Negila Hidida Holadolu Haaduta - Video Song | Kamanabillu | Dr. Rajkumar | C Ashwath | Kuvempu

Описание к видео Negila Hidida Holadolu Haaduta - Video Song | Kamanabillu | Dr. Rajkumar | C Ashwath | Kuvempu

Song: Negila Hidida Holadolu Haaduta - HD Video.
Kannada Movie: Kamanabillu
Actor: Dr Rajkumar, Ananthnag, Saritha
Music: Upendra Kumar
Singer: C Ashwath
Lyrics: Kuvempu
Director: Chi Dattaraj
Year: 1983

Negila Hidida Holadolu Haaduta Uluva Yogiya Nodalli Song Lyrics

ನೇಗಿಲ ಹಿಡಿದ, ಹೊಲದೊಳು ಹಾಡುತ,
ಉಳುವ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೇ ಪೂಜೆಯು,
ಕರ್ಮವೇ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಟಿನಿಯಮದೊಳಗವನೇ ಭೋಗಿ.
ಉಳುವಾ ಯೋಗಿಯ ನೋಡಲ್ಲಿ

ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೇ ಇಲ್ಲ.
ಉಳುವಾ ಯೋಗಿಯ ನೋಡಲ್ಲಿ

ಬಾಳಿತು ನಮ್ಮೀ ನಾಗರಿಕತೆ ಸಿರಿ ಮಣ್ಣೋಣಿ ನೇಗಿಲಿನಾಶ್ರಯದಿ
ನೇಗಿಲ ಹಿಡಿದ ಕೈಯಾದಾರದಿ ದೊರೆಗಳು ದರ್ಪದೊಳಾಳಿದರು
ನೇಗಿಲ ಬಲದೊಳು ವೀರರು ಮೆರೆದರು ಶಿಲ್ಪಿಗಳೆಸೆದರು,
ಕವಿಗಳು ಬರೆದರು
ಉಳುವಾ ಯೋಗಿಯ ನೋಡಲ್ಲಿ

ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ,
ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ,
ನೇಗಿಲ ಮೇಲೆಯೇ ನಿಂತಿದೆ ಧರ್ಮ.
ಉಳುವಾ ಯೋಗಿಯ ನೋಡಲ್ಲಿ

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Kamana Billu – ಕಾಮನ ಬಿಲ್ಲು1983*SGV

Комментарии

Информация по комментариям в разработке