Pada Varnam - Neelamegha

Описание к видео Pada Varnam - Neelamegha

Kannada Padavarnam
Choreography: Deepthi Shree Bhat

About the dance:
೬:೨೫ - ೭:೪೫ ನೀಲಮೇಘದಂತಹಾ ಶ್ಯಾಮ ಸುಂದರನನ್ನು ಕರೆದುಕೊಂಡು ಬಾರೇ ಎಂದು ನಾಯಕಿಯು ತನ್ನ ಸಖಿಯಲ್ಲಿ ಕೇಳುತ್ತಾಳೆ.
ಸಂಚಾರಿ(ಕೃಷ್ಣನಿಗಾಗಿ ಪ್ರೇಮಸಂದೇಶವನ್ನು ವಸ್ತ್ರದಲ್ಲಿ ಕಸೂತಿಮಾಡಿತ್ತಾಳೆ. ಹೀಗೇ ಯೋಚಿಸುವಾಗ ಸೂಜಿ ಕೆನ್ನೆಗೆ ಚುಚ್ಚಿಕೊಳ್ಳುತ್ತದೆ. ಆದರೂ ಸಂದೇಶ ಬರೆದು ಮುಗಿಸಿ, ಸಖಿಯ ಕೈಯಲ್ಲಿರಿಸಿ, ಕೃಷ್ಣನಿಗೆ ತಲುಪಿಸುವಂತೆ ಕೇಳುತ್ತಾಳೆ).

೯:೨೨ - ೧೧:೨೦ ನಿತ್ಯ ಮಧುರವಾದ ಮುರಳೀಗಾನಕ್ಕೆ ನಾಯಕಿಯು ಕಾಯುತ್ತಿರುತ್ತಾಳೆ.
ಸಂಚಾರಿ(ಹಾಲು ಕರೆಯುವಾಗ ಕೃಷ್ಣನ ಕೊಳಲಿನ ನಾದವನ್ನು ನೆನೆನೆನೆದು ಹಾಲೆಲ್ಲಾ ಚೆಲ್ಲಿಹೋಗುತ್ತದೆ. ನದಿಯಿಂದ ನೀರು ತರುವಾಗ ಅಲ್ಲೂ ಕೃಷ್ಣನ ಕೊಳಲ ನಾದವನ್ನು ಅರಸುತ್ತಾ, ಅಲ್ಲೇ ಮೈಮರೆತು ಮಡಕೆಯೂ ನೀರಪಾಲಾಗುತ್ತದೆ).

೧೩:೧೦ - ೧೪:೫೦ ನಿರ್ಮಲ ರೂಪನಾದ ಕೃಷ್ಣನ ರಾಸಲೀಲೆಗಳನ್ನು ನಿತ್ಯವೂ ನೆನೆದು ಸೋತುಹೋಗುತ್ತಾಳೆ.
ಸಂಚಾರಿ(ಹೂ ಕೊಯ್ದು ಕಟ್ಟುತ್ತಿರುವಾದ ಹಿಂದೊಮ್ಮೆ ನಡೆದ ಘಟನೆಯನ್ನು ನೆನೆಯುತ್ತಾಳೆ. ಅಂದು ಅವನನ್ನು ಉಯ್ಯಾಲೆಯಲ್ಲಿ ಕುಳ್ಳಿರಿಸಿದ್ದು, ತಾಂಬೂಲ ನೀಡಿದ್ದು, ಅದರ ಚುಂಬನ, ಇವೆ ಮೊದಲಾದ ಕ್ಷಣಗಳು ಅವಳ ಕಣ್ಣೆದುರಾಗುತ್ತದೆ)

೧೬:೦೦ - ೧೮:೪೦ ನಯನ ಮನೋಹರ ಮೋಹನಾಂಗನಾದ ಕೃಷ್ಣನ ನವರಸ ರಂಜಿತ ಕೃತ್ಯಗಳನ್ನು ನೆನೆದು ರೋಮಾಂಚನಗೊಳ್ಳುತ್ತಾಳೆ.
ಶೃಂಗಾರ - ಕೃಷ್ಣ ಗೋಪಿಕೆಯರ ಮೇಲೆ ಮತ್ತು ಗೋಪಿಕೆಯರು ಕೃಷ್ಣನ ಮೇಲೆ ತೋರಿದ ಪ್ರೇಮ
ವೀರ - ಭೀಷ್ಮನತ್ತ ಚಕ್ರ ಹಿಡಿದು ನಡೆದ ಕೃಷ್ಣ
ಕರುಣಾ - ಮಥುರೆಯ ಜನರನ್ನು ಬಿಟ್ಟುಹೋಗುವಾಗ ಕೃಷ್ಣನ ದುಃಖ
ಹಾಸ್ಯ - ಗೊಲ್ಲರೊಂದಿಗೆ ಸೇರಿ ಗೋಪಿಕೆಯರ ಮಡಿಕೆ ಒಡೆದು ನಕ್ಕದ್ದು
ಅದ್ಭುತ - ಗೋವರ್ಧನ ಗಿರಿಯನ್ನು ಎತ್ತಿದ್ದು
ಭಯಾನಕ -ರಾಕ್ಷಸ ಭೀತಿ, (ಶಕಟಾಸುರನೇ ಸೇರಿದಂತೆ ಬಾಲ್ಯದಲ್ಲಿ ಕೃಷ್ಣ ಎದುರಾದ ರಾಕ್ಷಸರು)
ಭೀಭತ್ಸ - ಪೂತನಿ ಹಾಲುಣಿಸಿದ್ದು
ರೌದ್ರ - ಕಂಸನ ಸಂಹಾರ
ಶಾಂತ - ಭಗವದ್ಗೀತೆ ಬೋಧಿಸಿದ್ದು

