ll Shahu maharaj ll kannada song || Ambedkar || Nimma bevarina runavanne thindu

Описание к видео ll Shahu maharaj ll kannada song || Ambedkar || Nimma bevarina runavanne thindu

#BUDDHA #BASAVA #AMBEDKAR #KANSHiRAM

#ಛತ್ರಪತಿ_ಶಾಹು_ಮಹಾರಾಜ್ (೨೬ ಜೂನ್ ೧೮೭೪-೬ನೇ ಮೇ ೧೯೨೨)[೧][೨][೩] ಸಾಮಾಜಿಕ ಪ್ರಜಾಪ್ರಭುತ್ವದ ರೂವಾರಿ. ಮಹಾನ್ ದಾರ್ಶನಿಕ. ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿ. ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣದೊಂದಿಗೆ, ಅಧಿಕಾರದಲ್ಲಿ ಸಮಪಾಲು ಮತ್ತು ಸಾಮಾಜಿಕ ಸ್ಥಾನಮಾನ ದೊರಕಿಸಿ ಕೊಟ್ಟವರು. ಜೊತೆಗೆ ಮಹಾತ್ಮ ಜ್ಯೋತಿ ಬಾಪುಲೆ ಅವರ ಸತ್ಯಶೋಧ ಸಮಾಜ ಚಳುವಳಿಯನ್ನು ಮುಂದುವರೆಸಿದವರು. ಇವರ ಶಿಕ್ಷಣ ಸೇವೆಯನ್ನು ಗಮನಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ೧೯೦೨ರ ಜೂನ್ ೧೦ರಂದು ಇವರಿಗೆ ಎಲ್.ಎಲ್.ಡಿ ಪದವಿ ನೀಡಿ ಗೌರವಿಸಿದೆ.ಛತ್ರಪತಿ ಶಾಹು ಮಹಾರಾಜ್‍ರ ಕೊಡುಗೆ ಸಂಪಾದಿಸಿ
"ಶೂದ್ರರಿಗೆ 50% ಮೀಸಲಾತಿ"[೫] ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯೆಂಬ ಯೋಜನೆಯನ್ನು ಕಂಡುಹಿಡಿದ ಕೀರ್ತಿ ಶಾಹು ಮಹಾರಾಜರದು. ಮೀಸಲಾತಿಯ ಜನಕ "ಛತ್ರಪತಿ ಶಾಹು ಮಹಾರಾಜ್".
ಶಾಹು ಮಹಾರಾಜರು ಅಸ್ಪೃಶ್ಯರಿಗೋಸ್ಕರ 18 ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸುತ್ತಾರೆ.
1908ರಲ್ಲಿ ವಿಧ್ಯಾಸಂಸ್ಥೆಯನ್ನು ಪ್ರಾರಂಭ ಮಾಡುತ್ತಾರೆ.
1896 ರಿಂದ 1912ರ ಅವಧಿಯಲ್ಲಿ ಶೂದ್ರರಿಗೆ 22, ಅಸ್ಪೃಶ್ಯರಿಗೆ 27 ಶಾಲೆಗಳನ್ನು ಸ್ಥಾಪಿಸುತ್ತಾರೆ.
1918 ರಲ್ಲಿ ಶೂದ್ರರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು "ಮೂಕ ನಾಯಕ್" ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ.
1918 ರಲ್ಲಿ ಮಹಾತ್ಮ ಜೋತಿಬಾಫುಲೆ ರವರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಲು "ಶಾಹು ಸತ್ಯ ಶೋಧಕ ಸಮಾಜ"ವನ್ನು ಸ್ಥಾಪನೆ ಮಾಡುತ್ತಾರೆ.ತಮಿಳುನಾಡಿನ ಬ್ರಾಹ್ಮಣೇತರ ಚಳುವಳಿಗಳ ಬಗ್ಗೆ ಅಪಾರ ಒಲವಿದ್ದ ಶಾಹು ಮಹಾರಾಜರು ಸತ್ಯಶೋಧಕ ಸಮಾಜದ ಸಭೆಗಳಿಗೆ ಜಸ್ಟೀಸ್ ಪಾರ್ಟಿಯ ನೇತಾರರಾಗಿದ್ದ ಡಾ.ಟಿ.ಎಂ.ನಾಯರ್, ಸರ್.ಪಿ.ಟಿ.ಚೆಟ್ಟಿಯಾರ್, ರಾಮಸ್ವಾಮಿ ಮೊದಲಿಯಾರ್ ಮುಂತಾದವರನ್ನು ಆಹ್ವಾನಿಸುತ್ತಿದ್ದರು.
ಎರಡು ಚಳುವಳಿಗಳು ಒಂದೇ ದೃಷ್ಟೀಕೋನಗಳನ್ನು ಇಟ್ಟುಕೊಂಡಿದ್ದರಿಂದ ಸ್ವತಃ ಶಾಹು ಮಹಾರಾಜರು ಜಸ್ಟೀಸ್ ಪಾರ್ಟಿಗೆ ಅನೇಕ ಸಲ ಕಾಗದ ಪತ್ರಗಳನ್ನು ಬರೆದು ವಿಚಾರ ವಿನಿಮಯ ನಡೆಸುತ್ತಿದ್ದರು. ೧೯೨೦ ಏಪ್ರಿಲ್ ೧೫ ರಂದು ನಾಸಿಕ್‍ನಲ್ಲಿ ನಡೆದ ಸತ್ಯಶೋಧಕ ಸಮಾಜದದ ಅಧಿವೇಶನದಲ್ಲಿ ಮದ್ರಾಸಿನ ಪನಗಲ್ ಮಹಾರಾಜರು ಭಾಗವಹಿಸಿದ್ದರು.
೧೯೧೯-೨೦ರಲ್ಲಿ ನಡೆದ ದಸರಾ ಉತ್ಸವದ ಸಂದರ್ಭದಲ್ಲಿ ಅಖಿಲ ಭಾರತ ಕಾಸ್ಟ್ ಕಾನ್ಫರೆನ್ಸ್ ನಡೆದಿತ್ತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಶಾಹು ಮಹಾರಾಜರಿಗೆ ಆಮಂತ್ರಣ ನೀಡಿ, ಈ ಅಧಿವೇಶನದಲ್ಲಿ ಪಾಲ್ಗೊಳ್ಳ ಬೇಕೆಂದು ಕೋರಿದರು. ಆದರೆ ಶಾಹು ಮಹಾರಾಜರು ಅದರಲ್ಲಿ ತಾವು ಭಾಗವಹಿಸದ ಕಾರಣದಿಂದ ಶ್ರೀ ವಿ.ಆರ್.ಶಿಂದೆ ಎಂಬ ಸತ್ಯಶೋಧಕ ಸಮಾಜದ ಮುಖಂಡರನ್ನು ಮೈಸೂರಿಗೆ ಕಳುಹಿಸಿದ್ದರು.

Комментарии

Информация по комментариям в разработке