Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть "ವಾಙ್ನಿಧಿ"

  • Revival Heritage Hub
  • 2020-07-31
  • 276
"ವಾಙ್ನಿಧಿ"
  • ok logo

Скачать "ವಾಙ್ನಿಧಿ" бесплатно в качестве 4к (2к / 1080p)

У нас вы можете скачать бесплатно "ವಾಙ್ನಿಧಿ" или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку "ವಾಙ್ನಿಧಿ" бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео "ವಾಙ್ನಿಧಿ"

(Title changed)

ನಮ್ಮ ಸಂಸ್ಕ್ರತಿ ನಮ್ಮ ಅಭಿಮಾನ
ಇದನ್ನು ಉಳಿಸುವುದೇ ನಮ್ಮ ಅಭಿಯಾನ
ನಮಸ್ತೆ. ರಿವೈವಲ್ ಹೆರಿಟೇಜ್ ಹಬ್ ಇದು ತಮಗೆಲ್ಲ ತಿಳಿದಿರುವಂತೆ ಪರಂಪರೆಯ ಬಹುಮುಖ ಗಳನ್ನು ಮುಖ್ಯ ವಾಹಿನಿಗೆಪರಿಚಯಿಸುವ ಗುರಿಯನ್ನು ಹೊಂದಿದೆ ಅಂತ.ಈಗಾಗಲೇ ಅಪರೂಪದ ಹಾಗೂ ನಿರ್ಲಕ್ಷಿತ ವಿಷಯಗಳನ್ನು ಬೆನ್ನಟ್ಟಿ ಮಾನವನ ಗಹನ ದಿಂದ ಮಸುಕಾಗಿಹೋಗಿದ್ದ ಬಹಳಷ್ಟು ವಿಚಾರಗಳನ್ನು ಬೆಳಕಿಗೆ ತಂದ ಹೆಮ್ಮೆ ನಮ್ಮೆಲ್ಲರಿಗಿದೆ.ಇದು ವರೆಗೆ ಇತಿಹಾಸದ ಬಗ್ಗೆ, ಧಾರ್ಮಿಕ ವಿಶೇಷತೆ,ಸಾಮಾಜಿಕ ಅನನ್ಯತೆಗಳನ್ನು ಜನರ ಮುಂದಿಡುವಲ್ಲಿ ಸಾರ್ಥಕ ಯತ್ನಗಳಾಗಿರುವುದು ತಮಗೆಲ್ಲ ಅವಗತವಾಗಿದೆ.
ಭೌತಿಕ ಪರಂಪರೆಯ ಜೊತೆ ಜೊತೆಗೇ ಸಮೃದ್ಧವಾಗಿ ಸಾಗಿಬರುವಂಥದ್ದು ವಾಕ್ ಪರಂಪರೆ. ಮನುಷ್ಯನ ಅಸ್ತಿತ್ವಕ್ಕೆ ಬೆಲೆ ಇರುವುದೇ ಅವನ ಮಾತಿನಿಂದ,ಅವನಿಗಿರುವ ಜ್ಞಾಪಕ ಶಕ್ತಿ ಯಿಂದ ಅಲ್ಲವೇ? ಹೀಗಾಗಿ ಸಂಸ್ಕ್ರತಿಯ ಒಟ್ಟೂ ವ್ಯಾಪ್ತಿಯಲ್ಲಿ ಮೌಖಿಕತೆಗೂ ಅಂದರೆ ವಾಕ್ ಶಕ್ತಿ ಗೂ ಮಹತ್ವದ ಸ್ಥಾನವಿದೆ.
ಹಿಂದಿನ ತಲೆಮಾರಿನವರ ಹಾಡು,ಕಥೆ, ಕಾವ್ಯ, ನುಡಿ ಮುತ್ತುಗಳೆನಿಸುವ ಗಾದೆಗಳು, ಮಿದುಳನ್ನು ಚುರುಕಾಗಿಸುವ ಒಗಟುಗಳು ಹೀಗೆ ಹಲವಾರು ಪ್ರಕಾರಗಳಾಗಿ ಜನಜೀವನದ ಅವಿಭಾಜ್ಯ ಅಂಗವಾಗಿದೆ ಈ ಮೌಖಿಕ ಪರಂಪರೆ.ಮನುಷ್ಯ ತನ್ನ ಎರಡೂ ಬಾಹುಗಳಿಂದ ಬಾಚಿ ಬಾಚಿಹಿಡಿದಿಟ್ಟುಕೊಳ್ಳುವಷ್ಟು ಅಮೂಲ್ಯ ಸಂಪತ್ತು ಇಲ್ಲಿ ಹುದುಗಿದೆ.ಈ ಅಪರೂಪದ ಅನುಭವ ಸಂಪತ್ತು ಕ್ರಿಯಾಶೀಲ ವಾಗ್ನಿಧಿ ತಂತ್ರಜ್ಞಾನದ ಸದುಪಯೋಗದಲ್ಲಿ ನಮ್ಮೊಡನೆ ಶಾಶ್ವತವಾಗಿ ಉಳಿಯಲಿ ಎಂಬ ಸದಾಶಯದೊಂದಿಗೆ ನಿಮ್ಮ ಮುಂದೆ ಪ್ರಸ್ತುತ ವಾಗಲಿದ್ದೇವೆ.ಈಗಾಗಲೇ ಸಂಗ್ರಹಿಸಿದ ಕೆಲವು ಪಾರಂಪರಿಕ ಗೀತೆಗಳು ಅಪರೂಪದ ದಾಸರ ಪದಗಳು ಆಡುಭಾಷೆಯಲ್ಲಿ ಹರಿದು ಬಂದ ಕೃಷ್ಣ ನ ಬಾಲಲೀಲೆಯ ಹಾಡುಗಳು, ಹಳ್ಳಿ ಹಳ್ಳಿಗಳಲ್ಲಿ ಅನಾಥವಾಗಿ ಸೊರಗಿ ಹಿರಿಯ ತಲೆಗಳ ಜೊತೆಗೇ ಮರೆಯಾಗುತ್ತಿರುವ ಸಾಹಿತ್ಯದನಿಧಿಯನ್ನು ಹಿಡಿದಿಟ್ಟು ಜೋಡಿಸಿ ಮುಂದಿನ ತಲೆಮಾರಿಗೆ ಉಳಿಸುವ ಅಳಿಲುಸೇವೆಯ ಸಂಕಲ್ಪ ನಮ್ಮದು ಬಾಯಿಮಾತಿನಲ್ಲಿ ಹರಿದುಬಂದು ಜೀವನದ ಅನುಭವದ ಸಾರ ಸಂಬಂಧ ಗಳ ಸ್ವಾದ ಹೊಂದಿದ ವಾಗ್ನಿಧಿ ನಮ್ಮೆಲ್ಲರ ತಿಳುವಳಿಕೆಯ ಮಟ್ಟವನ್ನು ವಿಸ್ತರಿಸಲಿ
ಬನ್ನಿ ವಾಗ್ ನಿಧಿಯ ವಾಕ್ ಪರಂಪರೆಯ ಅಮೂಲ್ಯ ರತ್ನ ಗಳನ್ನು ಅನಾವರಣ ಗೊಳಿಸೋಣ
ನಮ್ಮ ಸಂಸ್ಕ್ರತಿ ನಮ್ಮ ಅಭಿಮಾನ
ಅದನ್ನು ಉಳಿಸುವುದು ನಮ್ಮ ಅಭಿಯಾನ ಅನ್ನೋಣ.

