ಸಂಚಿಕೆ 1 : ಭಾರತದ ಒಳಗೆ ಪುಲಕೇಶಿ ಕೈಗೊಂಡ ದಂಡಯಾತ್ರೆಗಳು ಹೇಗಿದ್ದವು ಗೊತ್ತ Pulakeshi's conquest with in India

Описание к видео ಸಂಚಿಕೆ 1 : ಭಾರತದ ಒಳಗೆ ಪುಲಕೇಶಿ ಕೈಗೊಂಡ ದಂಡಯಾತ್ರೆಗಳು ಹೇಗಿದ್ದವು ಗೊತ್ತ Pulakeshi's conquest with in India

#karnatakahistory #immadipulakeshi #pulakeshi #pulikeshi #history #upsc

ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ಭವ್ಯ ಇತಿಹಾಸ ಸಂಸ್ಕೃತಿ ವಾಸ್ತುಶೈಲಿ ಮುಂತಾದ ವಿಷಯಗಳನ್ನ ವಿಡಿಯೋಗಳ ಮೂಲಕ ದಾಖಲಿಸುವ ನಮ್ಮ ಪ್ರಯತ್ನಕ್ಕೆ ನೆರವಾಗಿ
GooglePay , PhonePay UPI Id - 9535331523-2
Account Details :
Bhuvanesh Kadaraiah
Federal Bank
Ac Number - 99980105133644
Ifsc code - FDRL0001104
Branch - St.Mark's Road, Bengaluru


ಕ್ರಿಶ 6-8 ನೇ ಶತಮಾನಗಳ ನಡುವೆ ಆಳಿದ, ಕರ್ನಾಟಕದ ಪ್ರಮುಖ ಅರಸುಮನೆತನಗಳಲ್ಲಿ ಒಂದಾದ ಬಾದಾಮಿಯ ಚಾಲುಕ್ಯ ವಂಶ ತನ್ನ ಅಭ್ಯುದಯವನ್ನು ಕಂಡಿದ್ದು ಇಮ್ಮಡಿ ಪುಲಕೇಶಿಯ ಆಡಳಿತಾವಧಿಯಲ್ಲಿ. ಚಿಕ್ಕಪ್ಪ ಮಂಗಲೇಶನನ್ನು ಸೋಲಿಸಿ ಸಿಂಹಾಸನವನ್ನೇರಿದ ಪುಲಕೇಶಿಯ ದಿಗ್ವಿಜಯ ಯಾತ್ರೆಯಿಂದ ಭಾರತ ಉಪಖಂಡದ ಬಹುಭಾಗಗಳು ಕರ್ನಾಟಕದ ಅಧಿಪತ್ಯಕ್ಕೆ ಒಳಗಾದವು.

ಪುಲಕೇಶಿಯು ತನ್ನ ಆಡಳಿತದ ಆರಂಭದಲ್ಲಿ ಕದಂಬರನ್ನು ಸೋಲಿಸಿದ್ದನ್ನು ಕಂಡು ಆಳುಪರು ಮತ್ತು ಗಂಗರು ತಾವಾಗಿಯೇ ಆತನ ಸಾರ್ವಭೌಮತ್ವವನ್ನು ಒಪ್ಪಿದರು. ಭಾರತ ಉಪಖಂಡದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಯುದ್ಧಕ್ಕೆಂದೇ ಮೀಸಲಾದ ನೂರು ಹಡಗುಗಳ ನೌಕಾಪಡೆಯನ್ನು ಕಟ್ಟಿದ ಇಮ್ಮಡಿ ಪುಲಕೇಶಿ ಕೊಂಕಣದ ಮೌರ್ಯರು, ಲಾಟರನ್ನು ಸೋಲಿಸುವ ಮೂಲಕ ಇಡೀ ಪಶ್ಚಿಮ ಕರಾವಳಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ. ಉತ್ತರದ ಮಾಳವ ರಾಜ್ಯವನ್ನು ಸದೆಬಡಿಯುವ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ ಫಲವಾಗಿ ಕರ್ನಾಟಕವನ್ನು ಮೊಟ್ಟಮೊದಲ ಬಾರಿಗೆ ಏಕೀಕರಿಸಿದ ಕೀರ್ತಿಗೆ ಪಾತ್ರನಾದ. ಇದೆಲ್ಲವನ್ನೂ ಆತ ಸಾಧಿಸಿದ್ದು ಕೇವಲ ಎಂಟು ವರ್ಷಗಳಲ್ಲಿ ಎಂಬುದು ಗಮನಾರ್ಹ.

