ಉಪಯುಕ್ತ ಇದು ಕಲಿಕೆಯ ಸಾಗರ, ಕಲಿಯುವ ಮನಸಿಗೆ ಆಧಾರ, ಕಲಿಯುತ ನಲಿಯುವ ತಾಯಿ ನುಡಿಯ ಎಂಬಂತೆ ಎಲ್ಲಾ ಕುಲಕೋಟಿ ಕನ್ನಡಿಗರ ಪಾದಾರವಿಂದಕ್ಕೆ ಶರಣಾಗಿ, ಕನ್ನಡ ಭಾಷೆಯನ್ನು ಕಲಿಯುವ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಕರಿಗೆ ಉಪಯೋಗವಾಗಲೆಂದು ಸಿದ್ಧಪಡಿಸಿರುವ ಒಂದು ಮಾಧ್ಯಮವೇ ಈ "ಉಪಯುಕ್ತ".
ಮಾನ್ಯರೇ,
ಉಪಯುಕ್ತ ಇದು ಕಲಿಕೆಯ ಸಾಗರ, ಕಲಿಯುವ ಮನಸ್ಸಿಗೆ ಆಧಾರ, ನಲಿಯುತ ಕಲಿಯುವ ತಾಯಿ ನುಡಿಯ ಎಂಬಂತೆ ೧ ರಿಂದ ೧೦ ನೇ ತರಗತಿ ಹಾಗು ಪ್ರಥಮ, ದ್ವಿತೀಯ ಪಿಯುಸಿಯಲ್ಲಿ ಕನ್ನಡ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗು ಕನ್ನಡ ಕಲಿಸುವ ಶಿಕ್ಷಕರಿಗೆ ಈ ಯೂ ಟೂಬ್ ಚಾನಲ್ ನ ಧ್ವನಿಮುದ್ರಣವು ಸಹಕಾರಿಯಾಗುತ್ತದೆ.
ಇತ್ತೀಚಿನ ಕನ್ನಡ ಭಾಷೆಯ ಕಲಿಕಾ ವಿದ್ಯಾಮಾನಗಳನ್ನು ಗಮನಿಸಿದ ನಾನು ಏನಾದರೂ ಬದಲಾವಣೆಯನ್ನು ತರಬೇಕೆಂದು ಹಂಬಲಿಸಿ, ಶ್ರಮವಹಿಸಿ ಈ ಯೂ ಟೂಬ್ ಚಾನಲ್ ತಯಾರಿಸಿದ್ದೇನೆ. ಈಗಿನ ವಿದ್ಯಾರ್ಥಿಗಳು ಕನ್ನಡ ಕಲಿಯುವ ಅವಶ್ಯಕತೆ ಏನಿದೆ? ನಮಗೇಕೆ ಕನ್ನಡ? ಯಾಕೆ ನಾವು ಕಲಿಯಬೇಕು? ನಮಗೆ ಕನ್ನಡ ಓದಲು, ಬರೆಯಲು, ಕಲಿಯಲು ಕಷ್ಟ? ಎನ್ನುವ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯನ್ನು ಮನಗಂಡು ಕನ್ನಡ ಭಾಷೆಯು, ಎಂದೂ ಉನ್ನತ ಮಟ್ಟದಲ್ಲಿರಬೇಕು. ಎಲ್ಲರಿಗೂ ದೊರಕುವಂತಿರಬೇಕು, ಎಲ್ಲರಿಗೂ ಕನ್ನಡ ಸುಲಲಿತವಾಗಿ, ಪ್ರೀತಿಯ ಭಾಷೆಯಾಗಿ ಲಭಿಸಬೇಕು. ಕನ್ನಡವನ್ನು ಕಲಿಯುವುದು ಕಷ್ಟ, ಅದು ಅನವಶ್ಯಕ ಭಾಷೆ ಎಂಬ ಮನಸ್ಸನ್ನು ಬದಲಿಸಬೇಕು ಎಂಬ ನಿಟ್ಟಿನಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿರುವ ನಾನು ಮಾಡಿರುವಂತಹ ಒಂದು ಸಣ್ಣ ಪ್ರಯತ್ನ ಇದಾಗಿದೆ.
ತಾವುಗಳು ಈ ನಮ್ಮ ಕನ್ನಡ ಕಲಿಕೆಯ ಉಪಯುಕ್ತ ಯೂ ಟೂಬ್ ಚಾನಲ್‌ಅನ್ನು ವಿದ್ಯಾರ್ಥಿಗಳು ಹಾಗು ಶಿಕ್ಷಕರು ಉಪಯೋಗಿಸಲು ಉತ್ತೇಜಿಸುವಂತೆ ಈ ಮೂಲಕ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ. ದಯಮಾಡಿ ಈ ನನ್ನ ತಾಯಿನುಡಿಯ ಋಣದ ಹೊರೆಗೆ, ತಾವುಗಳು ಸಹಕರಿಸಿ ಎಲ್ಲರ ಬಾಯಿಗೂ ಲಭಿಸುವಂತೆ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.
#ಕನ್ನಡವ್ಯಾಕರಣ, #ಬಹುವ್ರೀಹಿಸಮಾಸ, #Bahuvreehi Samasa,#upayuktha, #ದಿನಕ್ಕೊಂದುಗಾದೆಮಾತು, #kannadagrammer, #kannadalessons, #Top10amazingfactsinKannada, #Top10KannadaMoralStoriesCollection, #Kannadalessons, #LearnKannada, #Kannadalesson, #Kannadapoem, #Kannadalessonandpoem, #Sirikannadalesson, #Savikannadalesson, #latestkannadalesson, #latestkannada, #Nudikannada,
Upayuktha is a unique YouTube channel for Kannada Learners .
Please subscribe to get instant updates of Information.
Info :
Name: Prashanth N
Designation: Coordinator of Kannada Department &
Kannada Teacher @ Excel Public School, Mysore
Email : [email protected]
Информация по комментариям в разработке