ಹಸೆಗೆ ಕರೆಯುವ ಹಾಡು

೧.ಹಸೆಗೇಳೊ ಮನಮೋಹನ

ಹಸೆಗೇಳೊ ಮನಮೋಹನಾ ನೀ ಏಳೊ
ಮನಮೋಹನ
ಹಸೆಗೆ ಬಾಬೇಗ ವಾಸುದೇವನೆ ಈಗ(ಪಲ್ಲವಿ)

ನೀರೊಳು ಮೀನಾಗಿ ಚರಿಸಿದೆಯೊ
ಭಾರವ ಬೆನ್ನೀಲಿ ಪೊತ್ತಿಹೆಯೊ
ಮೋರೆಯತೋರಿ ಕೊರಳ್ಹಾರವ ಹಾಕಿದ ನಾರಸಿಂಹನೆ ಈಗ(೧)

ಬಲಿಯನ್ನೇ ದಾನವ ಬೇಡಿದಿಯೋ
ಛಲದಿಂದ ಕ್ಷತ್ರಿಯರ ಸವರಿದೆಯೋ
ಸೀತೆಗೆ ಮುದ್ರಿಕೆಕಳುಹಿದೆಯೋ
ಲಲನೆಗೋಸುಗ ಕಢಾಲಮರವನೇರಿ(೨)

ಬೌದ್ಧಾವತಾರವ ತಾಳಿದಿಯೋ
ತ್ರಿಪುರರ ಸಂಹಾರ ಮಾಡಿದೆಯೊ
ತೇಜಿಯನೇರಿ ಕಲ್ಕ್ಯಾವತಾರನಾಗುವಿ(೩)

೨.ಪೂಜಾ ವಿಧಾನದ ಹಾಡು

ಪೂಜಿಪೆನೇ ನಿನ್ನ
ಪೂಜಿಪೆನೇ ನಿನ್ನ ಪೂಜಿಪೆನೇ ನಿನ್ನ ಜಾಜಿ ಪುಷ್ಪಗಳಿಂದ ಮೂರ್ಜಗನ್ಮಾತೆಯೆ
ಅಭಿವಂದಿಪೇ ನಿನ್ನ ಪೂಜಿಪೇನೆ ನಿನ್ನ ಪೂಜಿಪೆನೇ ನಿನ್ನ (ಪಲ್ಲವಿ)

ಅಷ್ಟ ಪಾದೆಯ ಜಮುನಾ ಮಧುಪರ್ಕಗಳನಿತ್ತು
ಅಗ್ರ ಪೂಜೆಯ ಗೈಯುವೆ
ಪೀತಾಂಬರನುಟ್ಟು ಸರ್ವಾಭರಣ ತೊಟ್ಟು
ವರಮಣಿ ಮಂಟಪಕೆ ಬಾರೆ ನಾರಾಯಣಿ(೧)

ಅಂಬುಜಾಕ್ಷಿಯೆ ನಿನಗೆ ಚಿನ್ನದ ಕುಂಭದಿಂದ
ಅಭಿಷೇಕ ಮಾಡಿಸುವೆ
ಸಮುದ್ರ ಸುತಳೆ ಶುದ್ಧ ಮನದಿಂದಶುಭ್ರ ವಸ್ತ್ರವ ನಿನಗೆ ಅರ್ಪಿಸುವೇ ನಮ್ಮ(೨)

ಅರಿಶಿಣ ಕುಂಕುಮ ಕರದಲ್ಲಿ ಪಿಡಿದಪ್ಪಿ ಹರುಷದಿಂದೇರಿಸುವೆ
ವರಮಹಾಲಕುಮಿಯೆ ವರಗಳ ನೀಡೆಂದು ಶಿರಬಾಗಿ ನಮಿಸುವೆ(೩)

ಮಲ್ಲಿಗೆ ಕೇದಿಗೆ ಕಲ್ಹಾರ ಪುಷ್ಪದಿಂದ ಎಲ್ಲಾ ಸಮರ್ಪಿಸುವೆ ಬಲ್ಲೀದ ಭಕ್ತರಭೀಷ್ಟೆಯ ನೀಡಲು
ಒಲ್ಲೆಂದು ವೈಕುಂಠ ಕೊಲ್ಲ್ಹಾಪುರದಲ್ಲಿರುವಿ(೪)

ಮಡಿದೀಯರೆಲ್ಲರು ಸಡಗರದಿಂದಲಿ ಉಡಿಯ ತುಂಬುವರಮ್ಮ
ಬಿಡಿಮಲ್ಲಿಗೆ ತಂದು ನಡೆಮುಡಿಘಾಕುವೆ ಶರದೀಶಯನನ ರಾಣಿ ನಡೆದೂ ಬಾರಮ್ಮತಾಯೆ(೫)

ಶೇಷಶಯನನ ರಾಣಿ ದೋಷ ವಿಮೋಚಳೆ
ಮೀಸಲು ತಂದಿಹೆನೆ
ಪಾಯಸ ಮೃಷ್ಟಾನ್ನ ತೃಪ್ತಳಾಗಿ ಉಂಡು ಅಷ್ಟ ಐಶ್ವರ್ಯ ನೀಡೆ ಲಕ್ಷುಮಿ ದೇವಿಯೆ(೬)

ನಿತ್ಯ ತೃಪ್ತಳೆನಿನಗೆ ಮುತ್ತಿನಾರುತಿ ಮಾಡಿ ಭಕ್ತಿಂದ ಎರಗುವೆ
ದಂಪತ್ತು ಸಂಪತ್ತು ಹೆತ್ತ ಮಕ್ಕಳನಿತ್ತು ಆಪತ್ತು ಪರಿಹರಿಸೆ ಆದಿ ನಾರಾಯಣಿ(೭)

೩.ಆರತಿ ಹಾಡು

ಆರುತೀಯ ಮಾಡುವೆನೆ.
ಆರುತೀಯ ಮಾಡುವೇನೆ
ಮಾರ ಜನನಿಯೆ ಲಕ್ಷ್ಮಿ(ಪಲ್ಲವಿ)

