ಓ ದಾರಿಗನೇ ಪ್ರಿಯ ನೇಹಿಗನೆ | O Darigane Priya Neehigane | Sangha Geet | Ganamala

Описание к видео ಓ ದಾರಿಗನೇ ಪ್ರಿಯ ನೇಹಿಗನೆ | O Darigane Priya Neehigane | Sangha Geet | Ganamala

ಓ ದಾರಿಗನೇ ಪ್ರಿಯ ನೇಹಿಗನೇ, ಗೈಯುವ ಬಾ ನವಯುಗ ನಿರ್ಮಾಣ
ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ || ಓ ದಾರಿಗನೇ ಪ್ರಿಯ ನೇಹಿಗನೇ ||

ಹಿಡಿಕೂಳಿನ ಬರಿಗೋಳಿನ ಬಾಳಿಗೆ ಮಾರುವೆಯಾ ತನುಮನವನು ಗೆಳೆಯಾ ? |2|
ಪಶುಬಲದಿದಿರಿಗೆ ಅಡಿಯಾಳಾಗುತ ಮರೆಯುವೆಯಾ ಮಾನವ್ಯದ ಗುರಿಯ ? || ಓ ದಾರಿಗನೇ ಪ್ರಿಯ ನೇಹಿಗನೇ ||

ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೋ ಮಾನವ ಜೀವನದನಂತ ಮಹಿಮೆ |2|
ಬಿಸಿಯಾರುವ ಮೊದಲೇ ಜಗವರಿಯಲಿ ನಿನ್ನಯ ಪವಿತ್ರ ರಕ್ತದ ಹಿರಿಮೆ || ಓ ದಾರಿಗನೇ ಪ್ರಿಯ ನೇಹಿಗನೇ ||

ಇಚ್ಚಾಶಕ್ತಿಯು ಭೂಮವನಪ್ಪಲಿ ಮೋಹದ ಭೋಗದ ಕನಸನು ಮುರಿದು |2|
ಹೃದಯದ ಹಕ್ಕಿಯು ಆಗಸವಾಳಲಿ ಸೋಗಿನ ಸೊಬಗಿನ ಪೊರೆಯನು ಹರಿದು || ಓ ದಾರಿಗನೇ ಪ್ರಿಯ ನೇಹಿಗನೇ ||

ಬಾಳೆಲ್ಲವ ಮುಡಿಪಾಗಿಡು ವೀರನೆ ದಿನದಿನವೂ ಹೊಸ ಹೊಸ ಸಾಹಸಕೆ |2|
ಧ್ಯೇಯದ ಆ.. ಆನಂದದಿ ವಿಹರಿಸು ಹರಡಲಿ ಚಿರ ಕೀರ್ತಿಯು ಯುಗ ಯುಗಕೆ
ಓ ದಾರಿಗನೇ ಪ್ರಿಯ ನೇಹಿಗನೇ, ಗೈಯುವ ಬಾ ನವಯುಗ ನಿರ್ಮಾಣ

ಸಮಾಜದೇವತೆಗರ್ಪಿತವಾಗಲಿ ನಮ್ಮೆಲ್ಲ ತನು ಮನ ಧನ ಪ್ರಾಣ || ಓ ದಾರಿಗನೇ ಪ್ರಿಯ ನೇಹಿಗನೇ ||

Комментарии

Информация по комментариям в разработке