ಮುಳ್ಳಯ್ಯನಗಿರಿ - ಚಾರಣ

Описание к видео ಮುಳ್ಳಯ್ಯನಗಿರಿ - ಚಾರಣ

ಮುಳ್ಳಯ್ಯನಗಿರಿ ರಾಜ್ಯದ ಅತಿ ಎತ್ತರ ಶಿಖರ. ಬೆಟ್ಟಗುಡ್ಡಗಳ ಪಾಲಿನ ದೊಡ್ಡಣ್ಣ. ಬರೋಬ್ಬರಿ ಎತ್ತರ ಸಮುದ್ರ ಮಟ್ಟದಿಂದ ೧೯೨೬ ಮೀಟರ್. ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಇರುವ ದೂರ ೧೮ ಕಿ.ಮೀ. ಪುರಾತನ ಇತಿಹಾಸ ಇರುವ ಮುಳ್ಳಯನ ಗದ್ದುಗೆ, ಈಶ್ವರ ದೇವರು ಇರುವ ಸ್ಥಳ. ಧಾರ್ಮಿಕ ಹಾಗು ಪ್ರಾಕೃತಿಕ ನೆಲೆವೀಡು. ಅಂಡು-ಡೊಂಕಿನ ಕಡಿದಾದ ಹಾದಿ. ಒಂದೆಡೆ ಕಾಫಿಯ ಕಣಿವೆ, ಇನ್ನೊಂದೆಡೆ ಒಂದಷ್ಟು ಗಿಡ-ಮರಗಳು. ಅಪರೂಪದ ಶೋಲಾ ಕಾಡು. ಮೈತುಂಬಾ ಹುಲ್ಲನ್ನು ಹಾಸಿ ನಿಂತ ಪರ್ವತ ಸಾಲು.ಜರಿ, ಸಸ್ಯ, ಬಣ್ಣಬಣ್ಣದ ಚಿಗುರುಗಳಿಂದ ಲಾಸ್ಯ ಆಡುವ ಗಿಡಗಳು. ಒಟ್ಟಿನಲ್ಲಿ ಕಣ್ತುಂಬ ಚೆಲುವು. ಗುಂಡಿ ಗೊಟರುಗಳಿಲ್ಲದ ಸುಗಮ ಹಾದಿ. ಅಲ್ಲಲ್ಲಿ ಸಿಗುವ ತಿರುವುಗಳಲ್ಲಿ ಒಂದಷ್ಟು ಹೊತ್ತು ನಿಂತು ನೋಡಿದರೆ ಕಣ್ಣು ಕುಕ್ಕುವ ಸೌಂದರ್ಯ .ಈ ಬೆಟ್ಟವೇ ಹೀಗೆ. ಪ್ರತಿ ಋತುವಿನಲ್ಲೂ ಭಿನ್ನ-ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಗಿ ನಿಲ್ಲುತ್ತದೆ. ಕ್ಷಣ ಕ್ಷಣವೂ ಹೊಸ ಅನುಭವ. ಮುಳ್ಳಯ್ಯನಗಿರಿಗೆ ಯವಾಗ ಬಂದರೂ ನಿರಾಶೆ ಆಗುವುದಿಲ್ಲ. ಅಲ್ಲಿನ ಸೊಬಗೇ ಹಾಗೆ ಮುಂಗಾರಿನ ಈ ದಿನಗಳಲ್ಲಿ ಈ ದೊಡ್ಡಣ್ಣನ ಸೊಬಗೇ ವಿಸ್ಮಯ.

Комментарии

Информация по комментариям в разработке