ಗೌರಿ ಗಣೇಶ ಹಬ್ಬಕ್ಕೆ ಸಿಹಿ ಕಡುಬು ಮತ್ತು ಖಾರ ಕಡುಬು ಮಾಡುವ ಅತ್ಯಂತ ಸರಳ ವಿಧಾನ | Sihi kadabu recipe in Kannada

Описание к видео ಗೌರಿ ಗಣೇಶ ಹಬ್ಬಕ್ಕೆ ಸಿಹಿ ಕಡುಬು ಮತ್ತು ಖಾರ ಕಡುಬು ಮಾಡುವ ಅತ್ಯಂತ ಸರಳ ವಿಧಾನ | Sihi kadabu recipe in Kannada

ನಮಸ್ಕಾರ ವೀಕ್ಷಕ ಬಂಧುಗಳಿಗೆ 🙏🙏

Welcome to our Channel ‪@DeepaEasyHomeRecipe‬

ಸುಲಭವಾಗಿ ಅಡುಗೆ ಮಾಡಲು ತಪ್ಪದೇ Deepa Easy Home Recipe ವಿಡಿಯೋ ಗಳನ್ನು ನೋಡಿ...
Please Subscribe Our YouTube Channel
👇👇👇👇👇
   / deepaeasyhomerecipe  

Facebook:https://www.facebook.com/share/BK81ji...

Instagram:https://www.instagram.com/deepaeasyho...

Telegram:https://t.me/DeepaEasyHomeRecipe

WhatsApp:https://whatsapp.com/channel/0029VaAN...

Please Like, Comment & share the video


ಸಾಂಪ್ರದಾಯಿಕ ಶೈಲಿಯಲ್ಲಿ ಗೌರಿ ಗಣೇಶ ಹಬ್ಬಕ್ಕೆ ಸಿಹಿ ಕಡುಬು ಮತ್ತು ಖಾರ ಕಡುಬು ಮಾಡುವ ಅತ್ಯಂತ ಸರಳ ವಿಧಾನ |

ಬೇಕಾಗಿರುವ ಸಾಮಾಗ್ರಿಗಳು:
1 ಕಪ್ ಅಕ್ಕಿ ಹಿಟ್ಟು
1 ಕಪ್ ಕೊಬ್ಬರಿ ತುರಿ
1/2 ಚಮಚ ತುಪ್ಪ
1/2 ಕಪ್ ಬೆಲ್ಲ
ಏಲಕ್ಕಿ 2-3

ಮಾಡುವ ವಿಧಾನ:
ಸ್ಟವ್ ಆನ್ ಮಾಡಿ ಒಂದು ಪಾತ್ರೆ ಇಡಿ ಅದಕ್ಕೆ 1/2 ಚಮಚ ತುಪ್ಪ ಹಾಕಿ ಬಿಸಿ ಆದ ಮೇಲೆ 1 ಕಪ್ ತುರಿದಿರುವ ಕೊಬ್ಬರಿ ಹಾಕಿ ನಂತರ 1/2 ಕಪ್ ಬೆಲ್ಲ ಸೇರಿಸಿ ಹಾಗೆ 2-3 ನಿಮಿಷ ಬೇಯಿಸಿ ಕೊನೆಯಲ್ಲಿ ಏಲಕ್ಕಿ ಪುಡಿ ಮಿಶ್ರಣ ಮಾಡಿ ಸ್ಟವ್ ಆಪ್ ಮಾಡಿ ತಣ್ಣಗಾಗಲು ಬಿಡಿ
ಸ್ಟವ್ ಆನ್ ಮಾಡಿ ಒಂದು ಪಾತ್ರೆಯಲ್ಲಿ 1 1/2 ಕಪ್ ನಷ್ಟು ನೀರು ಹಾಕಿ ಕುದಿತಾಯಿರುವ ಸಮಯದಲ್ಲಿ 1 ಕಪ್ ನಷ್ಟು ಅಕ್ಕಿ ಹಿಟ್ಟು ಹಾಕಿ ಮಿಶ್ರಣ ಮಾಡಿ ಹಿಟ್ಟು ಗಂಟು ಆಗದಂತೆ ನೋಡಿಕೊಳ್ಳಿ
ಬಿಸಿಯಾಗಿರುವ ಹಿಟ್ಟು ಒಂದು ಪಾತ್ರೆಯಲ್ಲಿ ಹಾಕಿ ಸರಿಯಾಗಿ ನಾದಿಕೊಳ್ಳಿ ನಂತರ ಅಕ್ಕಿ ಹಿಟ್ಟನ್ನು ಉಂಡೆ ಗಳನ್ನಾಗಿ ಮಾಡಿ ನಂತರ ಅದನ್ನು ಏಲೆ ರೀತಿಯಲ್ಲಿ ಮಾಡಿ ಅದಕ್ಕೆ ಮುಂಚೆನೆ ಮಾಡಿರುವ ಊರ್ಣ ಇಟ್ಟು ಕಡಬು ರೀತಿಯಲ್ಲಿ ಮಡಚಿ.
ನಂತರ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಒಂದು ಸ್ಟೇನರ್ ಇಟ್ಟು ಅದರಲ್ಲಿ ಬಾಳೆ ಎಲೆಯನ್ನು ಜೋಡಿಸಿ ನಂತರ ಕಡಬು ಗಳನ್ನು ಹಾಕಿ ಬೇಯಿಸಿದರೆ ಗಣೇಶನಿಗೆ ಪ್ರಿಯವಾದ ಸಿಹಿ ಗಡಬು ಸಿದ್ದ.

