ನಿಮಗೂ ದೇವರ ಅನುಗ್ರಹ ಆಗುವುದೇ । ಶ್ರೀ ವಿನಯ್ ಗುರೂಜಿ

Описание к видео ನಿಮಗೂ ದೇವರ ಅನುಗ್ರಹ ಆಗುವುದೇ । ಶ್ರೀ ವಿನಯ್ ಗುರೂಜಿ

ನಿಮಗೂ ದೇವರ ಅನುಗ್ರಹ ಆಗುವುದೇ । ಶ್ರೀ ವಿನಯ್ ಗುರೂಜಿ

ಮಾನವನು ತನ್ನೆಲ್ಲಾ ಜೀವನವನ್ನು ಬಿಡಿಸಲಾಗದಷ್ಟು ಪ್ರಶ್ನೆಗಳ ಮಾಯೆಯಲ್ಲಿ ಬಂದಿಯಾಗಿಸಿಬಿಡುತ್ತಾನೆ. ಆತ್ಮವನ್ನು ಈ ಮಾಯೆಯೂ ಆಕಾಶ,ಗಾಳಿ,ಅಗ್ನಿ,ನೀರು,ಭೂಮಿಗಳೆಂಬ ಪಂಚಭೂತಗಳಿಂದಾದ ಸಂಸಾರ ಎಂಬ ಸಾಗರದಲ್ಲಿ ಸದಾ ಮುಳುಗಿಸಿ ಅದರಲ್ಲೇ ಅವನು ಮಗ್ನನಾಗಿಬಿಡುತ್ತಾನೆ. ಇಲ್ಲದನ್ನು ಇದ್ದಂತೆ ತನ್ನಲ್ಲಿಯೇ ಯೋಚಿಸುತ್ತಾ ಭಾಸವಾಗಿಸಿಕೊಳ್ಳುತ್ತಾನೆ, ಅಂದು ಅವನು ಮಾಯೆಗೆ ಅಧೀನನಾಗಿರುತ್ತಾನೆ. ಅದರ ಬಂಧನದಲ್ಲಿ ಬಂದಿಯಾಗಿಬಿಡುತ್ತಾನೆ.

ಬಂಧನ ಒಂದು ಅನುಭವ, ಅದರಲ್ಲಿ ಇದ್ದೀನಿ ಅಂತ ಗೊತ್ತು ಮಾಡಿಕೊಳ್ಳುವುದು ಕೂಡ ಒಂದು ಅನುಭವವೇ ಹೌದು, ನಾವು ಮಾಯೆ ಎಂಬ ಶಬ್ಧವನ್ನು ಹಲವಾರು ಪ್ರಸಂಗಗಳಲ್ಲಿ ಬಳಸುವುದುಂಟು, ಆದರೆ ಮಾಯೆಯ ನಿಜವಾದ ಅರ್ಥವನ್ನು ತಿಳಿಯಲು ಶಾಸ್ತ್ರವಾಕ್ಯಗಳ ಮೂಲಕ ಮಾತ್ರ ಸಾಧ್ಯ. ಇದರ ಕುರಿತು ಭಗವಂತ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಬಿಡಿಸಿ ಹೇಳಿದ್ದಾನೆ. ಮಾಯೆ ಎಂಬುದು ಭಗವಂತನ ಶಕ್ತಿ ಅದು ಅವನಿಂದಲೇ ಹೊರಹೊಮ್ಮುತ್ತದೆ. ಅದನ್ನು ಎಂದಿಗೂ ಯಾರು ಅರ್ಥೈಸಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ದೇವರ ಇಚ್ಛೆ ಇಲ್ಲದೇ ಇಲ್ಲಿ ಯಾವುದು ನಡೆಯಲು ಸಾಧ್ಯವಿಲ್ಲ ಹಾಗಾಗಿ ನಾವೆಲ್ಲರೂ ಅವನು ತೋರಿಸಿದ ಮಾರ್ಗದಲ್ಲಿ ಪ್ರಯಾಣಿಸಬೇಕು ಅಷ್ಟೇ. ಇದನ್ನೇ ಶ್ರೀ ಕೃಷ್ಣನು ಅರ್ಜುನನಿಗೆ ಮಹಾಭಾರತ ಯುದ್ಧದಲ್ಲಿ ಮನವರಿಕೆ ಮಾಡಿದ್ದು.

