ಕರುಣೆಯ ಜಪಸರ |ಅನಂತ ತಂದೆಯೆ |Karuneya japasara| ananta tandeye| Divine Mercy Chaplet in Kannada| (song)

Описание к видео ಕರುಣೆಯ ಜಪಸರ |ಅನಂತ ತಂದೆಯೆ |Karuneya japasara| ananta tandeye| Divine Mercy Chaplet in Kannada| (song)

ದೈವಿಕ ಕರುಣೆಯ ಜಪಸರ | Divine mercy chaplet in kannada |ಅನಂತ ತಂದೆಯೆ | divine mercy song| ananta tandeye | Kannada Jesus songs | Kannada worship songs | Kannada old worship songs
Ananta thandeye | Divine mercy song | Mercy rosary |

ಕರುಣೆಯ ಜಪಸರ ಹೇಳುವ ವಿಧಾನ:
೧. ಪಿತನ ಮತ್ತು ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ ಅಮೆನ್.
ಪ್ರಾರಂಭ ಪ್ರಾರ್ಥನೆ:
ನಮಗಾಗಿ ಗಾಯಗೊಂಡ ಸೌಖ್ಯದಾಯಕರೇ, ನಿಮ್ಮ ಗಾಯಗಳಿಂದ ನಾವು ಗುಣಹೊಂದುತ್ತೇವೆ, ನೀವು ಸುರಿಸಿದ ನಿಮ್ಮ ಪವಿತ್ರ ರಕ್ತದ ಶಕ್ತಿಯಿಂದ ನಮ್ಮ ವಂಶಾವಳಿಯ ಪಾಪಗಳನ್ನು ಕ್ಷಮಿಸಿರಿ ನಮ್ಮೆಲ್ಲರನ್ನು ಕಾಪಾಡಿ ರಕ್ಷಿಸಿರಿ. ಪ್ರಭುವೇ ನಿಮ್ಮ ಪವಿತ್ರಾತ್ಮರಿಂದಲೂ ನಿಮ್ಮ ಪುನರುತ್ಥಾನದ ಶಕ್ತಿಯಿಂದಲೂ ನಮ್ಮನ್ನು ತುಂಬಿ ಬಲಪಡಿಸಿರಿ. ಪ್ರಭುವೇ ನನ್ನನ್ನೂ ನಮ್ಮ ಕುಟುಂದ ಎಲ್ಲರನ್ನು, ನನ್ನ ಬಂಧುಮಿತ್ರಾದಿಗಳೊಂದಿಗೆ ಪರಮ ಪ್ರಸಾದದಲ್ಲಿರುವ ನಿಮ್ಮ ಪವಿತ್ರ ಹೃದಯಕ್ಕೂ, ಮಾತೆ ಮರಿಯಮ್ಮನವರ ನಿಷ್ಕಳಂಕ ಹೃದಯಕ್ಕೂ ಸಂಪೂರ್ಣವಾಗಿ ಸಮರ್ಪಿಸುತ್ತೇನೆ. ಈ ಸಮರ್ಪಣೆಯ ಮೂಲಕ ಅನೇಕ ಪರಿವರ್ತನೆ, ಅದ್ಭುತ ಮತ್ತು ರೋಗ ಶಾಂತಿಗಳು ನಮ್ಮ ಮಧ್ಯದಲ್ಲಿ ಉಂಟಾಗಲಿ. ಅಮೆನ್.
ನಿಮ್ಮ ಅಭಿಪ್ರಾಯ...
ಸರ್ವಶಕ್ತ ನಿತ್ಯ ಸರ್ವೇಶ್ವರ, ನಿಮ್ಮ ಪುತ್ರ ಯೇಸುಕ್ರಿಸ್ತರ ನಿತ್ಯ ಮರಣದ ಫಲವಾಗಿ ಎಲ್ಲ ಆತ್ಮಗಳ ರಕ್ಷಣೆಗೆ ಅವಶ್ಯವಾಗಿರುವ ನಿತ್ಯ ಜೀವದ ಜಲದ ಬುಗ್ಗೆಯನ್ನು, ಕರುಣೆಎಂಬ ಮಹಾಸಾಗರವನ್ನು ನೀವು ತೆರೆದುಕೊಟ್ಟಿರಿ. ಜೀವಜಲದ ಬಗ್ಗೆಯೂ ಕರುಣೆಯ ಮಹಾಸಾಗರವೂ ಆದ ದೇವರೇ, ನಮ್ಮ ಮೇಲೂ ಇಡೀ ಭೂಲೋಕದ ಮೇಲೂ ಕರುಣೆಯ ಮಳೆಯನ್ನೇ ಸುರಿಸಿರಿ. ಈಟಿಯಿಂದ ತಿವಿಯಲ್ಪಟ್ಟ ನಿಮ್ಮ ಪವಿತ್ರ ಹೃದಯದಿಂದ ಹೊರಹೊಮ್ಮಿದ ಪರಿಶುದ್ಧ ರಕ್ತ ಮತ್ತು ಜಲದ ಬುಗ್ಗೆಯಲ್ಲೇ ನಾನು ಆಶ್ರಯಿಸಿದ್ದೇನೆ ಸ್ವಾಮಿ. ಅಮೆನ್.

