ಇಂದಿರೆ ಮಂದಿರದೊಳು ನಿಂದಿರೆ | ಹಯವದನ | Indire Mandiradolu Nindire | Sri Vadirajaru | Devaranama |ದೇವರನಾಮ

Описание к видео ಇಂದಿರೆ ಮಂದಿರದೊಳು ನಿಂದಿರೆ | ಹಯವದನ | Indire Mandiradolu Nindire | Sri Vadirajaru | Devaranama |ದೇವರನಾಮ

https://dasarahadugalu.blogspot.com/2...

ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya

ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)

ಗಾಯಕರು: ಶ್ರೀಮತಿ ಗಾಯತ್ರೀ, ಶ್ರೀಮತಿ ರಮಾದೇವಿ ಮತ್ತು ಶ್ರೀಮತಿ ಅನುಪಮ
Singers: Smt.Gayathri, Smt. Ramadevi and Smt. Anupama

ಇಂದಿರೆ ಮಂದಿರದೊಳು ನಿಂದಿರೆ ಇಂದಿರೇ ನೀ ನಿಂದಿರೆ ||ಪ||

ಇಂದಿರೆ ಹೊಂದಿದೆ ನಿನ್ನ ಮುದದಿಂದ ಪಾಲಿಸು ನಿತ್ಯ ಎನ್ನ ಆಹಾ
ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ || ಅಪ ||

ಘಲು ಘಲು ಗೆಜ್ಜೆಯ ನಾದದಿಂದ ಫಳಫಳಿಸುವ ದಿವ್ಯ ಪಾದದೊಳು
ಪಿಲ್ಲೆ ಕಾಲುಂಗುರನಾದ ಅಂಘ್ರಿ ಚಲಿಸುವ ದಿವ್ಯ ಸುಸ್ವಾದ
ಆಹಾ, ಕಾಲಂದಿಗೆ ಗೆಜ್ಜೆ ಝಳಪಿಸುತ ನಮ್ಮಾಲಯದೊಳು ನಿಲ್ಲೆ ಪಾಲವಾರಿಧಿ ಕನ್ನೆ ||೧||

ಹರಡಿ ಕಂಕಣ ವಂಕಿ ಡೋರ್ಯಾ ಕೊರಳೊಳಗೆ ನಾನಾ ವಿಧದ ಹಾರ
ಬಾಯಲಿ ಕರ್ಪೂರ ವೀಳ್ಯ ಸಾರೆ ಸುರಭಿ ನಾಸಿಕ ಚಂಪಕ ಪುಷ್ಪದ ಹಾರ
ಆಹಾ, ಎರಳೆ ಗಂಗಳೆಸಿರಿ ಅರಳೆಲೆ ಕುಂಕುಮ ಹೆರಳಗೊಂಡೆಗಳಿಂದ ಹರಿಯ ಮೋದಿಸುವೆ ||೨||

ಜಯ ಜಯ ವಿಜಯ ಸಂಪೂರ್ಣೆ ಭಕ್ತಭಯ ನಿವಾರಣೆ ಎಣೆಗಾಣೆ
ಎನ್ನ ಕಾಯುವರನ್ಯರ ಕಾಣೆ ಶೇಷ ಶಯನನ ತೋರೆ ಸುಶ್ರೇಣೆ
ಆಹಾ, ಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿ ಹಯವದನನ, ದಯವ ಪಾಲಿಸೆ ಲಕ್ಷ್ಮೀ ||೩||

iMdire maMdiradoLu niMdire iMdirE nI niMdire ||pa||

iMdire hoMdide ninna mudadiMda pAlisu nitya enna AhA
gaMdha tuLasi araviMda mallige puShpadiMda pUjisuvenu kuMdugaLeNisade || apa ||

Galu Galu gejjeya nAdadiMda phaLaphaLisuva divya pAdadoLu
pille kAluMguranAda aMGri calisuva divya susvAda
AhA, kAlaMdige gejje JaLapisuta nammAlayadoLu nille pAlavAridhi kanne ||1||

haraDi kaMkaNa vaMki DOryA koraLoLage nAnA vidhada hAra
bAyali karpUra vILya sAre suraBi nAsika caMpaka puShpada hAra
AhA, eraLe gaMgaLesiri araLele kuMkuma heraLagoMDegaLiMda hariya mOdisuve ||2||

jaya jaya vijaya saMpUrNe Baktabhaya nivAraNe eNegANe
enna kAyuvaranyara kANe SESha Sayanana tOre suSrENe
AhA, kaiya piDidu BavaBayava pariharise siri hayavadanana, dayava pAlise lakShmI ||3||

Комментарии

Информация по комментариям в разработке