ಅರ್ಜುನನು ಯುದ್ದದ ಮೊದಲು ಅಳುತ್ತಾ ಕುಳಿತಿದ್ದಾಗ, ಅವನನ್ನು ಶ್ರೀ ಕೃಷ್ಣ ಸಮಧಾನಿಸುತ್ತಾ ಕೇಳ್ತಾನೆ ಯಾಕೆ ಅಳ್ತಾ ಇದ್ದೀಯಾ, ಅವಾಗ ಅರ್ಜುನ ಹೇಳ್ತಾನೆ, ಎದುರಿಗೆ ನಮ್ಮ ಕುಟುಂಬದವರೇ ಆದ ಸಹೋದರರು, ಮಹಾಮಹಿಮರು,ಗುರುಗಳಾದ ದ್ರೋಣರು,ಪ್ರಜೆಗಳು ಇದ್ದಾರೆ ನಾನು ಅರ್ಜುನನಾಗಿ ಇಲ್ಲಿ ಇಷ್ಟು ಬಲಿಷ್ಠನಾಗಿದ್ದೇನೆ ಎಂದರೆ ಅದರಲ್ಲಿ ಅವರೆಲ್ಲರ ಪಾತ್ರವೂ ಕೂಡ ಹೆಚ್ಚು ಎಂದು ಹೇಳುತ್ತಾನೆ ಆಗ ಅವನಿಗೆ ಬಂದ ಪ್ರಶ್ನೆಯನ್ನು ಕೃಷ್ಣ ಬಿಡಿಸಿದಾಗ ಪ್ರಸಿದ್ಧವಾದ ಭಗವದ್ಗೀತೆ ಪುಸ್ತಕವಾಗುತ್ತದೆ. ಹಾಗಾಗಿ ನಮ್ಮಲ್ಲಿ ಎಲ್ಲಾ ಪ್ರಶ್ನೆಗಳ ಮಾಯೆಯನ್ನು ಒಮ್ಮೆಯೇ ಉತ್ತರಿಸಿಕೊಳ್ಳಲು ಎಂದೂ ಯಾರಿಂದಲೂ ಸಾಧ್ಯವಾಗುವುದಿಲ್ಲ. ನಮ್ಮ ಎಲ್ಲಾ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳ ಸಮತೋಲನದ ಮೇಲೆ ಅವುಗಳು ನಿಂತಿರುತ್ತವೆ. ಅವುಗಳಿಗೆ ಮುಕ್ತಿಯನ್ನು ನಾವೇ ಕಂಡುಕೊಳ್ಳಬೇಕಾಗುತ್ತದೆ.

ನಮ್ಮಲ್ಲಿನ ಎಲ್ಲಾ ವಿಷಯಕ್ಕೂ ನಾವೇ ಉತ್ತರ ಕಂಡುಕೊಳ್ಳಬೇಕಾಗುತ್ತೆ ಯಾಕೆಂದರೆ ಎಲ್ಲವಕ್ಕೂ ಉತ್ತರ ನಮ್ಮಲ್ಲಿಯೇ ಇರುತ್ತದೆ. ನಮ್ಮ ಭಾಷೆ ಸರಿಯಿದ್ದರೆ ನಿಮಗೆ ಅದನ್ನು ಅರ್ಥ ಮಾಡಿಳ್ಳುವುದಕ್ಕೆ ಸುಲಭವಾಗುತ್ತದೆ. ಅದು ಏನಾದರೂ ಕಷ್ಟ ಆದರೆ ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟ ಆಗುತ್ತದೆ. ಇವಾಗ ನೀವಿರೋದು ಅದೇ ಯೋಚನೆಯಲ್ಲಿ ನಿಮಗೆ ಏನು ನಿರ್ಧಾರ ಮಾಡಬೇಕು ಎಂಬುದು ನಿಮಗೆ ತಿಳಿಯುತಿಲ್ಲ. ಅದರಿಂದ ಹೊರಬರುವುದಕ್ಕು ನಿಮಗೆ ಮನಸ್ಸಿಲ್ಲ, ಅದನ್ನೇ ಯೋಚಿಸುತ್ತಾ ಅಶಾಂತಿಯ ನೆಮ್ಮದಿಯಿಲ್ಲದ ಜೀವನದಲ್ಲಿ ಇದ್ದೀರ. ಮಾನವ ಕೇವಲ ಒಂದು ಕೆಲಸದಲ್ಲಿ ತನ್ನ ಇಡೀ ಸಮಯ ಕಳೆಯಲು ಇಷ್ಟ ಪಡುವುದಿಲ್ಲ. ಯಾಕೆಂದರೆ ಅವನು ಜಡ ವಸ್ತು ಅಲ್ಲ, ಸದಾ ಸಂಚರಿಸುವ ಜೀವಿ. ಅವನು ಯಾರ ಅಧೀನದಲ್ಲು ಇರಲು ಇಚ್ಛಿಸುವುದಿಲ್ಲ. ಹಾಗಾಗಿ ಮಾಯೆಯ ಮುಕ್ತಿಯನ್ನು ಪಡೆಯಲು ತಾನೇ ಇಂದು ಸೂಕ್ತ ದಾರಿಯಲ್ಲಿ ಸಾಗುವುದನ್ನು ಅವನು ಕಲಿಯಬೇಕಾಗುತ್ತದೆ.- ಅವಧೂತ ಶ್ರೀ ವಿನಯ್ ಗುರೂಜಿ.

For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ -    • "ವಿವೇಕನಂದರು ಯುವಶಕ್ತಿಗೆ ಸದಾ ಸ್ಫೂರ್ತಿದಾ...  ​​​​​​​​​​

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ -    • "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆ...  ​​​​​​​​​​

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ -    • ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..!  । ಅವ...  ​​​​​​​​​​

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ -    • ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧ...  ​​​​​​​​​​

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ -    • ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ  - ...  ​​​​​​​​​​

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ -    • ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರ...  ​​​​​​​​​​


#Avadhoothavinayguruji​​​​​​​​​​ #SriVinayguruji​​​​​​​​​​ #spirituality​​​​​​​​​​ #LordShiva​​​ #philosophy​​​​​​​​​​ #Swamiji​​​​​​​​​​ #vinaygurujifollowers​​​​​​​​​​ #live​​​​​​​​​​ #trendingnews​​​​​​​​​ #India​​​​​​ #Ashram​​​​​​ #kannadaculture​​​​​​ #kanadigas​​​​​​ #2021

Комментарии

Информация по комментариям в разработке