೨. ಒಂದು ಪರಲೋಕ, ಒಂದು ನಮೋಮರಿಯಾ, ನಂತರ ಪ್ರೇಷಿತರ ವಿಶ್ವಾಸ ಸಂಗ್ರಹ (ಪರಲೋಕವನ್ನು ಭೂಲೋಕವನ್ನು)

೩.( ಪರಲೋಕ.... ಮಣಿಯಲ್ಲಿ ಕೆಳಗಿನ ಪ್ರಾರ್ಥನೆ ಹೇಳಿ)
ಸರ್ವಶಕ್ತ ನಿತ್ಯ ಪಿತನೆ ನಮ್ಮ ಹಾಗು ಭೂಲೋಕದ ಎಲ್ಲ ಮಾನವರ ಪಾಪಪರಿಹಾರಕ್ಕಾಗಿ ನಿಮ್ಮ ಪುತ್ರರೂ ನಮ್ಮ ಕರ್ತರೂ ಆಗಿರುವ ಯೇಸುಕ್ರಿಸ್ತರ ಪರಿಶುದ್ಧ ಶರೀರ ಮತ್ತು ರಕ್ತವನ್ನು, ಆತ್ಮ ಮತ್ತು ದೈವತ್ವವನ್ನು ಕಾಣಿಕೆಯನ್ನಾಗಿ ಸಮರ್ಪಿಸುತ್ತೇವೆ.

೪. (10 ನಮೋ ಮಾರಿಯಾ ..ಮಣಿಗಳಲ್ಲಿ ಕೆಳಗಿನ ಪ್ರಾರ್ಥನೆ ಹೇಳಿ )
ಪರಮತಂದೆಯೆ ಯೇಸುಕ್ರಿಸ್ತರ ಅತಿ ಧಾರುಣವಾದ ಶಿಲುಬೆ ಯಾತನೆ ಹಾಗು ಮರಣದ ಫಲವಾಗಿ, ನಮ್ಮ ಮೇಲೂ ಇಡೀ ಭೂಲೋಕದ ಮೇಲೂ ಕರುಣೆ ತೋರಿರಿ.

೫. ಕೆಳಗಿನ ಪ್ರಾರ್ಥನೆಯೊಂದಿಗೆ ಮುಗಿಸಿ (3 ಬಾರಿ)
ಪರಿಶುದ್ಧರೂ, ಸರ್ವಶಕ್ತರೂ, ಚಿರಂಜೀವಿವಿಯೂ ಆದ ನಿತ್ಯ ದೇವರೇ ನಮ್ಮ ಮೇಲೂ ಇಡೀ ಭೂಲೋಕದ ಮೇಲೂ ಕರುಣೆ ತೋರಿರಿ.
ಅಂತಿಮ ಪ್ರಾರ್ಥನೆ:
ಅನಂತ ಪಿತನೆ ಮಿತಿಯಿಲ್ಲದ ದಯೆ ಮತ್ತು ಕರುಣೆಯ ನಿರಂತರ ಕಾರಂಜಿಯೇ, ನಿಮ್ಮ ಕರುಣೆಯ ವಿಶಾಲತೆಯಿಂದ ನಮ್ಮನ್ನು ಕಟಾಕ್ಷಿಸಿರಿ. ನಮ್ಮ ಕಷ್ಟ, ಸಂಕಟ, ಸಮಸ್ಯೆಗಳು ನಮ್ಮನ್ನು ಕಾಡುವ ವೇಳೆಯಲ್ಲಿ ನಿರಾಸೆಯಿಂದ ನಿಮ್ಮನ್ನು ಬಿಟ್ಟು ಅಗಲಿ ಹೋಗದಂತೆ ನಮ್ಮನ್ನು ಕಾಪಾಡಿರಿ, ಇಂತಹ ಸಂದರ್ಭಗಳಲ್ಲಿ ನಿಮ್ಮ ದಯೆಯನ್ನು, ಪ್ರೀತಿಯನ್ನು ನಮ್ಮ ಚೈತನ್ಯವಾಗಿರಿಸಿಕೊಂಡು ನಿಮ್ಮ ಚಿತ್ತಾನುಸಾರ ಬಾಳುವ ಕೃಪೆಯನ್ನು ದಯಪಾಲಿಸಿರಿ. ಆಮೆನ್.

#kannadaworshipsongs
#kannadajesussongs
#praiseandworshipsongskannada
#divinemercychaplet

Комментарии

Информация по комментариям в разработке