ಧರ್ಮಸ್ಥಳ ಪ್ರಕರಣ: ಮಹಿಳಾ ಆಯೋಗದಿಂದ – ದೂರುದಾರರಾದ ಮಹಿಳೆಗೆ ಸೂಕ್ತ ಭದ್ರತೆ ಒದಗಿಸಲು SITಗೆ ಒತ್ತಾಯ.!
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪತ್ರವನ್ನು ಪರಿಗಣಿಸುವ ಮೂಲಕ, ಧರ್ಮಸ್ಥಳದಲ್ಲಿ ಮಹಿಳೆಯರ/ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಕೊಲೆ, ನಾಪತ್ತೆ, ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರ್ಕಾರವು ತಮ್ಮ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಎಸ್‌ಐಟಿ ರಚನೆಗಾಗಿ ಉಲ್ಲೇಖ ಮಾಡಲಾದ ಅನನ್ಯಾ ಭಟ್ ನಾಪತ್ತೆ ಪ್ರಕರಣದ ದೂರುದಾರರಾದ ಶ್ರೀಮತಿ ಸುಜಾತಾ ಭಟ್ ಅವರನ್ನು ಕಳೆದ ಎರಡು ವಾರಗಳಿಂದ ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ ಹೇಳಿಕೆ ನೀಡಲು ಪೀಡಿಸುವುದು, ಅವರನ್ನು ತೇಜೋವಧೆ ಮಾಡಿ ಹೀಯಾಳಿಸಿ ಸುದ್ದಿ ಮಾಡುವುದು, ತಡ ರಾತ್ರಿಯಲ್ಲಿ ಅವರ ಮನೆಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡುವುದು, ಕಾರಿನಲ್ಲಿ ಕೂರಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುವ ಹಾಗೆ ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು, ಅವರನ್ನು ಮಾನಸಿಕವಾಗಿ ಕುಗ್ಗಿಸುವ ವರದಿ ಪ್ರಸಾರ ಮಾಡಿರುವುದನ್ನು ರಾಜ್ಯ ಮಹಿಳಾ ಆಯೋಗವು ಗಮನಿಸಿರುತ್ತದೆ. ಮಹಿಳೆಯರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡಕ್ಕೆ ಮಹಿಳೆಯರು, ಸಂತ್ರಸ್ಥರು, ನಿರ್ಭೀತಿಯಿಂದ ದೂರನ್ನು ನೀಡಲು ಅವಕಾಶ ಮಾಡಿಕೊಟ್ಟು, ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು ಅವರಿಗೆ ರಕ್ಷಣೆ ನೀಡುವಂತೆ ರಾಜ್ಯ ಮಹಿಳಾ ಆಯೋಗವು ಒತ್ತಾಯಿಸುತ್ತದೆ. ಈ ಪ್ರಕರಣದ ದೂರುದಾರರಾದ ಶ್ರೀಮತಿ ಸುಜಾತಾ ಭಟ್ ರವರು ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಂಭವವಿರುತ್ತದೆ. ಸದರಿ ವಿಷಯವನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ತಾವು ಕೂಡಲೇ, ವಿಶೇಷ ತನಿಖಾ ತಂಡದಿಂದ ಶ್ರೀಮತಿ ಸುಜಾತಾ ಭಟ್, ಇವರಿಗೆ ಭದ್ರತೆ ಒದಗಿಸಿ, ನಿರ್ಭೀತಿಯಿಂದ ಅವರು, ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಹಾಗೂ ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ತುರ್ತಾಗಿ ಕಳುಹಿಸಿಕೊಡುವಂತೆ ಕೋರಿದೆ.
==========================================================
▶️ Daily Salar Digital is a thought-provoking, progressive journalism
platform. After keeping our readers informed through our renowned
📰 Salar Daily Urdu paper for 69 years, we have launched Daily Salar Digital
English. We are dedicated to amplifying diverse voices and shedding
light on the issues that matter the most. We're here to inform, engage,
and inspire change
Stay updated through our progressive journalism here:
🌐 Website: www.salarnews.in
👍 Facebook: / englishsalar
🐦 Twitter: / englishsalar
==========================================================
Daily Salar, Indian News, Breaking News, Karnataka News, English News, International News, Entertainment News, Kannada News, Latest News, Latest News Updates, Bengaluru, Local News, News, Breaking News Update, Breaking, Headline News, Today News, News Update, Dhruv Rathee, TV9 Kannada Live, TV9, Headlines, News Updates
Информация по комментариям в разработке