#EducationalExpert, #LogicalThinking, #Planning, #Personality, #Discipline, #TimeManagement, #ಸಮಯ, #ಆಲೋಚನೆ, #ವ್ಯಕ್ತಿತ್ವ, #CareerConsultant, #ManagementConsultant,
1978 ರಲ್ಲಿ ನಾನು BSc ಮುಗಿಸಿ. ಮುಂದೇನು ಅನ್ನೋ ಪ್ರಶ್ನೆ ಬಂದಾಗ ಕಾಲೇಜಿನಲ್ಲಿದ್ದ ಫ್ರೊ: ರಸ್ಕ್ವಿನ ಅವರನ್ನ ಭೇಟಿ ಆದೆ. ಅವರು Aptitude test ಮಾಡಿ, ನನ್ನ ಹತ್ರ ಮಾತಾಡಿ ಕೌಂಸೆಲಿಂಗ್ ಮಾಡಿ, ನೀನು MBA ಮಾಡು ಅಂತ recommend ಮಾಡಿದ್ರು. ಅಗ MBA ಬಹಳ ಹೊಸದು. ನಮ್ಮ ದೇಶದಲ್ಲಿ 7-8 ಕಡೆ ಮಾತ್ರ ಇತ್ತು. ಈಗ, ಸುಮಾರು 4000ಕ್ಕೂ ಹೆಚ್ಚು MBA institutes ಇದೆ ಮತ್ತು most popular course ಆಗಿದೆ. ಏಕೆಂದರೆ, normal graduates ಇರಬಹುದು, engineers ಅಥವಾ ಬೇರೆ ಯಾವುದೇ ಸ್ಟ್ರೀಮ್ ಇದ್ದರೂ ಸಹ, MBA ಮಾಡೋದು common ಆಗಿದೆ. ಯಾಕೆ ಅಂತ ತಿಳ್ಕೋಳೋಣ.
ಎಂ.ಬಿ.ಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಈ ತತ್ವಗಳು ಯಾವುದು ಅಂದ್ರೆ
1. #ತರ್ಕಬದ್ಧ #ಆಲೋಚನೆ: ಎಂ.ಬಿ.ಎ. ಕಲಿಕೆಯಿಂದ ನಿಮ್ಮ ಆಲೋಚನಾ ಕ್ರಮವೇ ಬದಲಾಗುತ್ತದೆ. ಏಕೆಂದರೆ, ಉದ್ದಿಮೆಗಳಲ್ಲಿ ಸಂಪನ್ಮೂಲಗಳ ಕೊರತೆಗಳೂ, ಅನೇಕ ಕಷ್ಟಗಳೂ, ಮಾರುಕಟ್ಟೆಯ ಸವಾಲುಗಳೂ ಎದುರಾಗುವುದು ಸಾಮಾನ್ಯ. #ತಾಳ್ಮೆ ಕಳೆದುಕೊಳ್ಳದೆ, ನಿಮ್ಮ ಉದ್ದಿಮೆಯ #ಶಕ್ತಿ, #ಸಾಮರ್ಥ್ಯ, ಆತಂಕ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಮಾರುಕಟ್ಟೆಯ #ಅವಕಾಶಗಳು ಮತ್ತು ಆ ಮೂಲಕ, ಉದ್ದಿಮೆಯ ಅಭಿವೃದ್ಧಿಯ ಬಗ್ಗೆ ಯೋಚಿಸಬೇಕಾಗುತ್ತದೆ. ಆಗಲೇ, ನೀವು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಇಂತಹ ತರ್ಕಬದ್ಧ ಆಲೋಚನಾ ಕ್ರಮ, ನಿಮ್ಮ ಖಾಸಗೀ ಜೀವನದಲ್ಲೂ ಆವರಿಸಿ, ಯಾವುದೇ ಸಂದರ್ಭ, ಸನ್ನಿವೇಶಗಳಲ್ಲಿ ವಿವೇಚನೆಯಿಂದ ನಡೆಯುವ ಪ್ರವೃತ್ತಿ ನಿಮ್ಮದಾಗುತ್ತದೆ.
