ಕಾಲಭೈರವೇಶ್ವರ ಇತಿಹಾಸ Devaramane hills

Описание к видео ಕಾಲಭೈರವೇಶ್ವರ ಇತಿಹಾಸ Devaramane hills

#devaramane #devaramanetreaking : ಕರ್ನಾಟಕದ ಚಿಕ್ಕಮಗಳೂರು ಪ್ರದೇಶವು ಹಚ್ಚ ಹಸಿರ ಬನದಿಂದ ಕೂಡಿದ್ದು ಕಾಫಿನಾಡು ಎಂದೇ ಪ್ರಸಿದ್ಧವಾಗಿದೆ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿದೆ ಅಲ್ಲದೆ ದೂರದೂರಿನ ಚಾರಣಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಅತ್ಯಂತ ಅದ್ಭುತವಾದ ಚಾರಣ ಸ್ಥಳಗಳಲ್ಲಿ ಒಂದು ದೇವರ ಮನೆ ಬೆಟ್ಟ
ಕಾಫಿನಾಡು ಚಿಕ್ಕಮಗಳೂರಿನಲ್ಲಿರುವ ದೇವರಮನೆ ಚಾರಣಿಗರನ್ನು ಆಕರ್ಷಿಸುವ ಸುಂದರ ತಾಣವಾಗಿದೆ. ಮೈ ಕೊರೈಸುವ ಚಳಿ, ಜೋರಾಗಿ ಬೀಸುವ ಗಾಳಿ, ಹಾಲಿನ ಬಣ್ಣದಂತಿರುವ ಮಂಜು ಭೂ ಲೋಕದಲ್ಲಿ ಸ್ವರ್ಗದ ಅನುಭವವನ್ನು ನೀಡುತ್ತದೆ.
: ಸುಂದರವಾದ ಪರಿಸರ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಈ ದೇವರಮನೆ ಮೂಡಿಗೆರೆಯಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಇದು ಅತ್ಯಂತ ಅದ್ಭುತವಾದ ಕೆಲವು ಚಾರಣದ ಹಾದಿಗಳಿಗೆ ನೆಲೆಯಾಗಿದೆ. ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಇಲ್ಲಿ ಬೆಟ್ಟಗುಡ್ಡಗಳಲ್ಲಿ ಚಾರಣ ಹೋಗುವುದೆಂದರೆ ಅದು ರೋಮಾಂಚಕ ಅನುಭವ.
: ದೇವರಮನೆ ಟ್ರೆಕ್ ಪ್ರಕೃತಿ ಸೌಂದರ್ಯದ ನಡುವೆ ಅದರ ಆಹ್ಲಾದಕರ ಅನುಭವವನ್ನು ನೀಡುತ್ತದೆ. ಚಾರಣಿಗರು ಶಿಖರಗಳನ್ನು ಏರುತ್ತಾ, ಹುಲ್ಲುಗಾವಲುಗಳಲ್ಲಿ ಅಡ್ಡಾಡುತ್ತಾರೆ, ಮತ್ತು ತಣ್ಣನೆಯ ಗಾಳಿಯ ಅನುಭವವನ್ನು ಇಲ್ಲಿ ಪಡೆಯುತ್ತಾರೆ.
: ದೇವರಮನೆ ಸ್ಥಳವು ಹೆಸರಿನಂತೆ ಧಾರ್ಮಿಕವಾಗಿಯೂ ಪ್ರಸಿದ್ಧಿಯನ್ನು ಪಡೆದಿದೆ ಇಲ್ಲಿನ ಕಾಲಭೈರೆಶ್ವರ ದೇವಾಲಯ ಇದಕ್ಕೆ ನಿದರ್ಶನವಾಗಿದೆ. ಕಾಲಭೈರೇಶ್ವರ ದೇವಾಲಯದ ದರ್ಶನ ಪಡೆದ ಪ್ರವಾಸಿಗರು 20-25 ಕಿ. ಮೀ. ದೂರ ಟ್ರಕ್ಕಿಂಗ್ ಮಾಡಿ ಗುಡ್ಡವನ್ನೇರುತ್ತಾರೆ. ಮೈ ಕೊರೈಸುವ ಚಳಿ, ಜೋರಾಗಿ ಬೀಸುವ ಗಾಳಿ, ಹಾಲಿನ ಬಣ್ಣದಂತಿರುವ ಮಂಜು ಭೂ ಲೋಕದಲ್ಲಿ ಸ್ವರ್ಗದ ಅನುಭವವನ್ನು ನೀಡುತ್ತದೆ.
ಸುಮಾರು 800 ವರ್ಷಗಳಿಗಿಂತಲೂ ಅಧಿಕವಾದ ಇತಿಹಾಸವನ್ನು ಹೊಂದಿರುವ ಕಾಲಭೈರವ ದೇವಾಲಯವು ಅನೇಕ ಜನರ "ಮನದೇವ್ರು" ಕೂಡ ಆಗಿದೆ. ಇಲ್ಲಿನ ಶ್ರೀಗಂಧದ ಸುವಾಸನೆಯು ಪ್ರವಾಸಿಗರ ಮನಸೆಳೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಅರಳುವ ಹಾರ್ಲು ಹೂವುಗಳನ್ನು ಇಲ್ಲಿ ನೋಡಬಹುದು. ಈ ದೇವಸ್ಥಾನವನ್ನು ಚೋಳರ ಕಾಲದಲ್ಲಿ ವೆಂಕಣ್ಣನೆಂಬ ಶಿಲ್ಪಿಯು ನಿರ್ಮಿಸಿದನೆಂಬ ಪ್ರತೀತಿ ಇದೆ.
: ಇಲ್ಲಿನ ಇನ್ನೊಂದು ವಿಶೇಷತೆಯೆಂದರೆ ದೇವಾಲಯದ ಮುಂದೆ ಕೆರೆಯೊಳಗಡೆ ಇರುವ ಬಾವಿಯಾಗಿದೆ. ಇದನ್ನು ನೋಡಲೆಂದೇ ಜನ ಇಲ್ಲಿಗೆ ಧಾವಿಸುತ್ತಾರೆ. ಏಕೆಂದರೆ ಕೆರೆ ಮತ್ತು ಬಾವಿ ಒಟ್ಟಿಗೆ ಇರುವುದೇ ಒಂದು ವಿಶೇಷವಾಗಿದೆ.
