B Suresh Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Interview | Season 2

Описание к видео B Suresh Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Interview | Season 2

B Suresh

Web Sambhashane, Bichchitta Butthi

Our first guest of season 2 is Sri B Suresh (#beesu), a renowned Actor-Director-Producer.
Sri #BSuresh is a very successful film actor, producer and #director. He has written more than 15 plays including Shakespeare's Macbeth and King Lear and directed more than 25 plays. He has won several accolades and awards including the prestigious Karnataka Sahitya Academy award. He has acted in several films including the recent blockbuster Kannada movie #KGF.

He runs a publication house "Naaku tanti prakashana" and film production house "Media House Studio". He has produced several #tele-films and #tele-serials and blockbuster movies. His most recent film production '#Yajamana' starring #Darshan was a blockbuster of 2019. He is a very active labour leader too.

He has worked with Kannada Film stalwarts like #ShankarNag, #GVIyer and V #Ravichandran.

We at Maadhyama Aneka hope that you will enjoy the conversation.


ಮಾಧ್ಯಮ ಅನೇಕ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ (ಸೀಸನ್ 2) - ಬುತ್ತಿ ಗಂಟು 1ರ ಅತಿಥಿ ಹೆಸರಾಂತ ಕಿರುತೆರೆ- ಹಿರಿತೆರೆ ನಿರ್ದೇಶಕ, ನಟ, ಚಿತ್ರಕಥೆ-ಸಂಭಾಷಣೆ ಬರಹಗಾರ, ನಿರ್ಮಾಪಕ, ಕಾರ್ಮಿಕ ಸಂಘಟನೆಗಳ ನೇತಾರ ಹೀಗೆ ಅನೇಕ ವಿಶಿಷ್ಟ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಫಲತೆ ಕಂಡ, ಸಾಮಾನ್ಯರಿಗೂ ಹತ್ತಿರವಾದ ಶ್ರೀ #ಬಿಸುರೇಶ ಅವರು.

ಹುಟ್ಟೂರು ದಾವಣಗೆರೆ, ಕನ್ನಡದ ಪ್ರಸಿದ್ಧ ಪತ್ರಕರ್ತೆ ಮತ್ತು ನಾಟಕಗಾರ್ತಿ ಡಾ #ವಿಜಯಮ್ಮನವರ ಪುತ್ರ. ಬಾಲನಟನಾಗಿ ಅಕಸ್ಮಾತ್ ಹವ್ಯಾಸಿ ರಂಗಭೂಮಿಯಾಗಿ ಕಾಣಿಸಿಕೊಂಡವರನ್ನು ಬಣ್ಣದ ಲೋಕ ತನ್ನ ಹಲವಾರು ರೂಪಗಳಲ್ಲಿ ಅವರನ್ನು ಆವರಿಸಿಕೊಂಡಿತು, ದುಡಿಸಿಕೊಂಡಿತು. ತಾಂತ್ರಿಕ ಪದವಿ - ಕೆಲಸವನ್ನು ಬಿಟ್ಟು ರಂಗಭೂಮಿ, ಕಿರು ತೆರೆ, ಚಿತ್ರರಂಗಗಳಲ್ಲಿ ತಮ್ಮ ವಿಶಿಷ್ಟವಾದ ಛಾಪು ಮೂಡಿಸುವಂತೆ ಮಾಡಿತು.

ಈವರೆಗೆ 15 ನಾಟಕಗಳನ್ನು ಬರೆದು, ಷೇಕ್ಸ್ಪಿಯರ್ ನ ಮ್ಯಾಕ್ಬೆತ್, ಕಿಂಗ್ ಲಿಯರ್ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ "ಷಾಪುರದ ಸೀನಿಂಗಿ-ಸತ್ಯ" ನಾಟಕಕ್ಕೆ ೧೯೯೭ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಯಿತು. #ಸ್ಲಮ್ #ಬಾಲ, #ಪೆರೋಲ್ ಎಂಬ ಕೆಲವು ಕನ್ನಡ ಸಿನಿಮಾಗಳಲ್ಲಿ ನಟರಾಗಿಯೂ ಜನರನ್ನು ಆಕರ್ಷಿಸಿರುವ ಸುರೇಶರು ಮಲಯಾಳಂನಲ್ಲು ಒಂದು ಮೂಕನ ಪಾತ್ರ ನಿರ್ವಹಿಸಿದ್ದಾರೆ. #KGF ಚಿತ್ರದ ವಿಶಿಷ್ಟ ಪಾತ್ರ ವೀಕ್ಷಕರ ಗಮನಸೆಳೆದಿತ್ತು.