2. #ಯೋಜನಾ ಶಕ್ತಿ: ತರ್ಕಬದ್ಧ ಆಲೋಚನೆಯಿಂದ, ನಿಮ್ಮ ವೃತ್ತಿಗೆ ಸಂಬಂಧಿಸಿದ ಯೋಜನೆಗಳನ್ನು ಸರಾಗವಾಗಿ ರೂಪಿಸುವ ಶಕ್ತಿ ಬೆಳೆಯುತ್ತದೆ. ಈ ಶಕ್ತಿ ನಿಮ್ಮ ಜೀವನದ ಎಲ್ಲಾ ಖಾಸಗೀ ಯೋಜನೆಗಳನ್ನು ರೂಪಿಸಲು, ಅತ್ಯಂತ ಅಮೂಲ್ಯ. ಉದಾಹರಣೆಗೆ, ಮನೆ ಕೊಳ್ಳುವ ಅಥವಾ ಕಟ್ಟುವ ಯೋಜನೆಯಿರಬಹುದು, ಮದುವೆ-ಮಧುಚಂದ್ರವಿರಬಹುದು, ಹಣಕಾಸಿನ ನಿರ್ವಹಣೆಯಿರಬಹುದು. ಹೀಗೆ, ಅನೇಕ ಯೋಜನೆಗಳನ್ನು ರೂಪಿಸುವ ಬುದ್ಧಿವಂತಿಕೆ ಮತ್ತು ಅವುಗಳನ್ನು ನಿರ್ವಹಿಸುವ ಸಾಮರ್ಥ್ಯ ನಿಮ್ಮದಾಗುತ್ತದೆ.
3. #ವಿಕಸಿತ #ವ್ಯಕ್ತಿತ್ವ: ಎಂ.ಬಿ.ಎ. ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ನಿಮ್ಮ ಗ್ರಹಿಕೆ ಚುರುಕಾಗುತ್ತದೆ. ನಿಮ್ಮ ಮಾತುಗಾರಿಕೆಗೂ, ದೇಹ ಭಾಷೆಗೂ ಹೊಂದಿಕೆಯಾಗಿ, ಒಂದಕ್ಕೊಂದು ಪೂರಕವಾಗುತ್ತದೆ. ನಿಮ್ಮ ವೇಷಭೂಷಣ ಅಚ್ಚುಕಟ್ಟಾಗಿ, ನಿಮ್ಮ ವ್ಯಕ್ತಿತ್ವ ಆಕರ್ಷಣೀಯವಾಗುತ್ತದೆ.
4. #ಶಿಸ್ತು ಮತ್ತು #ಸಮಯ ಪ್ರಜ್ಞೆ: ಅಶಿಸ್ತಿನ ಜೀವನದಲ್ಲಿ ಯಾವ ಗುರಿಯ ಸಾಧನೆಯೂ ಸಾಧ್ಯವಿಲ್ಲ; ಶಿಸ್ತು ನಿಮ್ಮ ಯೋಜನೆಗೂ, ಸಾಧನೆಗೂ ನಡುವಿನ ಸೇತುವೆ ಅಂತ ಹೇಳ್ಬೋದು. ನಮ್ಮ ವೃತ್ತಿ ಮತ್ತು ಖಾಸಗೀ ದಿನಚರಿಯಲ್ಲಿ ಅನೇಕ ರೀತಿಯ, ವಿವಿಧ ಅದ್ಯತೆಗಳ ಕೆಲಸಗಳಿರುತ್ತದೆ. ನಮಗಿರುವ ಸಮಯದಲ್ಲಿ ದಿನನಿತ್ಯದ ಮಾಮೂಲು ಕೆಲಸಗಳನ್ನೂ, ಮಹತ್ವದ ಕೆಲಸಗಳನ್ನೂ ನಿರ್ವಹಿಸಲು ಬೇಕಾಗುವ ಶಿಸ್ತು, ಸಮಯ ಪ್ರಜ್ಞೆ ಮತ್ತು ಅದನ್ನು ಪರಿಪಾಲಿಸುವ ಕ್ರಮವನ್ನು ಎಂ.ಬಿ.ಎ. ಕಲಿಕೆ ನಿಮ್ಮಲ್ಲಿ ಮೂಡಿಸುತ್ತದೆ.
ಇವೆಲ್ಲವೂ ಸಹ ಯಶಸ್ವೀ ಬದುಕಿಗೆ ಬೇಕಾಗೋ ಅಂತಹ ಸೂತ್ರಗಳು ಅಂತ ಹೇಳ್ಬೋದು.
ಸ್ಕೂಲ್/ಕಾಲೇಜುಗಳಲ್ಲಿ ಕಲಿಸದ ಇಂತಹ ಅನೇಕ ಜೀವನದ ಪಾಠಗಳನ್ನ, ವಿಷಯಗಳನ್ನ ತಿಳಿದುಕೊಳ್ಳೋಕೆ vpradeepkumar.com ಗೆ ಭೇಟಿ ಮಾಡಿ, ಇಲ್ಲಿನ ವೀಡಿಯೊಗಳನ್ನು ವೀಕ್ಷಿಸಿ, ಸಬ್‍ಸ್ಕ್ರೈಬ್ ಮಾಡಿ ಮತ್ತು ಲೈಕ್ ಮಾಡಿ.
#youtubeupdate #youtubevideo #youtubeviews
Информация по комментариям в разработке