‘ಲಕ್ಷ್ಮೀ‘ ಪುತ್ರಿಯ ತುಂಟಾಟ! Dharmasthala Baby elephant Shivani new attraction

Описание к видео ‘ಲಕ್ಷ್ಮೀ‘ ಪುತ್ರಿಯ ತುಂಟಾಟ! Dharmasthala Baby elephant Shivani new attraction

ಧರ್ಮಸ್ಥಳ ದೇವಸ್ಥಾನದ ಹೆಣ್ಣಾನೆ ಲಕ್ಷ್ಮೀಯ ಪುತ್ರಿ (ಮರಿ ಆನೆ)ಗೆ ಸೋಮವಾರ ‘ಶಿವಾನಿ’ ಎಂದು ನಾಮಕರಣ ಮಾಡಲಾಯಿತು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ ಬೆಳಿಗ್ಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆನೆ ಮರಿಗೆ ಪ್ರಸಾದ ಹಾಕಿ, ಗಂಟೆ ಕಟ್ಟಿದ ಬಳಿಕ ನಾಮಕರಣ ಶಾಸ್ತ್ರ ನಡೆಸಲಾಯಿತು. ಹೆಗ್ಗಡೆ ಅವರ ಮೊಮ್ಮಗಳು ಮಾನ್ಯ ‘ಶಿವಾನಿ’ ಹೆಸರನ್ನು ಪ್ರಕಟಿಸಿದಳು.
‘ಧರ್ಮಸ್ಥಳದಲ್ಲಿ ಜಾತ್ರೆ, ಉತ್ಸವ ಮೆರವಣಿಗೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಗಜ ಸೇವೆಯನ್ನು ಬಳಸುವುದು ಸಂಪ್ರದಾಯವಾಗಿದೆ. ಈಗಾಗಲೇ ಲತಾ ಮತ್ತು ಲಕ್ಷ್ಮೀ ಎಂಬ ಎರಡು ಆನೆಗಳಿದ್ದು, 2020 ರ ಜುಲೈ 1ರಂದು ಬುಧವಾರ ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿದೆ. ಶಿವನ ಸನ್ನಿಧಿಯಲ್ಲಿ ಇರುವುದರಿಂದ ‘ಶಿವಾನಿ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
‘ಧರ್ಮಸ್ಥಳದಲ್ಲಿರುವ ಆನೆಗಳಿಗೆ ವನ ಸಂಚಾರಕ್ಕೂ ಅವಕಾಶವಿದ್ದು, ಪ್ರಾಕೃತಿಕವಾಗಿ ದೊರಕುವ ಸೊಪ್ಪು, ಹಣ್ಣುಹಂಪಲುಗಳನ್ನು ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದ್ಲಿ ಶಿವಾನಿ ಮುಂದೆ ಅಗಲವಾದ ಬಾಣಲೆ ಮಾದರಿ ಪಾತ್ರದಲ್ಲಿ ತಂದಿಟ್ಟಿದ್ದ ನೀರಿನಲ್ಲಿ ‘ಶಿವಾನಿ’ ನೀರಾಟದ ತುಂಟಾಟವು ಪ್ರೇಕ್ಷಕರ ಕಣ್ಮನ ಸೆಳೆಯಿತು. ಮಾಣಿಲದ ಮೋಹನದಾಸ ಸ್ವಾಮೀಜಿ, ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ಬಿ.ಯಶೋವರ್ಮ ಇದ್ದರು.
Baby Elephant Naming Ceramony at Dharmasthala Manjunatha swamy temple
#Babyelephant #Dharmasthala

Комментарии

Информация по комментариям в разработке