"ಗೃಹಭಂಗ" -ಎಸ್.ಎಲ್.ಭೈರಪ್ಪ | ಪರಿಚಯಿಸಿದವರು - ಮಾಳವಿಕಾ ಅವಿನಾಶ್ Gruhabanga

Описание к видео "ಗೃಹಭಂಗ" -ಎಸ್.ಎಲ್.ಭೈರಪ್ಪ | ಪರಿಚಯಿಸಿದವರು - ಮಾಳವಿಕಾ ಅವಿನಾಶ್ Gruhabanga

"ಗೃಹಭಂಗ" -ಎಸ್.ಎಲ್.ಭೈರಪ್ಪ | ಪರಿಚಯಿಸಿದವರು - ಮಾಳವಿಕಾ ಅವಿನಾಶ್

ಗೃಹಭಂಗ ಎಸ್.ಎಲ್.ಭೈರಪ್ಪನವರ ಒಂದು ಪ್ರಸಿದ್ಧ ಕಾದಂಬರಿ. 1920ರ ನಂತರ ಪ್ರಾರಂಭವಾಗುವ ಇದರ ಕಥಾವಸ್ತು, 1940 -45ರ ಸುಮಾರಿಗೆ ಮುಗಿಯುತ್ತದೆ. ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ.

ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ‘ಗೃಹಭಂಗ’. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ.‘ಗೃಹಭಂಗ’ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ.

#sukruthi #ಸುಕೃತಿ #slbhyrappa #ಭೈರಪ್ಪ #bhyrappa

Комментарии

Информация по комментариям в разработке