ಸೂರಾಲು ಮಣ್ಣಿನ ಅರಮನೆ / 600 years' old Sural mud Palace / No Foundation / ಎಂಟನೆಯ ಅದ್ಭುತ / 8th Wonder /

Описание к видео ಸೂರಾಲು ಮಣ್ಣಿನ ಅರಮನೆ / 600 years' old Sural mud Palace / No Foundation / ಎಂಟನೆಯ ಅದ್ಭುತ / 8th Wonder /

600 years' old "Sooralu (Sural) Palace", Walls constructed by clay/mud, Still breathing in Udupi District. No foundation at all. It is situated in Kokkarne Grama Panchayath of Udupi district. It was told that Tholvah Jain King had built this house. Shiriyara, Shankaranarayana, Basrur, Byndoor etc were being ruled from this Palace by Tholvah Kings as per experts. Shooting of everal famous films and TV serials were made here. "Madhwacharya" film of late G.V. Iyer was also shooted here only. It was told that the former Dharamadhikari of Sri Kshethra Dharmasthala Sri Rathnavarma Heggade, who is the father of present Dharmadhikari Sri Veerendra Heggade, born here in this mud palace.

ಎಲ್ಲಾ ಗೋಡೆಗಳನ್ನು ಬರೀ ಆವೆ ಮಣ್ಣಿನಿಂದ ಕಟ್ಟಿದ್ದರೂ, ಕಟ್ಪಿ 600 ವರ್ಷಗಳಾದರೂ, ಇನ್ನೂ ಉಳಿದುಕೊಂಡಿರುವ ಅರಮನೆ ಉಡುಪಿ ಜಿಲ್ಲೆ ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಬರೀ ಅರಮನೆ ಕಟ್ಟಡ ಇರುವ ಜಾಗದ ವಿಸ್ತೀರ್ಣವೇ ಒಂದು ಎಕ್ರೆ. ವಿಶೇಷವೇನೆಂದರೆ ಈ ಮನೆ ಪಂಚಾಂಗವಿಲ್ಲದೆ ನಿರ್ಮಾಣವಾಗಿದೆ. ತೊಳ್ವಾಹ ಜೈನ ಅರಸರು ಇದನ್ನು ಕಟ್ಟಿದ್ದಾರೆ ಎಂದು ನಂಬಲಾಗಿದೆ. ಆ ಅರಸರ ಆಳ್ವಿಕೆ ಸೂರಾಲಿನಿಂದ ಶಿರಿಯಾರ, ಶಂಕರನಾರಾಯಣ, ಬಸ್ರೂರು, ಬೈಂದೂರು ತನಕ ವಿಸ್ತರಿಸಿತ್ತು ಎನ್ನಲಾಗಿದೆ. ಈಗ ಅದರ ಉಸ್ತುವಾರಿ ಜೈನ ಜನಾಂಗದ, ನಿವೃತ್ತ ಕೆನರಾ ಬ್ಯಾಂಕ್ ಡಿವಿಶನಲ್ ಮೆನೇಜರ್ ಶ್ರೀ ಸುದರ್ಶನ ಶೆಟ್ಟಿಯವರ ಕೈಯಲ್ಲಿದೆ. ಅವರು ಮತ್ತು ಅವರ ಕುಟುಂಬ ಬೇರೆ, ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದು, ಅರಮನೆ ಖಾಲಿಯಿದ್ದರೂ, ಹಬ್ಬ, ಹರಿ ದಿನಗಳಲ್ಲಿ ಎಲ್ಲರೂ ಇದೇ ಮನೆಯಲ್ಲಿ ಒಂದಾಗಿ, ಎಲ್ಲಾ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಲವಾರು ಸಿನಿಮಾಗಳು, ಧಾರಾವಾಹಿಗಳು ಈ ಅರಮನೆಯಲ್ಲಿ ಚಿತ್ರೀಕರಣಗೊಂಡಿವೆ. ದಿI ಜಿ.ವಿ.ಅಯ್ಯರ್ ರವರ "ಮಧ್ವಾಚಾರ್ಯ" ಇಲ್ಲೇ ಚಿತ್ರೀಕರಣವಾಗಿದ್ದು. ನೀವೆಲ್ಲರೂ ಒಮ್ಮೆ ನೋಡಲೇಬೇಕಾದ ಅರಮನೆಯಿದು.

Комментарии

Информация по комментариям в разработке