ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ

Описание к видео ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ ದಿ||14-01-2020 ಸ್ಥಳ: ಕೈಲಾಸ ಮಂಟಪ,ಗವಿಮಠ ಕೊಪ್ಪಳ

ಸಮಾರೋಪ ನುಡಿ : ಡಾ. ಶಂಭು ಬಳಿಗಾರ, ಜಾನಪದ ವಿದ್ವಾಂಸರು, ಇಲಕಲ್ಲ
ದಿನಾಂಕ:14-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ

ಗ್ರಾಮೀಣರ ಜೀವಪರತೆಯ ಬಿಂಬಗಳಾದ ನುಚ್ಚಿನ ಮಲ್ಲಯ್ಯ, ತೊಗರಿ ತಿಪ್ಪ, ಪತಿವ್ರತಾ ನೀಲಮ್ಮ, ಗೋಧಿ ಹುಗ್ಗಿ ಗಂಗಯ್ಯ, ಸೋಮರಾಯ–ಭೀಮರಾಯರಂತಹ ಪಾತ್ರಗಳನ್ನು ಅನುಭವ–ಅನುಭಾವದ ನೆಲೆಯಲ್ಲಿ ಸೃಷ್ಠಿಸಿ ಧ್ವನಿಸುರಳಿಗಳ ರೂಪದಲ್ಲಿ ನಾಲ್ಕು ದಶಕಗಳ ಹಿಂದೆಯೇ ಸಾಗರದಾಚೆಗೂ ತಲುಪಿಸಿದ ಶ್ರೇಯಸ್ಸು ಶಂಭು ಬಳಿಗಾರ ಅವರಿಗೆ ಸಲ್ಲುತ್ತದೆ.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಲ್ಲಿಯೇ ಪಕ್ಕದ ಪಾವಟೆ ನಗರದ ವಿಶ್ವವಿದ್ಯಾಲಯ ಆವರಣದಲ್ಲಿ ಎಂ.ಎ ಪೂರ್ಣಗೊಳಿಸಿದ ಶಂಭುಬಳಿಗಾರ, ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದರು 1975ರಲ್ಲಿ ಇಳಕಲ್ನ ವಿಜಯಮಹಾಂತೇಶ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಬದುಕು ಆರಂಭಿಸಿ, ಆಯ್ಕೆ ಶ್ರೇಣಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಜನಪದ ಕಥೆಗಳನ್ನು ರಸವತ್ತಾಗಿ ಹಾಸ್ಯ ದಾಟಿಯಲ್ಲಿ ಹೇಳುವುದನ್ನು ಹವ್ಯಾಸವಾಗಿ ರೂಢಿಸಿಕೊಂಡ ಶಂಭು ಬಳಿಗಾರವರ ನುಚ್ಚಿನ ಮಲ್ಲಯ್ಯ, ತೊಗರಿ ತಿಪ್ಪ, ಪತಿವ್ರತಾ ನೀಲಮ್ಮ, ಗೋಧಿ ಹುಗ್ಗಿ ಗಂಗಯ್ಯ, ಸೋಮರಾಯ–ಭೀಮರಾಯ ಆಡಿಯೋ ಕ್ಯಾಸೆಟ್‍ಗಳು ಬಿಸಿದೋಸೆಯಂತೆ ಮಾರಾಟವಾಗಿ ಆಡಿಯೋ ಕ್ಯಾಸೆಟ್ ಮಾರಾಟದಲ್ಲಿ ದಾಖಲೆ ನಿರ್ಮಿಸಿದರು. ಇವುಗಳಲ್ಲದೇ ಹಾಲುಂಡ ತವರು, ಕೆರೆಗೆ ಹಾರ, ಮಹಾಂತ ಜೋಳಿಗೆ, ಮದುವೆ ಹಾಡುಗಳು, ಗುರ್ಚಿ-ಗುರ್ಚಿ ಆಡಿಯೋ ಕ್ಯಾಸೆಟ್‍ಗಳು ಕೂಡ ಜಾನಪದ ಲೋಕದಲ್ಲಿ ದಾಖಲೆ ಸೃಷ್ಠಿಸಿವೆ.
ಇವರ ಸಾಹಿತ್ಯ ಸೇವೆಯನ್ನು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಗೌರವ ಸನ್ಮಾನ, ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸನ್ಮಾನ, ಇಳಕಲ್ ಜೇಸಿ ಸಂಸ್ಥೆಯ ಜಾನಪದ ಕಲಾಶ್ರೀ, ಶ್ರೀಶೈಲ ಪೀಠದ ಜನಪದ ಸಾಹಿತ್ಯ ಕಲಾಕುಶಲ ಪ್ರಶಸ್ತಿ, ಚಿತ್ತರಗಿ ಮಠದ ಬಸವಗುರು ಕಾರುಣ್ಯ ಪ್ರಶಸ್ತಿ, ಎಂ.ಪಿ.ಪ್ರಕಾಶ ಪ್ರತಿμÁ್ಠನದ ಜಾನಪದ ಕಲಾಸಿರಿ ಪ್ರಶಸ್ತಿ ಲಭ್ಯವಾಗಿವೆ.

Комментарии

Информация по комментариям в разработке