Vijay Karnataka Live : ಶಕ್ತಿ ಯೋಜನೆ ಮರು ಪರಿಷ್ಕರಣೆ, ಎಐಸಿಸಿ ಅಧ್ಯಕ್ಷರಿಂದ ಸಿಎಂ ಡಿಸಿಎಂಗೆ ಕ್ಲಾಸ್!

Описание к видео Vijay Karnataka Live : ಶಕ್ತಿ ಯೋಜನೆ ಮರು ಪರಿಷ್ಕರಣೆ, ಎಐಸಿಸಿ ಅಧ್ಯಕ್ಷರಿಂದ ಸಿಎಂ ಡಿಸಿಎಂಗೆ ಕ್ಲಾಸ್!

ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದು ಒಂದೂವರೆ ವರ್ಷ ಕಳೆದಿವೆ. ಒಂದಾದ ಮೇಲೆ ಒಂದು ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿ ಐದು ಗ್ಯಾರಂಟಗಳನ್ನ ಜನರಿಗೆ ನೀಡಿದೆ. ಆದರೆ ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಅಂದುಕೊಂಡಷ್ಟು ಸೀಟುಗಳು ಬಾರದ ಕಾರಣ ಕಾಂಗ್ರೆಸ್‌ನ ಕೆಲ ನಾಯಕರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತುಗಳನ್ನಾಡಿದ್ದರು. ಅದಕ್ಕೆ ಪುಷ್ಠಿಕೊಡುವಂತೆ ಡಿಸಿಎಂ ಡಿಕೆ ಶಿವಕುಮಾರ್‌ ಕಳೆದೆರಡು ದಿನಗಳ ಹಿಂದೆ ಶ್ಕತಿ ಯೋಜನೆ ಮರು ಪರಿಷ್ಕರಣೆ ಮಾಡೋದಾಗಿ ಹೇಳಿಕೆ ನೀಡಿದ್ದರು. ಅದು ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು. ವಿರೋಧ ಪಕ್ಷ ಬಿಜೆಪಿಯಿಂದ ಟೀಕೆಗೆ ಒಳಗಾಗಿತ್ತು. ಯಾವಾಗ ಸರ್ಕಾರಕ್ಕೆ ಮುಜುಗರ ಬಂತೋ ಎಐಸಿಸಿ ಅಧ್ಯಕ್ಷರು ನೇರವಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಗೊಂದಲ ಸೃಷ್ಠಿ ಮಾಡಬೇಡಿ ಎಂದು ಹೇಳಿದರು. ಮಲ್ಲಿಕಾರ್ಜನ ಖರ್ಗೆಯವರು ಈ ವಿಷಯ ಪ್ರಸ್ತಾಪಿಸಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್‌ ಯಾವುದೇ ಬದಲಾವಣೆ ಚರ್ಚೆಯಿಲ್ಲ ಎಂಬ ಹೇಳಿಕೆ ನೀಡಿದ್ದರು.

Комментарии

Информация по комментариям в разработке