ಇಲ್ಲಿಗೆ ಬರುವ ಚಾರಣಿಗರಿಗೆ ಬೆಂಗಳೂರು (259 ಕಿಮೀ), ಚಿಕ್ಕಮಗಳೂರು (30 ಕಿಮೀ), ಹಾಸನ (62 ಕಿಮೀ), ಮಂಗಳೂರು (124 ಕಿಮೀ), ಮೈಸೂರು (149 ಕಿಮೀ) ನಿಂದ ಮೂಡಿಗೆರೆಗೆ ನಿಯಮಿತ ಬಸ್ಸುಗಳು ಚಲಿಸುತ್ತವೆ.
ವರ್ಷದ ಮೂನ್ನೂರೈವತ್ತು ದಿನವೂ ಇಲ್ಲಿಗೆ ಪ್ರವಾಸಿಗರು ಆಗಮಿಸಿ ಇಲ್ಲಿನ ರಮಣೀಯ ದೃಶ್ಯದ ನೋಟವನ್ನು ಆನಂದಿಸುತ್ತಾರೆ. ಪ್ರಕೃತಿ ಮಾತೆಯ ಸೌಂದರ್ಯದ ಆಗರವಾಗಿರವ ದೇವರಗುಡ್ಡಕ್ಕೆ ಪ್ರತಿನಿತ್ಯ ನೂರಾರು ಚಾರಣಿಗರು ಭೇಟಿ ನೀಡುತ್ತಾರೆ.
: ಇಲ್ಲಿ ಟ್ರಕ್ಕಿಂಗ್‌ಗೆ ಹಲವಾರು ಬೆಟ್ಟಗಳಿವೆ, ಎತ್ತಿನಾ ಭುಜ - ಬುಲ್ಸ್ ಹಂಪ್-ಬ್ಯಾಕ್, ಇದನ್ನು ಶಿಶಿಲಾ ಗುಡ್ಡ ಎಂದೂ ಕರೆಯುತ್ತಾರೆ. ಈ ಪ್ರದೇಶದ ಉಳಿದ ಶಿಖರಗಳ ಮೇಲೆ ಗೋಪುರಗಳಿವೆ. 3000 ಅಡಿ ಎತ್ತರದಿಂದ ಕೆಳಗೆ ಹರಿಯುವ ನದಿಯ ಸದ್ದನ್ನು ಕೇಳಿಸಬಹುದು #devaramane view point #Devirammabettachikmagalur #Deviramma betta chikmagalur #whatsappstatusDevaramane betta chikmagalurdevirammabettachikmagalur trekking #kalabairavatemple #Treakinghowtoreach devaramane tghow to reach devaramaneDeviramma betta chikmagalur whatsapp statusdeviramma betta chikmagalur trekking #ದೇವರಮನೆಕಾಲಬೈರವೇಶ್ವರದೇವಸ್ಥಾನಇತಿಹಾಸ #ಚಾರಣ ##devaramanedeviramma betta 2022devaramane viewpointdeviramma betta in chikkamagalurudeviramma temple chikmagalurdeviramma betta videodeviramma betta statusdeviramma betta bindiga mallenahalli#deviramma bettadeviramma betta deepavali mahothsava 2020 chikmagalurdeviramma betta drone view #history https://youtube.com/@anilkumarkvenuvl... instagram link : https://instagram.com/anilkumar_k_ven... hillschikmagalur tourist placesdevaramane chikmagalurbangalore to devaramanedevaramane routemudigere to devaramanedevaramane bettachikmagalur to devaramanedevaramane templedevaramane road conditioncharmadi ghat to devaramanedevaramane ghat roadsteps together chikmagalurdevaramane betta chikmagalurwestern ghatskarnataka tourismwestern ghats of indiadevaramane mudigere

Комментарии

Информация по комментариям в разработке