ್ ರೂಫ್‌ನೊಂದಿಗೆ ರಿವ್ಎಕ್ಸ್ ವಿನ್ಯಾಸದ ಅಂಶಗಳನ್ನು ಹೊಂದಿದೆ. ರಿವ್ಎಕ್ಸ್ ಎಯು ಎರಡು ಎಚ್ ಡಿ ಸ್ಕ್ರೀನ್‌ಗಳನ್ನು ಹೊಂದಿದೆ: ಅದರಲ್ಲಿ ಒಂದು 26.03 ಸೆಂ.ಮೀ ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು 26.03 ಸೆಂ.ಮೀ ಪುಲ್ ಡಿಜಿಟಲ್ ಕ್ಲಸ್ಟರ್ ಆಗಿದೆ. ಇದರ ಜೊತೆಗೆ, ಇದು ಅಡ್ರೆನಾಕ್ಸ್ ಕನೆಕ್ಟ್ ಅನ್ನು ಹೊಂದಿದ್ದು, ಇದರಲ್ಲಿ ಬಿಲ್ಟ್-ಇನ್ ಅಲೆಕ್ಸಾ, ಆನ್ ಲೈನ್ ನ್ಯಾವಿಗೇಷನ್, ಮತ್ತು ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕಾರ್ಯ ನಿರ್ವಹಿಸುತ್ತದೆ. ಆಧುನಿಕ ಚಾಲಕರಿಗೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ.
ರಿವ್ಎಕ್ಸ್ ಸರಣಿಯ ಎಲ್ಲಾ ಮೂರು ವೇರಿಯೆಂಟ್ ಗಳು ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿವೆ, ಆ ಬಣ್ಣಗಳು ಇವು: ಗ್ಯಾಲಕ್ಸಿ ಗ್ರೇ, ಟಾಂಗೋ ರೆಡ್, ನೆಬ್ಯುಲಾ ಬ್ಲೂ, ಎವರೆಸ್ಟ್ ವೈಟ್, ಮತ್ತು ಸ್ಟೆಲ್ತ್ ಬ್ಲ್ಯಾಕ್.
Информация по комментариям в разработке