Yakshagana, ಯಕ್ಷಗಾನದ ಅಪೂರ್ವ ಅನುಭವಗಳೊಂದಿಗೆ ಉಜಿರೆ ಶ್ರೀ ಅಶೋಕ ಭಟ್ ರವರ ಅಂತರಾಳದ ಮಾತುಗಳೊಂದಿಗೆ ತಮ್ಮ ಮುಂದೆ..

Описание к видео Yakshagana, ಯಕ್ಷಗಾನದ ಅಪೂರ್ವ ಅನುಭವಗಳೊಂದಿಗೆ ಉಜಿರೆ ಶ್ರೀ ಅಶೋಕ ಭಟ್ ರವರ ಅಂತರಾಳದ ಮಾತುಗಳೊಂದಿಗೆ ತಮ್ಮ ಮುಂದೆ..

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸಂಘಟಕರು, ಯಕ್ಷಗಾನ ಅಂದು ಇಂದು ಮುಂದು ವಿಶೇಷ ವಿಮರ್ಶೆಯೊಂದಿಗೆ ಅವರ ಅನುಭವದ ಮಾತುಗಳು ನಿಮಗಾಗಿ ವೀಕ್ಷಿಸಿ. ಉಜಿರೆ ಶ್ರೀ ಅಶೋಕ ಭಟ್ ಅವರ ಹೃದಯಾಂತರಾಳದ ಮಾತುಗಳು, ವಿಶೇಷ ವ್ಯಕ್ತಿಗಳ ವಿಶೇಷ ಸಾಧನೆ ಪರಿಚಯ ಸಂಚಿಕೆಯಲ್ಲಿ ಯಕ್ಷಗಾನ ಕಲೆಯಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಮಾತಿನ ಮಂಟಪ ಕಟ್ಟುತ್ತಿರುವ ಉಜಿರೆಯ ಅಶೋಕ ಭಟ್ ಅವರೇ ನಮ್ಮ ಇವತ್ತಿನ ಅತಿಥಿ..
ಯಕ್ಷಗಾನ ಕಲೆ ಅಂದು-ಇಂದು-ಮುಂದು ಎಂಬ ವಿಷಯದ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಅತ್ಯಂತ ಮನೋಜ್ಞವಾಗಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಶ್ರೀಯುತ ಅಶೋಕ ಭಟ್ ಉಜಿರೆ ಅವರು..
ತನ್ನ ಜೀವನವನ್ನೇ ಯಕ್ಷಕಲೆಗೆ ಮೀಸಲಿಟ್ಟ ಇವರು ಹಲವೊಮ್ಮೆ ವಿವಾದಕ್ಕೊಳಪಟ್ಟರೂ ಅವರು ಅಂತಃಕರಣದ ಮಾತುಗಳು ಖಂಡಿತವಾಗಿಯೂ ಸತ್ಯ ಹಾಗೂ ಮುಂದಿನ ದಿನಗಳಲ್ಲಿ ಯಕ್ಷಗಾನ ಕಲೆಯನ್ನು ಬೆಳೆಸಿ ಉಳಿಸುವಲ್ಲಿ ತುಂಬಾ ಸಹಕಾರಿಯಾಗಿವೆ..
ಇಂದು ಯಕ್ಷಗಾನ ಕಲಾವಿದರು ಅಲ್ಪಸ್ವಲ್ಪ ಕಲಿತು ರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಶೋಚನೀಯ..!! ಎಂದರು
ಕಲೆಯನ್ನು ಪ್ರೇರಕರಿಗೆ ಮೆಚ್ಚುಗೆಯಾಗುವಂತೆ ಆಡಿ ತೋರಿಸ ಬೇಕಾದರೂ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ಅದಕ್ಕೆ ಅಪಚಾರ ಆಗದಂತೆ ಆಡಿತೋರಿಸಬೇಕು.. ಆಧುನಿಕ ಭರಾಟೆಯಲ್ಲಿ ಮೂಲ ಸಂಸ್ಕೃತಿ ಸಂಪ್ರದಾಯ ಮುರಿಯುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು..
ಸ್ತ್ರೀ ಪಾತ್ರಗಳಿಗೆ ಸ್ತ್ರೀಯರನ್ನೇ ಬಳಸುವ ಪ್ರಯೋಗ ಅಷ್ಟೇನೂ ಪ್ರೋತ್ಸಾಹದಾಯಕವೂ ಅಲ್ಲ.. ಸ್ತ್ರೀ ಯರಿಗೆ ಅವರದ್ದೇ ಆದ ಮಿತಿಗಳಿವೆ.. ವೈಜ್ಞಾನಿಕ ಶಾಸ್ತ್ರೀಯ ಕಾರಣಗಳಿದ್ದು ಅದು ಪ್ರೋತ್ಸಾಹದಾಯಕ ಅಲ್ಲವೆಂದರು..
ಮಾಧ್ಯಮಗಳಲ್ಲಿ ಅವಹೇಳನಕ್ಕೆ ಜಾಹೀರಾತುಗಳಿಗೆ ಕೆಲವು ಅರೆಬೆಂದ ಕಲಾವಿದರು ಕಾರಣ ಎಂದರು.. ಕಲಾವಿದರು ಕಲೆಯನ್ನು ಪ್ರೀತಿಸಬೇಕು.. ಕೇವಲ ಹಣಕ್ಕಾಗಿ ಕಲೆಯನ್ನು ಮಾರಬಾರದು.. ಪ್ರಕೃತ ಯಕ್ಷಗಾನ ಕಲೆಗೆ ಪ್ರೋತ್ಸಾಹವೂ ಹಣಕಾಸಿನ ಆದಾಯವೂ ವಿಪುಲ ಇದೆ.. ಹಾಗಾಗಿ ಕೇವಲ ಹಣಕ್ಕಾಗಿ ಕಲೆಯನ್ನು ಮಾರುವುದು ಸರಿಯಲ್ಲ ಎಂದು ತನ್ನ ಮನದ ಭಾವನೆಗಳನ್ನು ಹಂಚಿಕೊಂಡರು..
ಶಿವರಾಮ ಕಾರಂತರು ಬ್ಯಾಲೆ ನೃತ್ಯವನ್ನು ರಂಗಕ್ಕೆ ಇಳಿಸಿ ಯಶ್ವಸಿಯಾದರು ಎಂದು ಸ್ಮರಿಸಿದರು..
ಸ್ತ್ರೀಯರು ಹಿಂದೆ ೧೮ಮೊಳದ ಸೀರೆಯನ್ನು ಕಚ್ಚೆ ಉಡುತ್ತಿದ್ದ ಮಹನೀಯರನ್ನು ಕೃತಜ್ಞತೆಯಿಂದ ಸ್ಮರಿಸಿದರು..
ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ವೀಕ್ಷಿಸಿ ನಿಮ್ಮ ಅಭಿಪ್ರಾಯ ತಿಳಿಸಿ
ಇಂದು ಸಂಜೆ 7.೦೦ ಗಂಟೆಗೆ ಸರಿಯಾಗಿ ಮಂಗಳೂರು ಸಮಾಚಾರ ವಾಹಿನಿಯ ಮೂಲಕ ಬಿತ್ತರಗೊಳ್ಳಲಿರುವುದು.


Mangalore Samachar..


   / @mangaloresamachar9338  

Комментарии

Информация по комментариям в разработке