ಶ್ರೀ ಮೌನೇಶ್ವರ ಮಹಿಮೆ ಕಿರು ಚಲನಚಿತ್ರ ಸುಕ್ಷೇತ್ರ ತಿಂಥಣಿ 𝐒𝐡𝐫𝐞𝐞 𝐌𝐨𝐮𝐧𝐞𝐬𝐡𝐰𝐚𝐫𝐚 𝐌𝐚𝐡𝐢𝐦𝐞 𝐅𝐢𝐥𝐦 𝐓𝐢𝐧𝐭𝐚𝐧𝐢 𝟐𝟎𝟐𝟑 🕉☪️✝️

Описание к видео ಶ್ರೀ ಮೌನೇಶ್ವರ ಮಹಿಮೆ ಕಿರು ಚಲನಚಿತ್ರ ಸುಕ್ಷೇತ್ರ ತಿಂಥಣಿ 𝐒𝐡𝐫𝐞𝐞 𝐌𝐨𝐮𝐧𝐞𝐬𝐡𝐰𝐚𝐫𝐚 𝐌𝐚𝐡𝐢𝐦𝐞 𝐅𝐢𝐥𝐦 𝐓𝐢𝐧𝐭𝐚𝐧𝐢 𝟐𝟎𝟐𝟑 🕉☪️✝️

ಶ್ರೀ ಮೌನೇಶ್ವರ ಮಹಿಮೆ ಚಲನಚಿತ್ರ {𝐒𝐡𝐫𝐞𝐞 𝐌𝐨𝐮𝐧𝐞𝐬𝐡𝐰𝐚𝐫𝐚 𝐌𝐚𝐡𝐢𝐦𝐞} ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು𝟎𝟏- 𝟎𝟏- 𝟐𝟎𝟐𝟑🕉☪️✝️🚩🙏🏻❤🌹🇮🇳ಭಾವೈಕ್ಯತೆ ನಾಡು ಎಂದೆ ಖ್ಯಾತಿ ಪಡೆದ ಸುಕ್ಷೇತ್ರ ತಿಂಥಣಿ ಶ್ರೀ ಮೌನೇಶ್ವರ ಜೀವನ ಚರಿತ್ರೆ ಆಧಾರಿತ ಚಲನಚಿತ್ರ.ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮಣ್ಯ ನಮಃ.ಓಂ ಶ್ರೀ ಜಗದ್ಗುರು ತಿಂಥಣಿ ಶ್ರೀ ಮೌನೇಶ್ವರಾಯ ನಮಃ. ಶ್ರೀ ಜಗದ್ಗುರು ಮೌನೇಶ್ವರರು ಯಾದಗಿರಿ ಜಿಲ್ಲಾ ಸುರಪುರ್ ತಾಲೂಕ ದೇವರಗೋನಾಳ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ಜನನದ ಕಾಲದ ಬಗ್ಗೆ ಅಷ್ಟೊಂದು ತಿಳಿದು ಬಂದಿಲ್ಲ.ಇವರು 𝟏𝟐ನೇ ಶತಮಾನದಲ್ಲಿ ಜನಿಸಿದರು ಎಂದು ಕೆಲವು ವಚನಕಾರರು ಹೇಳಿದರೆ.ಇನ್ನು ಕೆಲವು ವಚನಕಾರರು 𝟏𝟒 ಮತ್ತು 𝟏𝟓ನೇ ಶತಮಾನದಲ್ಲಿ ಜನಿಸಿದರಂದು ಹೇಳುತ್ತಾರೆ .ಶ್ರೀ ಮೌನೇಶ್ವರರ ತಂದೆ ತಾಯಿ ಶೇಷಪ್ಪ ಮತ್ತು ಶೇಶಮ್ಮನವರು. ಶೇಷಮ್ಮನವರು 𝟏𝟐 ವರ್ಷಗಳ ಕಾಲ ದೇವರಗೋನಾಳದಲ್ಲಿರುವ ಶ್ರೀ ಆದಿಲಿಂಗೇಶ್ವರನಿಗೆ ಭಕ್ತಿಯಿಂದ ನಡೆದುಕೊಂಡು ಶ್ರೀ ಮೌನೇಶ್ವರರನ್ನು ಪಡೆಯುತ್ತಾರೆ. ಕೈಲಾಸದಲ್ಲಿರುವ ಶಿವನೇ ಸ್ವತಹ ತಾವೇ ಮಗುವಾಗಿ ಬೆಳಗಿನ ಜಾವ ಉಷಾಕಾಲದಲ್ಲಿ ಮೌನೇಶ್ವರ ರೂಪವಾಗಿ ಶೇಷಮ್ಮನ ಮಡಿಲಲ್ಲಿ ಮಲಗುತ್ತಾರೆ .ದೇವರಗೋನಾಳದಲ್ಲಿ ಇವರು ಅನೇಕ ಪವಾಡಗಳನ್ನು ಬಾಲಕನಾಗಿ ಮಾಡಿದ್ದಾರೆ .ಸುರಪುರದ ರಾಜನ ಸತ್ತ ