ಓ ನನ್ನ ಚೇತನ ಆಗು ನೀ ಅನಿಕೇತನ | ಕುವೆಂಪು

Описание к видео ಓ ನನ್ನ ಚೇತನ ಆಗು ನೀ ಅನಿಕೇತನ | ಕುವೆಂಪು

ಛಾಯಗ್ರಹಣ - ಮನೋಹರ ಟಿ‌.ಎನ್
ದೃಶ್ಯ- ಕುಮಾರಪರ್ವತ


ಓ! ನನ್ನ ಚೇತನ
ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯ ಭಾವದೀಟಿ

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ! ಅನಂತವಾಗಿರು

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

-ಕುವೆಂಪು

Комментарии

Информация по комментариям в разработке