ಖಾರದ ಕಡಬು ಮಾಡುವ ವಿಧಾನ

ಬೇಕಾಗಿರುವ ಸಾಮಾಗ್ರಿಗಳು:-
1 ಕಪ್ ಅಕ್ಕಿ ಇಟ್ಟು
1&1/2 ಕಪ್ ನೀರು
1 ಕಪ್ ಕಡ್ಲೆ ಬೆಳೆ
1/2 ಕಪ್ ಕಾಯಿ ತುರಿ
2 ಹಸಿರು ಮೆಣಸಿನಕಾಯಿ
1 ಸ್ಪೂನ್ ಜಿರಿಗೆ
1/2 ಇಂಚು ಶುಂಠಿ
ರುಚಿಗೆ ತಕ್ಕಷ್ಟು ಉಪ್ಪು
ಕೊತಂಬರಿ ಸೊಪ್ಪು

ಮಾಡುವ ವಿಧಾನ:-
ಮೊದಲು ಮಿಕ್ಸಿ ಜಾರಿನಲ್ಲಿ 1ಕಪ್ ನಷ್ಟು ನೆನೆಸಿರುವಂತ ಕಡ್ಲೆಬೆಳೆ,1/2ಕಪ್ ಕಾಯಿ ತುರಿ, ಕಾರಕ್ಕೆ 2 ಹಸಿಮೆಣಸಿನಕಾಯಿ, 1spn ಜಿರಿಗೆ, 1/2 ಇಂಚು ಶುಂಠಿ,ರುಚಿಗೆ ತಕ್ಕಷ್ಟು ಉಪ್ಪು & ಕೊತಂಬರಿ ಸೊಪ್ಪು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ . ನಂತರ ಸ್ಟವ ಆನ್ ಮಾಡಿ ಒಂದು ಬಾಣಲೆ ಯಲ್ಲಿ 1&1/2 ಕಪ್‌ ನೀರು ಹಾಕಿ ಬಿಸಿಮಾಡಿಕೊಳ್ಳಿ ನೀರು ಬಿಸಿ ಆದ ಮೇಲೆ ರುಚಿಗೆ ತಕ್ಕಷ್ಟು ಉಪ್ಪು & 1ಕಪ್ ನಷ್ಟು ಅಕ್ಕಿ ಇಟ್ಟನ್ನು ಹಾಕಿ ಗಂಟು ಆಗದಂತೆ ಹಿಟ್ಟನ್ನು ಕಲಿಸಿ ನಂತರ ಸ್ಟೊವನ್ನು ಆಪ್ ಮಾಡಿ ಹಿಟ್ಟು ಬಿಸಿಯಾಗಿರುವಾಗಲೆ ಒಂದು ತಟ್ಟೆಗೆ ಹಾಕಿ ಸರಿಯಾಗಿ ನಾದಿಕೊಳ್ಳಿ. ನಂತರ ಅಕ್ಕಿ ಹಿಟ್ಟಿನ ಉಂಡೆಗಳನ್ನು ಮಾಡಿ ನಂತರ ಅದನ್ನು ಏಲೆ ರೀತಿಯಲ್ಲಿ ಲಟ್ಟಿಸಿ ಆ ಎಲೆಯನ್ನು ಕರ್ಜಿಕಾಯಿ ಮಾಡುವಂತಹ ಮೊಲ್ಡ ಮೇಲೆ ಹಾಕಿ ಅದರ ಮದ್ಯದಲ್ಲಿ ಮುಂಚೆನೆ ರುಬ್ಬಿಇಟ್ಟಿರುವಂತಹ ಮಸಾಲೆಯನ್ನು ಇಟ್ಟು ನಂತರ ಮೊಲ್ಡನ್ನು ಮಡಚಿ ಕೊನೆಯಲ್ಲಿ ಹೆಚ್ಚಿಗೆ ಬಂದಿರೊ ಹಿಟ್ಟನ್ನು ತಗದರೆ ಕಡಬು ರೆಡಿ. ನಂತರ ಪಾತ್ರೆಯಲ್ಲಿ 2 ಕಪನಷ್ಟು ನೀರು ಹಾಕಿ ಬಿಸಿ ಮಾಡಿಕೊಳ್ಳಿ ನಂತರ ಒಂದು ಸ್ಟೇನರ್ ಇಟ್ಟು ಅದರಲ್ಲಿ ಬಾಳೆ ಎಲೆಯನ್ನು ಜೋಡಿಸಿ ನಂತರ ಕಡಬು ಗಳನ್ನು ಹಾಕಿ 5-6ನಿಮಿಷ ಬೇಯಿಸಿ ಸರ್ವ ಮಾಡಿದರೆ ರುಚಿಕರವಾದ ಕಾರದ ಕಡಬು ಸವಿಯಲು ಸಿದ್ದ.

#sihikadabu #deepaeasyhomerecipe #sweetrecipe #festivalrecipe

Комментарии

Информация по комментариям в разработке