ಮಣ್ಣಿಂದ ಬಂದ ಮನುಜನೆ | Manninda banda manujane | kannada Christian song |

Описание к видео ಮಣ್ಣಿಂದ ಬಂದ ಮನುಜನೆ | Manninda banda manujane | kannada Christian song |

#pastorchandrashekar
Credit : pastor chandrashekar


Lyrics ⬇️ :

ಮಣ್ಣಿಂದ ಬಂದ ಮನುಜನೇ
ಮಣ್ಣಿಗೆ ಹೋಗ ಬೇಕು ನೀ. (2)

ಇದು ಸೃಷ್ಟಿಯ ನಿಯಮ
ಇದು ಕರ್ತನಾ ನಿಯಮ. (2)

1. ಹಣ ಐಶ್ವರ್ಯ ಐತಿ ಅಂತ ಮೆರಿಬ್ಯಾಡೋ
ನೀ ಹೋಗುವಾಗ ನಿನ ಹಿಂದೇ ಹಣವು ಬರುದಿಲ್ಲೋ. (2)
ನಿನಗಿರುವುದೆಲ್ಲ ಯೇಸು ಕೊಟ್ಟ ಆಸ್ತಿಕಣೋ
ಅವನಿಲ್ಲದೆ ಹೆಂಗ ಭೂಮಿಯ ಮ್ಯಾಲ ಬಾಳುತಿಯೋ. (2)
ಅವನಿಲ್ಲದ ಹೆಂಗ ಭೂಮಿಯ ಮ್ಯಾಲ ಬದುಕತಿಯೋ

2. ನಿನ್ನ ಹೆಂಡತಿ ಮಕ್ಕಳು ಬಂಧು ಬಳಗ ಬರೋದಿಲ್ಲೋ
ನೀ ಹೋಗುವಾಗ ಸಮಾಧಿವರೆಗೂ ಬರುತಾರೋ (2)
ಅವರ ಕಣ್ಣೀರಿನಿಂದ ಗೊಳಾಡಿ ನಿನ್ನ ಕಳಸ್ತಾರೋ
ನಿನ ಆಸ್ತಿಗಾಗಿ ದಿನಾಲೂ ಜಗಳಾಡಿ ಸಾಯ್ತಾರೋ
ನಿನ ಆಸ್ತಿಗಾಗಿ ದಿನಾಲೂ ಬಡಿದಾಡಿ ಸಾಯ್ತಾರೋ(2)

3. ನಿನ ದೇಹ ಮಣ್ಣಿಗೆ ಹೋದ ಮೇಲೆ ಮುಂದೆನೋ
ನಿನ್ನ ಆತ್ಮದ ಮುಂದೆ ನರಕ ಸ್ವರ್ಗ ಇರುವುದೋ. (2)
ನೀ ಯೇಸು ಸ್ವಾಮಿಯನ್ನು ಬಿಟ್ಟು ಬಾಳಿದರೆ ನರಕಾನೋ
ನೀ ನಂಬಿ ಬಾಳಿದರೆ ಸ್ವರ್ಗ ನಿತ್ಯ ಜೀವ ಕಣೋ. (2)
ನೀ ನಂಬಿ ಬಾಳಿದರೆ ಸ್ವರ್ಗದಿ ಜೀವಾ ಕಿರೀಟ ಕಣೋ

----------------------------🙏🏻---------------------------
🙏🏻 Thanks for watching 🙏🏻

Комментарии

Информация по комментариям в разработке