Kogile Haadide Kelidiya - Video Song | Samayada Gombe | Dr Rajkumar | Meanaka | S Janaki

Описание к видео Kogile Haadide Kelidiya - Video Song | Samayada Gombe | Dr Rajkumar | Meanaka | S Janaki

Song: Kogile Haadide Kelidiya - HD Video.
Kannada Movie: Samayada Gombe
Actor: Dr Rajkumar, Srinath, Menaka
Music: M Ranga Rao
Singer: Dr Rajkumar, S Janaki
Lyrics: Chi Udayashankar
Director: Dorai-Bhagvan
Year: 1984

Kogile Haadide Kelidiya Song Lyrics In Kannada:

ಹೆಣ್ಣು : ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ

ಹೆಣ್ಣು : ಅಮ್ಮನು ಕಂದನ ಕೂಗುವ ಹಾಗೆ ತಂಗಿಯು ಅಣ್ಣನ ಹುಡುಕುವ ಹಾಗೆ
ಅಮ್ಮನು ಕಂದನ ಕೂಗುವ ಹಾಗೆ ತಂಗಿಯು ಅಣ್ಣನ ಹುಡುಕುವ ಹಾಗೆ
ಪ್ರೀತಿಯ ಚಿಲುಮೆ ಉಕ್ಕುವ ಹಾಗೆ ಕಾತರದಿಂದ ಪಂಚಮ ಸ್ವರದಿ
ಕೊಳಲಿಂದ ಹೊರಬಂದ ಸಂಗೀತದಂತೆ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ

ಗಂಡು : ಆಆಆಆ....
ಕಾಣದ ಸಿರಿಯ ನೋಡಿದ ಹಾಗೆ ದೊರಕದ ಮಾಣಿಕ್ಯ ದೊರಕಿದ ಹಾಗೆ
ಕಾಣದ ಸಿರಿಯ ನೋಡಿದ ಹಾಗೆ ದೊರಕದ ಮಾಣಿಕ್ಯ ದೊರಕಿದ ಹಾಗೆ
ಬಾಳಲಿ ಬೆಳಕು ಮೂಡಿದ ಹಾಗೆ ಸಡಗರ ಬದುಕಲಿ ತುಂಬುವ ಹಾಗೆ
ಬಾಡಿದ ಬಳ್ಳಿ ಚಿಗುರಿದ ಹಾಗೆ ಇರುಳಲಿ ಜ್ಯೋತಿ ಬೆಳಗಿದ ಹಾಗೆ
ಸವಿಯಾಗಿ ಇಂಪಾಗಿ ಆನಂದದಿಂದ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ

ಗಂಡು : ಕಂಗಳು ಕನಸು ಕಾಣುವ ಹಾಗೆ ತಿಂಗಳ ಬೆಳಕು ತುಂಬಿದ ಹಾಗೆ
ಹೃದಯದ ನೈದಿಲೆ ಅರಳಿದ ಹಾಗೆ ಹರುಷದ ಹೊನಲು ಹೊಮ್ಮಿದ ಹಾಗೆ
ನೆನಪಿನ ಅಲೆಯಲಿ ತೇಲಿದ ಹಾಗೆ ನೋವೋ ನಲಿವೋ ತಿಳಿಯದ ಹಾಗೆ
ಸಂಗೀತ ಸುಧೆಯಿಂದ ಸುಖ ನೀಡುವಂತೆ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ
ಹೊಸ ಹೊಸ ಭಾವ ಕುಣಿಸುತ ಜೀವ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆಸುತ ನೋವ ಪ್ರೇಮವ ತುಂಬಿ
ಕೋಗಿಲೆ ಹಾಡಿದೆ ಕೇಳಿದೆಯ ಹೊಸ ರಾಗವ ಹಾಡಿದೆ ಆಲಿಸೆಯ

Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Samayada Gombe – ಸಮಯದ ಗೊಂಬೆ1984*SGV

Комментарии

Информация по комментариям в разработке