ಭಂಗಾರದ ತಾಟಿನೋಳು ಶೃಂಗಾರದಾರುತಿ ಪಿಡಿದು
ಮಂಗಳ ಪದವ ಪಾಡಿ ರಂಗನಂಗನೆ ನಿನಗೆ(೧)

ಮುತ್ತಿನಾರುತಿಯನ್ನು ಎತ್ತಿಪಿಡಿದೂ ನಿನಗೆ ಮರ್ತ್ಯರೋಳು ದಯಮಾಡಿ ಇತ್ತಬಾರಮ್ಮಾ ತಾಯೆ(೨)

ಇಂದಿರೇಶನರಮನೆಯೋಳ್ ಸುಂದರ ಸರೋಜವದನೆ ನಂದ ಬಾಲಕೃಷ್ಣನನ್ನು ತಂದು ತೋರಿಸಮ್ಮ ತಾಯೆ(೩)

ಎಣ್ಣೆ ಶಾಸ್ತ್ರ ದ ಹಾಡು
ಬಣ್ಣಿಸಿ ಗೋಪಿತಾ ಹರಸಿದಳೂ(೪)
ಬಣ್ಣಿಸಿ ಗೋಪಿತಾ ಹರಸಿದಳೂ
ಎಣ್ಣೆಯನೊತ್ತುತಾ ಯದುಕುಲ ತಿಲಕಗೆ(ಪಲ್ಲವಿ)

ಆಯುಷ್ಯವಂತನಾಗು ಅತಿಬಲ್ಲಿದನಾಗು ಮಾಯದ ಖಳರ ಮರ್ಧನನಾಗೆನುತಾ(೧)

ರಾಯರ ಪಾಲಿಸು ರಕ್ಕಸರ ಸೋಲಿಸು ವಾಯುಸುತಗೆನೀ ಒಡೆಯನಾಗೆನುತಾ(೨)

ಧೀರ ನೀನಾಗು ದಯಾಂಬುಧಿಯಾಗು
ರುಕ್ಮಿಣಿಗೆ ನೀ ಅರಸನಾಗೆನುತಾ(೩)

ಮಾರನ ಪಿತನಾಗು ಮಧುಸೂದನಾಗು ದ್ವಾರಾವತಿಗೆ ದೊರೆಯನಾಗೆನುತಾ(೪)

ಆನಂದ ನೀನಾಗು ಅಚ್ಯುತನೀನಾಗು
ದಾನವಾಂತಕನಾಗು ಶ್ರೀನಿವಾಸನಾಗು ಜ್ಞಾನಿ ಪುರಂದರ ವಿಠ್ಠಲ ನಾಗೆನುತಾ (೫)

ಭಕ್ತಿ ನಿವೇದನೆ
ಹೊಸಕಣ್ಣು ಎನಗೆ ಹಚ್ಚಲಿ ಬೇಕು (೫)
ಹೊಸಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ ವಸುದೇವ ಸುತನ ಕಾಂಬುವೆನೂ
ಘಸಣಿಯಾಗಿಹೆ ಭಾವ ವಿಷಮ ವಾರಿಧಿಯೊಳಗೆ ಶಶಿಮುಖಿ ಕರುಣದಿ ನೋಡೆ ಕಾಪಾಡೆ(ಪಲ್ಲವಿ)

ಪರರ ಅನ್ನ ವನುಂಡು ಪರರ ಧನವ ಕಂಡು
ಪರಿಪರಿ ಕ್ಲೇಶಗಳುಂಡು
ವರಲಕ್ಷ್ಮಿ ನಿನ್ನ ಚಾರುಚರಣಕ್ಕೆ ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೇ ಕಾಪಾಡೇ(೧)
ಮಂದ ಹಾಸ್ಯಳೆ ಭವ ಸಿಂಧುವಿನೊಳಗಿಟ್ಟು ಛಂದವೇ ಎನ್ನ ನೋಡುವದೂ
ಕಂದನಂದದಿಬಾಲ್ಯದಿಂದ ಸೇರಿದೆನಿನ್ನ ಮಂದರೋದ್ಧರನ ತೋರಮ್ಮಾ(೨)

ಅಂದಛಂದಗಳೊಲ್ಲೆ ಬಂಧುಬಳಗವೆಲ್ಲ ಬಂಧನಕ್ಕೆಲ್ಲ ಇವು ಕಾರಣ ವೂ
ಇಂದಿರೇಶನ ಪಾದ ದ್ವಂದ್ವವತೋರಿಸೆ ಹೃನ್ಮಂದಿರದೊಳು ಬಂದು ನೆಲೆಸೇ(೩).

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]