ಸಂಗೀತ ಪ್ರಣತಿ #62 ನೆನಪಾಗಿ ಬಾರದಿರು|ನಿಸಾರ್ ಅಹಮದ್|ನಮ್ರತ ಪ್ರಸಾದ್|ಚಿದಂಬರ ಕಾಳಮಂಜಿ

Описание к видео ಸಂಗೀತ ಪ್ರಣತಿ #62 ನೆನಪಾಗಿ ಬಾರದಿರು|ನಿಸಾರ್ ಅಹಮದ್|ನಮ್ರತ ಪ್ರಸಾದ್|ಚಿದಂಬರ ಕಾಳಮಂಜಿ

ಸಂಗೀತ ಪ್ರಣತಿ #62
ನೆನಪಾಗಿ ಬಾರದಿರು
****************************
ರಚನೆ
ಕೆ.ಎಸ್. ನಿಸಾರ್ ಅಹಮದ್
ಗಾಯನ
ನಮ್ರತ ಪ್ರಸಾದ್
ಸಂಗೀತ
ಚಿದಂಬರ ಕಾಳಮಂಜಿ
*****************************
ಇದು ಒಬ್ಬ ಭಗ್ನಪ್ರೇಮಿಯ ನೋವಿನ ಗೀತೆ
ಅವರಿಬ್ಬರು ಪರಸ್ಪರ ಪ್ರೀತಿಸಿದರು ಬಾಳ ಸಂಗಾತಿಗಳಾಗಿ ಜೀವನ ನಡೆಸುವ ಕನಸು ಕಂಡರು
ಸುಂದರ ಕ್ಷಣಗಳನ್ನು ಕಳೆದರು ನಂತರ ಯಾವುದೋ ಕಾರಣಕ್ಕೆಮುರಿದು ಬಿತ್ತು ಸಂಬಂಧ
ಈಗ ಕಹಿ ನೆನಪುಗಳು ಕಾಡುತ್ತಿವೆ. ಸಹಿಸಲು ಕಷ್ಟಾಅಗ್ತಾ ಇದೆ ಈ ನೆನಪುಗಳನ್ನು
ಆದರೆ ಅದು ಹಿಂಸೆಯಾಗ್ತಾ ಇದೆ
ಇಂತಹ ತೀವ್ರ ಭಾವುಕತೆ ವ್ಯಕ್ತಪಡಿಸುವ ಕವಿತೆ ಇದು
******************************
ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೆ
ಎಂದೋ ನಲಿಸಿದ ನಗೆಯ ಸಂಚಿನಲ್ಲಿ
ಹೊಸಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ
--------------------
ಯೌವನದ ಹೊಸ್ತಿಲಲಿ ಕಟ್ಟಿದ್ದ ತೋರಣವ
ಕನಸ ತರಗೆಲೆಗಳನು ಬರಿದು ಮಾಡು
ಅದರ ಅಲುಗಾಟಕ್ಕೆ ನೆನಪು ಎಚ್ಚರವಾಗಿ
ಕೆದಕಲಿರಲೆದತುಂಬ ಜೇನುಗೂಡು
----------------------
ಮರೆತ ಗೋರಿಯ ಕೆದಕಿ ಹಸಿ ಎಲುಬುಗಳನಾಯ್ದು
ತುಂಬದಿರು ಮುಂಬಾಳ ಮಂಚದಲ್ಲಿ
ಸಿಂಗರಿಸದಿರು ನನ್ನ ಚಿತೆಯ ನಗೆಯನ್ನು ಹೊಯ್ದು
ನಾನೇ ಬೆಳಸಿದ ಹೂವ ಗೊಂಚಲಲ್ಲಿ
---------------
ಭವಿತವ್ಯದೊಸಗೆಯಲಿ ಸಾಲಾಗಿ ಇರಿಸದಿರು
ಅಂದೆಂದೋ ಮುಗಿದಿರುವ ದೀಪಗಳನು
ಚಂದಾದ ರೂಪಗಳನೊಂದೊಂದೆ ತಂದೆಸೆದು
ಮನದಲ್ಲಿ ಬಿತ್ತದಿರು ತಾಪಗಳನು
--------

Комментарии

Информация по комментариям в разработке