ಚಿನ್ನದ ಅಂಬಾರಿಗೂ ಕೊಪ್ಪಳದ ಹೇಮಗುಡ್ಡಕ್ಕೂ ಇದೆ ನಂಟು! | Mysuru Dasara | Hemagudda | Vijay Karnataka

Описание к видео ಚಿನ್ನದ ಅಂಬಾರಿಗೂ ಕೊಪ್ಪಳದ ಹೇಮಗುಡ್ಡಕ್ಕೂ ಇದೆ ನಂಟು! | Mysuru Dasara | Hemagudda | Vijay Karnataka

ನಾಡಿನಲ್ಲೆಡೆ ದಸರಾ ಸಂಭ್ರಮ ಜೋರಾಗಿದೆ. ಅದರಲ್ಲೂ ಮೈಸೂರು ದಸರಾ ವರ್ಲ್ಡ್‌ ಫೇಮಸ್‌.. ಮೈಸೂರು ದಸರಾ ಅಂದ್ರೇ ಥಟ್ಟನೆ ತಲೆಗೆ ಬರೋದು ಚಾಮುಂಡಿ ದೇವಿಯನ್ನು ಹೊತ್ತು ನಡೆಯುವ ಚಿನ್ನದ ಅಂಬಾರಿಯ ಜಂಬೂ ಸವಾರಿ ಮೆರವಣಿಗೆ. ಈ ಅಂಬಾರಿ ಹಾಗೂ ಮೈಸೂರು ದಸರಾಕ್ಕೆ ಮೂಲ ಪ್ರೇರಣೆ ಕೊಪ್ಪಳ ಜಿಲ್ಲೆ ಎಂದರೇ ನೀವು ನಂಬಲೇಬೇಕು.

ಹೌದು, ಮೈಸೂರು ದಸರಾಕ್ಕೆ ಶತಮಾನಗಳ ಇತಿಹಾಸವಿದೆ. ಈ ಇತಿಹಾಸ ಆರಂಭವಾಗುವುದು ಕೊಪ್ಪಳ ಜಿಲ್ಲೆಯಿಂದ ಎಂಬುವುದು ವಿಶೇಷ. ಚಿನ್ನದ ಅಂಬಾರಿಯ ಮೂಲ ಮಹಾರಾಷ್ಟ್ರದ ದೇವಗಿರಿ, 14ನೇ ಶತಮಾನದಲ್ಲಿ ದೇವಗಿರಿ ರಾಜ್ಯ ನಾಶವಾದ ಬಳಿಕ ಅಂದು ಬಳ್ಳಾರಿ ಜಿಲ್ಲೆಯ ರಾಮದುರ್ಗಾದಲ್ಲಿ ಆಡಳಿತ ನಡೆಸುತ್ತಿದ್ದ ಮುಮ್ಮಡಿ ಸಿಂಗನಾಯಕರಿಗೆ ಈ ಅಂಬಾರಿಯನ್ನು ನೀಡಿದರು. ಮುಮ್ಮಡಿ ಸಿಂಗನಾಯಕ ನಂತರ ಕಂಪಿಲರಾಯ ಈ ಅಂಬಾರಿಯನ್ನು ಜೋಪಾನವಾಗಿ ಕಾಪಾಡುತ್ತಾರೆ. ಇದೇ ವೇಳೆ ಈಗಿನ ಹೇಮಗುಡ್ಡದ ಕೋಟೆಯಲ್ಲಿ ಶ್ರೀದುರ್ಗಾ ಪರಮೇಶ್ವರಿಯನ್ನು ಪ್ರತಿಷ್ಠಾಪಿಸಿ ಪ್ರತಿ ವರ್ಷ ವಿಜಯ ದಶಮಿಯ ಸಂದರ್ಭದಲ್ಲಿ ದಸರಾ ಆಚರಣೆ ಮಾಡಲಾಗುತ್ತಿತ್ತು.

ಅದಾದ ಬಳಿಕ 1327ರಲ್ಲಿ ದೆಹಲಿ ಸುಲ್ತಾನರ ದಾಳಿಯ ಬಳಿಕ ಕಂಪಿಲರಾಯನ ಮಗ ಗಂಡುಗಲಿ ಕುಮಾರರಾಮನು ಅಂಬಾರಿಯನ್ನು ತನ್ನ ಮಾವಂದಿರಾದ ಹಕ್ಕ ಬುಕ್ಕರಿಗೆ ನೀಡಿದ್ದಾನೆ. ಹಕ್ಕ-ಬುಕ್ಕರು 1336ರಲ್ಲಿ ಆನೆಗುಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸುತ್ತಾರೆ. ಹಂಪಿಯಲ್ಲಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಹಂಪಿಯಲ್ಲಿ ಮಹಾನವಮಿ ದಿಬ್ಬ ತಲೆಯೆತ್ತಿದೆ.
ಬೈಟ್‌: ಶರಣಬಸಪ್ಪ ಕೋಲ್ಕಾರ್‌, ಇತಿಹಾಸ ತಜ್ಞ

ಈ ನಡುವೆ ಹೇಮಗುಡ್ಡದಲ್ಲಿ ದಸರಾವನ್ನು ಕನಕಗಿರಿಯ ಗುಜ್ಜಲ ವಂಶಸ್ಥರು ಮುಂದುವರಿಸಿಕೊಂಡು ಹೋಗಿದ್ದರು. ಈ ವೇಳೆ ಇಲ್ಲಿನ ಅಂಬಾರಿಯನ್ನು ಪೆನಗುಂಡಿಗೆ ರವಾನಿಸಲಾಗಿತ್ತು. ಪೆನಗುಂಡಿಯ ಬಳಿಕ ಅಂಬಾರಿಯನ್ನು ಶ್ರೀರಂಗಪಟ್ಟಣದ ಶ್ರೀರಂಗನಾಯಕರಿಗೆ ಹಸ್ತಾಂತರಿಸಲಾಗಿದೆ. ಶ್ರೀರಂಗಪಟ್ಟಣದ ಬಳಿಕ ಮೈಸೂರು ಒಡೆಯರು ದಸರಾವನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಮೈಸೂರು ದಸರಾದ ಸಂಭ್ರಮದ ಅಂಬಾರಿಯು ಕೊಪ್ಪಳ ಜಿಲ್ಲೆಯ ಮೂಲ ಎಂಬುವುದು ಈ ಭಾಗದ ಜನರಿಗೆ ಹೆಮ್ಮೆಯಾಗಿದ್ದು, ಈಗಲೂ ಹೇಮಗುಡ್ಡದಲ್ಲಿ ಅದ್ಧೂರಿ ದಸರಾ ಆಚರಣೆ ನಡೆಯುತ್ತಿದೆ.

#koppal #dasara #goldenchariot

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке