ಭಾಗ 3
ಹಳ್ಳಿ ಜೀವನವನ್ನು ಪ್ರೀತಿಸುವವರೇ
.
ನಾನು(ರೇಣುಕಾ )ಬೆಳಗ್ಗೆ ಬೇಗ ಎದ್ದು ಬಾಗಿಲು, ತುಳಸಿ ಪೂಜೆ ಮಾಡಿ. ರಾಗಿ ಅಂಬಲಿ ಮಾಡುತಿದ್ದೆ, ನನ್ನ ತಂದೆ ಮೆಕ್ಕೆಜೋಳವನ್ನು ಬಿಸಿಲಿಗೆ ಹರಡುತ್ತಿದ್ದರು. ರಾಗಿ ಅಂಬಲಿ ಮಾಡಲು ಮೊದಲು ಸ್ವಲ್ಪ ನೀರನ್ನು ಪಾತ್ರೆಗೆ ಹಾಕಿ ಅನಂತರ ನೀರು ಸ್ವಲ್ಪ ಬಿಸಿಯಾದಾಗ ರಾಗಿಹಿಟ್ಟು ಹಾಕಿ ಚೆನ್ನಾಗಿ ತಿರುವಬೇಕು, ಜೊತೆಗೆ ಹಾಲನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಅಂಬಲಿ ಹುಕ್ಕಿ ಬರುವಾಗ,ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿದಾಗ ಅಂಬಲಿ ತಯಾರಾಗುತ್ತದೆ.ಅಂಬಲಿ ಯನ್ನು ನಾನು ಮತ್ತು ನನ್ನ ತಂದೆ ಇಬ್ಬರು ಕುಡಿದೆವು.
ಈ ದಿನ ರಾಗಿ ಮುದ್ದೆ, ಹೆಸರುಕಾಳು ಉದುಕ,ಒಗ್ಗರಣೆ ಹೆಸರುಕಾಳು ಹೇಗೆ ಮಾಡೋದು ಅಂತ ನಿಮಗೆ ಹೇಳಿಕೊಡ್ತೀನಿ.
ಮೊದಲು ಹೊರಗಡೆ ಮೆಣಸಿನಕಾಯಿನ ಬಿಸಿಲಿಗೆ ಒಣಗಲು ಹಾಕಿದೆ. ನಂತರ ಒಳಗೆ ಹೋಗಿ ಎರಡು ಸೇರು ರಾಗಿಯನ್ನು ತಂದು ನೀರಿನಲ್ಲಿ ಚನ್ನಾಗಿ ತೊಳೆದು ಬಿಸಿಲಿಗೆ ಹಾಕಿ, ನನ್ನ ತಮ್ಮನ ಜೊತೆಗೆ ಚಾವಂಗ ಆಟ ಆಡಿದೆ ಮತ್ತು ಆಟದಲ್ಲಿ ನಾನೆ ಗೆದ್ದೆ.
ಅಷ್ಟರಲ್ಲಿ ರಾಗಿಕಾಳು ಒಣಗಿದ್ದವು, ಅವನ್ನು ಒಳಗೆ ಒಯ್ದು ಅರೆಯುವ ಕಲ್ಲಿನಿಂದ ಅರೆದು ಜರಡಿ ಇಡಿದು, ಹಿಟ್ಟನ್ನು ಪಾತ್ರೆಗೆ ಹಾಕಿಟ್ಟೇನು.
ಹೆಸರುಕಾಳುಗಳನ್ನು ಬಿಸಿನೀರಿನಲ್ಲಿ ಬೇಯಿಸಲು ಹಾಕಿ,ಸಾಂಬಾರ್ ಮಾಡಲು ಬೇಕಾದ ಮಸಾಲೆಗಳನ್ನು ತೆಗೆದುಕೊಂಡು, ಹಂಚಿನಲ್ಲಿ ಉರಿದುಕೊಂಡೆನು. ಎಲ್ಲಾ ಮಸಾಲೆಗಳನ್ನ ರುಬ್ಬಿ ಮಸಾಲಾ ಪೇಸ್ಟ್ ಮಾಡಿ, ನಂತರ ಒಗ್ಗರಣೆ ಕೊಟ್ಟು ಉದುಕ ಮತ್ತು ಒಗ್ಗರಣೆ ಕಾಳು ಮಾಡಿದೆನು.ಅಷ್ಟರಲ್ಲಿ ನನ್ನ ತಂದೆ ಮೆಕ್ಕೆಜೋಳದ ಚಿಲಗಳನ್ನು ತುಂಬಿ ಊಟಕ್ಕೆ ಬಂದರು, ನಾವಿಬ್ಬರು ಊಟ ಮಾಡಿದೆವು.
ಶುಭದಿನ 🙏🏼🙏🏼
EPISODE - 03
Dear Village Life lovers
In the morning I (Renuka) get up early in the morning and do door and Tulsi puja. I was making millet and my father was spreading maize in the sun. To make ragi ambali, first put some water in a pot, then when the water gets a little hot, add the ragi flour and stir well, add milk and mix well.Ambali is prepared when the jaggery is added and mixed. I and my father drank Ambali.
Today I am going to tell you how to make ragi mudde, greengram uduka, oggarane greengram.
First, I put the chillies outside to dry in the sun. Then went inside and brought two sets of millet, washed it well in water and put it in the sun, played a game of Chavanga with my brother and I won the game.
Meanwhile, the millets were dry, they were taken inside and ground with a millstone and sieved, and the flour was put into a pot.
Put the Greengrams to boil in hot water, take the spices needed to make the sambar, and put them on fire. Grind all the spices to make a masala paste, then fried it and make sambar.
my father came for lunch We both had lunch
Good Day
Glad To Say: We Are Inspired From The Traditional Life, 李子柒 Liziqi, Dianxi Xiaoge, Traditional Me, Poorna - The nature girl,
Thanks for your great support
EPISODE - 01 - • ಪುಂಡಿ ಪಲ್ಯ,ಜೋಳದ ರೊಟ್ಟಿ,ಹುರಿದ ಹಸಿ ಮೆಣಸ...
EPISODE - 02- • ಹಳ್ಳಿ ಶೈಲಿಯಲ್ಲಿ ಮೀನು ಫ್ರೈ /Fish fry/f...
#ragimudde#villagelife#villagecooking#howtomakeragimudde#ragimudderecipeinkannada
Информация по комментариям в разработке