Ujire Ernodi Koragajjana Punyapaada/Sunil Devadiga/Jayashree Belthangady/

Описание к видео Ujire Ernodi Koragajjana Punyapaada/Sunil Devadiga/Jayashree Belthangady/

ಜೈ ತುಳುನಾಡ್ 🚩🥰

ನಿರೀಕ್ಷೆಯಲ್ಲಿ ಕಾದಿರುವ ಎರ್ನೋಡಿ ಕ್ಷೇತ್ರ ಉಜಿರೆಯ ಸ್ವಾಮಿಕೊರಗಜ್ಜನ " ಕೊರಗಜ್ಜನ ಪುಣ್ಯಪಾದ*" ಎಂಬ ಕನ್ನಡ ಭಕ್ತಿಗೀತೆ *Sunil Devadiga YOUTUBE Chanel ನಲ್ಲಿ ಲೋಕಪ೯ಣೆಗೊಂಡಿದೆ ಎಲ್ಲರೂ ನೋಡಿ ಆಶೀರ್ವದಸಿ ಹಾಗೂ ಈ ತಂಡಕ್ಕೆ ಪ್ರೋತ್ಸಾಹಿಸಿ...
💥

ಟೈಟಲ್ : ಎರ್ನೋಡಿ ಕೊರಗಜ್ಜನ ಪುಣ್ಯ ಪಾದ

ನಿರ್ಮಾಣ ; ಯು ಬಾಬು ಮೊಗೇರ ಎರ್ನೊಡಿ ಆಡಳಿತ ಮುಖ್ಯಸ್ಥರು

ದಿನಾಂಕ ; 20 - 04 - 2023

ಗಾಯನ : ಸುನಿಲ್ ದೇವಾಡಿಗ ಉಜಿರೆ

ಗಾಯನ : ಜಯಶ್ರೀ ಬೆಳ್ತಂಗಡಿ

ಸಾಹಿತ್ಯ ; ಮನೀಷ್ ಕುತ್ತರ್

ಸಂಕಲನ : ಪ್ರಥಮ್

ಛಾಯಾಗ್ರಹಣ : ಚಂದನ್ ಆಚಾರ್ಯ

ಪೋಸ್ಟರ್ : ಸಹನ್ ಎಮ್ ಎಸ್ ಉಜಿರೆ

Special thanks to

ಪ್ರದೀಪ್ ಯು ಎರ್ನೊಡಿ
ದಿಲೀಪ್ ಯು ಎರ್ನೊಡಿ
ಕೆ, ಹರೀಶ್ ಕುಮಾರ್
ಗಣೇಶ್ ಶೆಟ್ಟಿ

ಸುನಿಲ್ ದೇವಾಡಿಗ ಯು ಟ್ಯೂಬ್ ಚಾನೆಲ್ ನಲ್ಲಿ

Subscribe the channel

Song lyrics


ಪಲ್ಲವಿ
ಗಂಡು : ಕಣ್ಣಾ ತುಂಬಾ ನಿನ್ನಾ ಬಿಂಬ ಸ್ವಾಮಿ ಕೊರಗ ತನಿಯಾ
ಹೆಣ್ಣು : ಕೂಗಿ ಕರೆದರೆ ಬೇಗನೆ ಬರುವೆ ಎರ್ನೊಡಿ ಕ್ಷೇತ್ರ ದ ಒಡೆಯ
ಗಂಡು :ದಂಟೆಯ ಅಭಯವ ನೀಡೆಂದು ಬಂದೆವು ನಿನ್ನ ನಿಲೆಗೆ
ಹೆಣ್ಣು; ಏಳು ಕೊಪ್ಪದ ನಾಡಲ್ಲಿ ಮಾಯದಿ ನೀನು ಮೆರೆವೆ
ಗಂಡು : ಕರಮುಗಿದು ಬೇಡುವೆ ತನಿಯಾ ನನ್ನ ಹರಸೆಂದು
ಹೆಣ್ಣು : ಕಣ್ಣಾ ತುಂಬಾ ನಿನ್ನಾ ಬಿಂಬ ಸ್ವಾಮಿ ಕೊರಗ ತನಿಯಾ
ಗಂಡು : ಕೂಗಿ ಕರೆದರೆ ಬೇಗನೆ ಬರುವೆ ಎರ್ನೊಡಿ ಕ್ಷೇತ್ರ ದ ಒಡೆಯ