'#ಸಾಧನೆ', '#ನಾಕುತಂತಿ' ಯಂತಹ ಜನಪ್ರಿಯ ಧಾರಾವಾಹಿಗಳು, ‘#ಪುಟ್ನಂಜ’, ‘#ಕಲಾವಿದ’, ‘#ರಸಿಕ’, ‘#ಜಾಣ’ ಚಿತ್ರಗಳ ಸಂಭಾಷಣೆ, #ರಂಗಾಯಣ, #ರಂಗಶಂಕರ, #ಸುಚಿತ್ರಾ ಫಿಲಂ ಸೊಸೈಟಿಯಂತಹ ಕಡೆಯಲ್ಲಿನ ಜವಾಬ್ದಾರಿಯುತ ಸ್ಥಾನ, ಮತ್ತಿದೀಗ 2019ರ blockbuster ಸಿನಿಮಾ "#ಯಜಮಾನ" ಚಿತ್ರದ ನಿರ್ಮಾಣ, ಹೀಗೆ ಇವರ ಸಾಧನೆಯ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ. ಇವರು ನಿರ್ದೇಶಿಸಿದ "ಪುಟ್ಟಕ್ಕನ ಹೈವೇ" ಚಿತ್ರಕ್ಕೆ ೨೦೧೦ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ರಜತ ಪದಕ ಮತ್ತು ಅತ್ಯುತ್ತಮ ಚಿತ್ರಕತೆಗೆ ರಾಜ್ಯ ಪ್ರಶಸ್ತಿ ದೊರೆತಿದೆ.

`ನಾಕುತಂತಿ ಪ್ರಕಾಶನ’ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಪ್ರಕಾಶನ ಸಂಸ್ಥೆ. ಇದೀಗ ತಮ್ಮ 'ಮೀಡಿಯಾ ಹೌಸ್ ಸ್ಟುಡಿಯೋ' ನಿರ್ಮಾಣ ಸಂಸ್ಥೆ ಮೂಲಕ ಅಭಯ ಸಿಂಹ ಅವರ '#ಗುಬ್ಬಚ್ಚಿಗಳು' ಮತ್ತು '#ಸಕ್ಕರೆ', #ಪ್ರಕಾಶ್ #ರೈ ರೊಂದಿಗೆ 'ನಾನು ನನ್ನ ಕನಸು', ಸಕ್ಕರೆ (ನಿರ್ದೇಶನ: ಅಭಯ್ ಸಿಂಹ), ಇತ್ತೀಚಿನ blockbuster ಸಿನಿಮಾ 'ಯಜಮಾನ' ನಂತಹ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಈ Webಸಂಭಾಷಣೆಯಲ್ಲಿ ಶ್ರೀ ಸುರೇಶ ಅವರು ತಮ್ಮ ವ್ಯಕ್ತಿತ್ವವನ್ನು ರೂಪಿಸಿದ ಹಲವು ಅಪರೂಪದ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ವೃತ್ತಿಬದುಕಿನಲ್ಲಿ ಕಂಡ #ಶಂಕರ್ #ನಾಗ್, ಜಿ ವಿ #ಅಯ್ಯರ್ , ವಿ #ರವಿಚಂದ್ರನ್ ರಂತಹ ಪ್ರಮುಖರೊಂದಿಗೆ ಒಡನಾಟ, ಅವರೊಂದಿಗೆ ಕೆಲಸ ಮಾಡುವಾಗಿನ ವಿಶೇಷ ಅನುಭವಗಳ ಬುತ್ತಿಗಂಟನ್ನು ಮಾಧ್ಯಮ ಅನೇಕದೊಂದಿಗೆ ಹಂಚಿಕೊಂಡಿದ್ದಾರೆ.

ನವಿರಾದ ಹಾಸ್ಯ ಲೇಪದ, ನೇರ ಮಾತಿನ, 'ಮನುಷ್ಯತ್ವ ಎಲ್ಲಕ್ಕಿಂತ ಮುಖ್ಯ' ಎನ್ನುವ ಬಿ ಸುರೇಶ ಅವರ ಭಿಡೆಯಿಲ್ಲದ ಮಾತುಕತೆ ನಿಮ್ಮ ಮುಂದೆ...

Subscribe for Maadhyama Aneka Channel to get updates and notification on more entertainment and infotainment content.

   / @maadhyamaaneka  

Please leave your feedback and comments.

© Maadhyama Aneka Pvt. Ltd.

Комментарии

Информация по комментариям в разработке