Methe Dose ಜೇನುಗೂಡಿನಂತಿರುವ ದೋಸೆ

Описание к видео Methe Dose ಜೇನುಗೂಡಿನಂತಿರುವ ದೋಸೆ

ಎಲ್ಲರಿಗೂ ನಮಸ್ಕಾರ 🙏

ಮೆಂತೆ ದೋಸೆ ಮಾಡುವ ವಿಧಾನ : ಅರ್ಧ ಕಿಲೋ ಬೆಳ್ತಿಗೆ ಅಕ್ಕಿ , 4 ಟೀ ಸ್ಪೂನ್ ಮೆಂತ್ಯ, 2 ಟೀಸ್ಪೂನ್ ಉದ್ದಿನಬೇಳೆ ಅಕ್ಕಿಯನ್ನು ಬೇರೆಯೇ ನೆನೆಹಾಕಿ. ಮೆಂತೆ ಮತ್ತು ಉದ್ದಿನಬೇಳೆಯನ್ನು ಒಟ್ಟಿಗೆ ನೆನೆಹಾಕಿ. 7 ಗಂಟೆ ನೆನೆಯಬೇಕು.

ಒಟ್ಟಿಗೆ ನೆನೆಹಾಕಿದ ಮೆಂತೆ ಮತ್ತು ಉದ್ದಿನ ಬೇಳೆಗೆ ದೊಡ್ಡ ಒಂದು ತೆಂಗಿನಕಾಯಿಯ ಒಂದುವರೆ ಕಾಯಿ ಹಾಕಿ ನಯ ರುಬ್ಬಿಕೊಳ್ಳಿ. ಅಕ್ಕಿಯನ್ನು ಬೇರೆಯೇ ನಯ ರುಬ್ಬಿಕೊಂಡು ಬೆಲ್ಲವನ್ನು ಸೇರಿಸಿ ರುಬ್ಬಿರಿ. ರುಬ್ಬಿದ ಎಲ್ಲವನ್ನೂ ಒಟ್ಟಿಗೆ ಮಿಕ್ಸ್ ಮಾಡಿ ಮಿಕ್ಸಿ ತೊಳೆದ ನೀರು ಹಾಕಿ. ಕೈಯಾ ಎರಡು ಹಿಡಿ ಅವಲಕ್ಕಿಯನ್ನು ಹಾಕಿ ಮುಚ್ಚಳ ಇಟ್ಟು ಬಿಡಿ.

ಮರುದಿನ ಬೆಳಿಗ್ಗೆ ಅವಲಕ್ಕಿಯ ಗಂಟು ಉಳಿಯದ ಹಾಗೆ ಸರಿ ಮಿಕ್ಸ್ ಮಾಡಿ ಉಪ್ಪು ಬೇಕಿದ್ದರೆ ನೀರು ಹಾಕಬಹುದು. ದೋಸೆ ಕಾವಲಿ ತಕೊಂಡು ಅದಕ್ಕೆ ಎಣ್ಣೆ ಸವರಿ ದೋಸೆಯ ಮೇಲೆ ಹಾಕಲು ತುಪ್ಪ ತೆಗೆದುಕೊಳ್ಳಿ. ದೋಸೆ ಹಾಕಿದಮೇಲೆ ಸರಿ ಹೋಳು ಬಿದ್ದ ನಂತರ ಮುಚ್ಚಳ ಇಡಬೇಕು. ದೋಸೆ ಬೆಂದಮೇಲೆ ದೋಸೆಗೆ ತುಪ್ಪ ಸವರಿ ಬಿಸಿ ಬಿಸಿ ಇರುವಾಗಲೇ ದೋಸೆಯನ್ನು ತಿನ್ನಬೇಕು.

thank you for all 🙏❤️

email- [email protected]
instagram-  / amulya_kateel_paakashaale  

Комментарии

Информация по комментариям в разработке