ಚರಣ 1
ಹೆಣ್ಣು: ಆದಿ ಮೂಲ ನಾಗ ದೇವನೆ ನಿನ ಪಾದಕೆ ನಮಿಸುವೆನು ಭಕ್ತಿಯಿಂದಲೇ
ಅನಾದಿ ಕಾಲದ ಮಹಾ ದೈವ ಅಣ್ಣಪ್ಪನೆ
ಕಾಡ ಹೂ ನಿನಗೆ ಅರ್ಪಣೆ |
ಗಂಡು : ಶಿವಧೂತ ಗುಳಿಗಾ ಸ್ವಾಮಿ ಮೊಗೇರ ದೈವ ನಮಾಮಿ
ತುಳುನಾಡಿನ ಮಣ್ಣನು ಕಾಯುವ ಕರಿನೆರಳ ತನಿಯ ಸ್ವಾಮಿ |
ಹೆಣ್ಣು : ಮಲ್ಲಿಗೆ‌‌ ನಿನ್ನ ಮೂರ್ತಿಗೆ|
ಕಲಿ ಕಾಲದ ದೈವ ತನಿಯಾನೆ |
ಒಟ್ಟಿಗೆ:
ಮನದಲಿ ನೆನೆಯುತಾ ಹಾಡುವೆ
ಒಟ್ಟಿಗೆ :
ಸ್ವಾಮಿ ತನಿಯನೆ ದೈವಿ ಶಕ್ತಿಯೇ
ಕಲಿಯುಗ ಕಾಲದ ಮಾಯ |
ಬೀಡ ಚಕ್ಕುಲಿ ಅಸರು ಹೂವಿಗೆ
ಇಷ್ಟದಿ ಒಲಿವ ಮಾಯ
ಗಂಡು : ಕಣ್ಣಾ ತುಂಬಾ ನಿನ್ನಾ ಬಿಂಬ ಸ್ವಾಮಿ ಕೊರಗ ತನಿಯಾ
ಹೆಣ್ಣು : ಕೂಗಿ ಕರೆದರೆ ಬೇಗನೆ ಬರುವೆ ಎರ್ನೊಡಿ ಕ್ಷೇತ್ರ ದ ಒಡೆಯ

ಚರಣ 2
ಹೆಣ್ಣು : ಬಗೆ ಬಗೆಯ ಹೂವನು ನಾ ತಂದೇ ಸಿಂಗಾರಕೆ
ಸಾರಳ ಪಟ್ಟದ ತನಿಯಾನಿಗೆ |
ಮನನೊಂದು ಹುಡುಕುತಾ ನಾ ಬಂದೆ ನಿನ ನೆರಳನ್ನು
ಕೈ ಹಿಡಿದು ಸಲಹು ನೀ ತಂದೆ |
ಗಂಡು: ಕಡಲನಾಡಿನಲ್ಲಿ ನಿನ್ನ ಕಾರ್ನಿಕವು ಎಣಿಕೆಗೆ ಸಿಗದು |
ಎರ್ನೊಡಿಯಲ್ಲಿ ನಿನ್ನ ಶಕ್ತಿಯು ನೆಲೆಯಾಗಿವುದು |
ಹೆಣ್ಣು: ಕರುಣಾಮಯನೆ ಶಿವರೂಪಿಯೆ
ಕರಿಕತ್ತಲ ಬದುಕನು ಬೆಳಗಿಸು ತಂದೆ |
ಒಟ್ಟಿಗೆ:
ಮನದಲಿ ನೆನೆಯುತಾ ಹಾಡುವೆ
ಒಟ್ಟಿಗೆ :
ಸ್ವಾಮಿ ತನಿಯನೆ ದೈವಿ ಶಕ್ತಿಯೇ
ಕಲಿಯುಗ ಕಾಲದ ಮಾಯ |
ಬೀಡ ಚಕ್ಕುಲಿ ಅಸರು ಹೂವಿಗೆ
ಇಷ್ಟದಿ ಒಲಿವ ಮಾಯ //ಕಣ್ಣ ತುಂಬ//

#bhakti #share #share #subscribe #singer #devotional #devotionalsongs #ayyappa #narayan #guligatsurajchavan #amma #devi #comment #actor #singing #sing #singer #gayangaming

Комментарии

Информация по комментариям в разработке