ಇಮ್ಮಡಿ ಪುಲಕೇಶಿಯ ಪ್ರಭಾವ ಉತ್ತರ ಭಾರತವನ್ನು ಸೋಕಿದಂತೆ ಅಲ್ಲಿನ ಹಲವು ರಾಜರುಗಳು ತಾವಾಗಿಯೇ ಮುಂದುವರೆದು ಆತನ ಪ್ರಭುತ್ವಕ್ಕೆ ತಲೆಬಾಗಿದರು. ಇದರಿಂದ ಕೋಪಗೊಂಡ ಕನೌಜಿನ ಹರ್ಷವರ್ಧನ ಇಮ್ಮಡಿ ಪುಲಕೇಶಿಯ ಪ್ರಭಾವವನ್ನು ಅಡಗಿಸುವ ಪ್ರಯತ್ನಕ್ಕೆ ಮುಂದಾಗಿ, ನರ್ಮದೆಯ ತೀರದಲ್ಲಿ ಹಿಂದೆಂದೂ ಕಂಡರಿಯದ ಸೋಲನುಭವಿಸಿ ಯುದ್ಧದಿಂದ ಹಿಮ್ಮೆಟ್ಟಿದ. ಸಕಲೋತ್ತರಪಥೇಶ್ವರನ ಸದ್ದಡಗಿಸಿದ ಇಮ್ಮಡಿ ಪುಲಕೇಶಿ ಪರಮೇಶ್ವರ ಎಂಬ ಬಿರುದಿಗೆ ಪಾತ್ರನಾದ. ಈ ಹೊತ್ತಿಗೆ ಭಾರತದ ಬಹುಭಾಗ ಆತನ ಅಧಿಪತ್ಯವನ್ನು ಒಪ್ಪಿಕೊಂಡಾಗಿತ್ತು.

ವಿಜಯೋತ್ಸಾಹದಿಂದ ಮುನ್ನುಗ್ಗಿದ ಇಮ್ಮಡಿ ಪುಲಕೇಶಿಯ ದಂಡಿನ ದಾಳಿಗೆ ಕೋಸಲ, ಕಳಿಂಗ ಮತ್ತು ವಿಷ್ಣುಕುಂಡಿನ ರಾಜ್ಯಗಳು ಮಂಕಾದವು. ಮೂಡಣ ಕಡಲತೀರದ ಮೇಲೂ ತನ್ನ ಹಿಡಿತವನ್ನು ಸಾಧಿಸಿದ ಪುಲಕೇಶಿ ಪೂರ್ವಪಶ್ಚಿಮಸಮುದ್ರಾಧಿಪತಿಯೆಂಬ ಕೀರ್ತಿಗೆ ಪಾತ್ರನಾದ. ಅತ್ತ ಪಲ್ಲವರು ಇಮ್ಮಡಿ ಪುಲಕೇಶಿಗೆ ಸೋತ ವಿಷಯ ತಿಳಿಯುತ್ತಿದ್ದಂತೆ ಬೆಚ್ಚಿದ ಚೋಳ, ಚೇರ ಮತ್ತು ಪಾಂಡ್ಯರು ಆತನ ಕಾಲಿಗೆರಗಿ ಸ್ನೇಹಸಂಬಂಧಕ್ಕೆ ಮುಂದಾಗುತ್ತಾರೆ. ದಿವ್ಯಾ ಆಲೂರು ಮತ್ತು ಭುವನೇಶ್ ಅವರು ನಡೆಸಿಕೊಡುತ್ತಿರುವ ಈ ಸರಣಿಯ ಮುಂದಿನ ಕಂತಿನಲ್ಲಿ ಈ ಮಹಾನ್ ಐತಿಹಾಸಿಕ ಪುರುಷನ ಸಾಹಸಗಾಥೆ ಮುಂದುವರೆಯಲಿದೆ. ತಪ್ಪದೇ ನೋಡಿ.

The Chalukyas of Vatapi/Badami, a dominant dynasty of karnataka from the 6th to 8th centuries C.E., thrived under Immadi Pulakeshi. His ascension to power, marked by defeating his uncle Mangalesha, brought most of the Indian subcontinent under Karnataka's rule.

During Pulakeshi's early reign, he subdued the Kadambas, with the Alupas and Gangas willingly accepting his suzerainty. Pioneering a first ever powerful navy of 100 ships dedicated for warfare in the history of the subcontinent, he expanded the Chalukya empire by conquering the western coastal stretch, defeating the Konkan, Lata, and he defeated the northern kingdom of Malava, unifying the Kannada country within eight years.
His influence extended northward as lords voluntarily acknowledged him as their overlord. Harshavardhana of Kannauj, attempting to counter this, suffered a decisive defeat on the Narmada River. Pulakeshi assumed the title 'Parameshwara,' signifying his lordship over the Indian subcontinent.

Continuing his expansion, Pulakeshi conquered Kosala, Kalinga, and the Vishnukundina kingdom, securing control over the entire eastern coast. The Pallavas were subdued, compelling the Cholas, Cheras, and Pandyas to accept his overlordship. The saga of Immadi Pulakeshi promises more intriguing chapters in the second episode of this YouTube series hosted by divya alur and bhuvanesh. Stay tuned...

Thanks for watching please do subscribe !!
To know more about Karnatakas glorious History ,culture and tourist destination please Follow us on
=======================================================================
Facebook Page - https://www.facebook.com/karnatabala....
Twitter -   / karnatabala  
Instagram -   / karnatabala  
Website - www.karnatabala.com
Email - [email protected]

Комментарии

Информация по комментариям в разработке