ಮಾತೆ ಪೂಜಕ ಹಾಡುವುದು ಹೇಗೆ? |Maate Pujak Nanu Ennaya || Kannada Patriotic Song 🔥

Описание к видео ಮಾತೆ ಪೂಜಕ ಹಾಡುವುದು ಹೇಗೆ? |Maate Pujak Nanu Ennaya || Kannada Patriotic Song 🔥

ಮಾತೆ ಪೂಜಕ ಹಾಡುವುದು ಹೇಗೆ? |Maate Pujak Nanu Ennaya || Kannada Patriotic Song 🔥


For sponsorship & Live Concert enquiries,online class enquiries :👇 [email protected]

Kannada Lyrics:

ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ||

ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ll1ll

ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ
ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ
ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ll2ll

ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ
ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ
ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ll3ll

ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ ll4ll

English Lyrics:

mAte poojaka nAnu ennaya SiravaniDuvenu aDiyali
ninna keertiyu jagadi mereyali ondE Aseyu manadali llPll

eDaru toDarugaLella tuLiyuta munde nugguve bharadali
ninna nAma ninAdavAgali Sramipe nA prati kShaNadali
ninna gouravakeduru baruva balava murivenu chhaladali
jagada janani bhArata ida kELi naliyuve manadali ll1ll

naguta naliyuva ninna vadanava nODi nalivudu ennede
ninna duHkhita vadana veekShise siDivudennaya hRudayavu
ninna mukhadali gelavu taralu neerugaiyuve raktava
enna kaNakaNa tEdu basiyuve poorNa jeevanaSaktiya ll2ll

ninna tEjava jagavu nODali urive deepada teradali
enna Saktiya ghRutava satatavu ereyutiruvenu bharadali
mAtRumandira beLagutirali nAnE nandA deevige
batti teradee dEha uriyali sArthakate ee bALige ll3ll

rudranAgi virOdhi viShavanu bharadi nAnada nunguve
jagava mechchisi adara hRudayava ninneDege nA seLeyuve
sRujipe jagadi ninna poojipa kOTi kOTi bhaktara
keerti Sikharadi mAte manDisu arpisuve nA sarvavA ll4ll


#maatepujaka
#Maathepujak
#Howtosingmaatepujak
#Maatepujaksongwithlyrics
#ಮಾತೆಪೂಜಕ
#kannadapetrioticsong
#sangeethmane
#kannadasongs
#prtrioticsong

Комментарии

Информация по комментариям в разработке