ಕುದುರೆಮುಖ ಚಾರಣ

Описание к видео ಕುದುರೆಮುಖ ಚಾರಣ

'ಕುದುರೆಯ ಮುಖ'ದ ಹಾಗೆ ಕಾಣಿಸುವ ಪರ್ವತ ಶ್ರೇಣಿಯೇ 'ಕುದುರೆ ಮುಖ'.
ಈ ಸುಂದರ ಗಿರಿಧಾಮ, ಚಿಕ್ಕಮಗಳೂರು ಇಂದ ೯೫ ಕಿ.ಮೀ ದೂರದಲ್ಲಿದೆ. ಇಲ್ಲಿಂದ 'ಅರಬ್ಬೀ ಸಮುದ್ರ' ಕಾಣಿಸುತ್ತದೆ. ಈ ಪ್ರದೇಶದಲ್ಲಿ ವಿಶಾಲವಾದ ಹಾಗೂ ಸುಂದರವಾದ ಪರ್ವತ ಶ್ರೇಣಿಗಳು, ಗುಹೆಗಳು, ಕಂದಕ, ಹಳ್ಳಕೊಳ್ಳ ಮತ್ತು ಚಿಕ್ಕದೊಡ್ಡ ಬೆಟ್ಟಗಳಿಂದ ಕೂಡಿವೆ. ಕಿರಿದಾದ ಬೆಟ್ಟಗಳ ಕಾಡಿನ ಕವಲು ದಾರಿಯಲ್ಲಿ ನಡೆದು ಸಾಗಿದರೆ, ಪಕ್ಕದಲ್ಲಿ ಜುಳುಜುಳು ಹರಿಯುವ ಶುದ್ಧ ತಿಳಿನೀರಿನ ಝರಿಗಳು, ಎಲ್ಲೆಡೆ ಕಾಣುವ ಹಸಿರು ಹುಲ್ಲು ಗಿಡಮರಗಳು ಮತ್ತು ಚಿಲಿಪಿಲಿ ಕೂಗುವ ಪಕ್ಷಿ ಸಂಕುಲಗಳು. ಇನ್ನೂ ಕೆಲವು ಜಾಗಗಳು 'ಪರ್ಯಟಕರ ಪುಸ್ತಕ'ಗಳಲ್ಲಿ ದಾಖಲಾಗದೆ ಇರುವ ಪರಿಸರಗಳೂ ಇವೆ. ಹೆಸರು ಗೊತ್ತಿಲ್ಲದ್ದ ಅದೆಷ್ಟೋ ಗಿಡಮರ ಬಳ್ಳಿಗಳು,ಹೂ-ಕಾಯಿಗಳು. ಬಣ್ಣ ಬಣ್ಣದ ನೆಲದ ಮಣ್ಣುಗಳು ಇಲ್ಲಿನ ವಿಶೇಷಗಳಲ್ಲೊಂದು.

Комментарии

Информация по комментариям в разработке