ಬಬ್ರುವಾಹನ (ಭಾಗ-3) 35 ವರ್ಷಗಳ ಹಿಂದಿನ ಗತ ವೈಭವ. ಉಪ್ಪೂರ್, ಕಾಳಿಂಗ ನಾವುಡ,ಧಾರೇಶ್ವರ ಗುರು ಶಿಷ್ಯರ ಸಮಾಗಮ

Описание к видео ಬಬ್ರುವಾಹನ (ಭಾಗ-3) 35 ವರ್ಷಗಳ ಹಿಂದಿನ ಗತ ವೈಭವ. ಉಪ್ಪೂರ್, ಕಾಳಿಂಗ ನಾವುಡ,ಧಾರೇಶ್ವರ ಗುರು ಶಿಷ್ಯರ ಸಮಾಗಮ

#35_ವರ್ಷಗಳ_ಹಿಂದಿನ_ಅಮೂಲ್ಯ_ಸಂಗ್ರಹ.

1983 ರಲ್ಲಿ ವೈಕುಂಠ ಕಾರಂತರ ಮೊಮ್ಮಗ ಮುರುಳಿಧರ ಕಾರಂತರ ಬೃಹ್ಮೋಪದೇಶದ ಪ್ರಯುಕ್ತ ನಡೆದ ಯಕ್ಷಗಾನ ಪ್ರದರ್ಶನ.

ಶುಂಠಿ ಸತ್ಯನಾರಾಯಣ ಭಟ್ ಅವರ ಮಾಹಿತಿ ಮೇರೆಗೆ ಈ VCP ಕ್ಯಾಸೇಟನ್ನು ಕೊಲ್ಲೂರಿನ ಸುದರ್ಶನ ಜೋಯಿಸರು ಈ ಕ್ಯಾಸೇಟನ್ನು ಪತ್ತೆಹಚ್ಚವಲ್ಲಿ ಯಶಸ್ವಿಯಾಗುತ್ತಾರೆ. ಕೃಷ್ಣಮೂರ್ತಿ ಉಪ್ಪೂರ ಸಹಾಯದಿಂದ VCP ಕ್ಯಾಸೇಟನ್ನು ಪಡೆಯಲಾಯಿತು.
ಇದನ್ನು ಸುದರ್ಶನ ಜೋಯಿಸರು ದಿನೇಶ ಉಪ್ಪುರರಿಗೆ ಒಪ್ಪಿಸಿದರು. ಸುದರ್ಶನ ಜೋಯಿಸರು ಮತ್ತು ದಿನೇಶ ಉಪ್ಪೂರರ ಪರಿಶ್ರಮದಿಂದ ಈ ಬಬ್ರುವಾಹನ ವೀಡಿಯೋ ಕ್ರ್ಯಾಸೇಟ್ ಸಿ.ಡಿಯಾಗಿ ಪರಿವರ್ತನೆಗೊಂಡಿತು.

ಇವರಿಬ್ಬರ ಪರಿಶ್ರಮದಿಂದ 35 ವರ್ಷಗಳ ಹಿಂದೆ ನಡೆದ ಪರಂಪರೆಯ ಯಕ್ಷಗಾನ ಪ್ರದರ್ಶನ ಇಂದು ನಾವು ನೋಡುವಂತಾಗಿದೆ.
ಇದನ್ನು ವೀಡಿಯೋ ಮಾಡಿಸಿದವರಿಗೂ ಮತ್ತು ಸಂಗ್ರಹಿಸಲು ಕಾರಣಿಕರ್ತರಾದವರಿಗೂ ಧನ್ಯವಾದಗಳು.

ಮೊದಲಾರ್ಧ ಭಾಗದಲ್ಲಿ ಧಾರೇಶ್ವರರು, ನಂತರ ಕಾಳಿಂಗ ನಾವುಡರು ಕೊನೆಯರ್ಧದಲ್ಲಿ ಉಪ್ಪೂರರ ಹಾಡುಗಳು ಕಿವಿಗೆ ಇಂಪಾಗುವುದಲ್ಲಿ ಸಂಶಯವಿಲ್ಲ. ಅನಂತ ಹೆಗಡೆಯವರ ಅರ್ಜುನ ಮತ್ತು ಯೌವನದ ಗೋಪಾಲ ಆಚಾರ್ ರವರ ಬಬ್ರುವಾಹನ ನೋಡುವುದೆ ಒಂದು ಭಾಗ್ಯ. ಒಟ್ಟಿನಲ್ಲಿ ಪರಂಪರೆಯ ಗತಕಾಲದ ವೈಭವವನ್ನು ಕಣ್ತುಂಬ ನೋಡಿ ಮನಸ್ಸಿಗೆ ಹಿತವೆನಿದುವುದಂತು ಸತ್ಯ. ಹಾಗೆಯೇ ಆಗಿನ ಮೇರು ಕಲಾವಿದರನ್ನು ನೋಡುವ ಸೌಭಾಗ್ಯ.

ಭಾಗವತರು: ನಾರಾಯಣಪ್ಪ ಉಪ್ಪೂರ್.
ಕಾಳಿಂಗ ನಾವುಡ.
ಸುಬ್ರಹ್ಮಣ್ಯ ಧಾರೇಶ್ವರ.
ಮದ್ದಳೆ: ದುಗ್ಗಪ್ಪ ಗುಡಿಗಾರ.
ಚಂಡೆ: ಗಜಾನನ ಭಂಡಾರಿ
ಹಾರ್ಮೋನಿಯಂ: ದಿನೇಶ ಉಪ್ಪೂರ್.
ಪಾತ್ರ ಪರಿಚಯ:
ಅರ್ಜುನ: ಅನಂತ ಹೆಗಡೆ.
ಬಬ್ರುವಾಹನ: ತೀರ್ಥಹಳ್ಳಿ ಗೋಪಾಲ ಆಚಾರ್.
ಚಿತ್ರಾಂಗದೆ: ಕೋಟ ವೈಕುಂಠ.
ಮಂತ್ರಿ: ಸಿರಿಮಠ ಮಂಜು.
ಸಖಿ: ಶಿವಾನಂದ ಗೀಜಗಾರ್ ( ನಾಗಶ್ರೀ. ಜಿ.ಎಸ್.ರವರ ತಂದೆ.

ಉಳಿದ ಪಾತ್ರಗಳು ವೀಡಿಯೊದಲ್ಲಿ ವೀಕ್ಷಿಸಿ.

ವೀಡಿಯೋ ಎಡಿಟಿಂಗ್: ಗಣೇಶ ಕಾಮತ್ ಉಳ್ಳೂರ್.
9900369127

ಬಬ್ರುವಾಹನ ಭಾಗ-1 ರ ಲಿಂಕ್ ಕೆಳಗೆ ನೀಡಲಾಗಿದೆ.

   • ಬಬ್ರುವಾಹನ (ಭಾಗ-1)35 ವರ್ಷಗಳ ಹಿಂದಿನ ಗತವ...  

ಭಾಗ-2
   • ಬಬ್ರುವಾಹನ (ಭಾಗ-2)35 ವರ್ಷಗಳ ಹಿಂದಿನ ಗತವ...  

Комментарии

Информация по комментариям в разработке