೨೦:೩೩ - ೨೧:೩೬ ಶ್ರೀ ವೇಣುಗೋಪಾಲ ಕೃಷ್ಣನೇ, ನಾನು ನಿನ್ನ ಚರಣಗಳಿಗೆ ಎರಗುತ್ತೇನೆ. ನಿನ್ನನ್ನು ಬಿಟ್ಟು ಕ್ಷಣಕಾಲವೂ ಇರಲಾರೆ. ಬೇಗನೆ ಸನಿಹಕ್ಕೆ ಬಂದು ನನ್ನನ್ನು ಸೇರು ಎಂದು ಕೇಳಿಕೊಳ್ಳುತ್ತಾಳೆ.

ಸಂಚಾರಿ (ಕೃಷನನ್ನು ಕರೆತರಲು ಒಪ್ಪದ ಸಖಿಯ ಮನವೊಲಿಸಲು ಬಳೆ, ಹಾರವನ್ನು ಉಡುಗೊರೆಯಾಗಿ ಕೊಡುತ್ತಾಳೆ. ಆದರೂ ಒಪ್ಪದಿದ್ದುದನ್ನು ಕಂಡು ಮುನಿಸಿಕೊಂಡು ತಾನೇ ಕೃಷ್ಣನನ್ನು ಅರಸುತ್ತಾ ಹೊರಡುತ್ತಾಳೆ. ಕೃಷ್ಣನನ್ನು ಕಂಡು ರೋಮಾಂಚನಗೊಳ್ಳುತ್ತಾಳೆ).

ಆನಂದ ಸುಖವನ್ನು ನೀಡಲಾರೆಯಾ, ಕಮಲದಂತಹಾ ಕಣ್ಣುಳ್ಳವನೇ!
೧. ಗೋಪೀಲೋಲನಾದ ಮನೋಹರನಾದ ಕೃಷ್ಣ, ನೀನು ನನ್ನ ಹೃದಯದಲ್ಲಿ ನೆಲೆಮಾಡು.
೩. ನೀನು ಎನ್ನ ತನು, ನೀನೇ ನನ್ನ ಮನ, ನೀನು ನನ್ನ ಉಸಿರು, ನೀನೇ ನನ್ನ ಪ್ರಿಯ. ಅಂಥಹಾ ನೀನು ಮಧುರವಚನವನ್ನು ನೀಡಿ, ಕ್ಷಣದಲ್ಲಿ ಮರೆಯಾಗಿ ಹೋಗಬೇಡ.
೩. ಭಕ್ತರು ಕರೆದರೆ ಬೇಗನೆ ಬಂದು, ಕರುಣೆಯಿಂದ ಸಕಲರನ್ನೂ ನೀನು ಕಾಪಾಡುವೆ. ಅಂದು ಸತ್ಯಭಾಮೆಗೆ ಪಾರಿಜಾತವನ್ನು ತಂದು ಕೊಟ್ಟಿದ್ದೆ. ತುಲಾಭಾರವನ್ನು ನಡೆಸಿ ತುಳಸೀ ಮಹಿಮೆಯನ್ನು ತೋರಿದ್ದೇ. ರುಕ್ಮಿಣಿಯ ಮೂಲಕ ನಿಜಭಕ್ತಿಯೆಂದರೇನೆಂದು ತಿಳಿಸಿಕೊಟ್ಟಿದ್ದೆ.

This song is chosen from Ananya Bengaluru's Nrithya Sangeeta Album(Vol 5).
Composer: G. Gurumurthy
Music Composition and Vocal: Sangeetha Kalashri Vid. Balasubrahmanya Sharma
Natuvanga: Karthik Datar
Jati's: D. V. Prasanna Kumar, Karthik Datar
Mridanga: G. Gurumurthy
Violin: Nataraj Murthy
Flute & Clarinet: V. Vivek Krishna
Khanjira: Karthik Datar
Rhythm Pad: D. V Prasanna Kumar

Venue: Sava Sadan, Malleshwaram
Video courtesy: https://shaale.com

Комментарии

Информация по комментариям в разработке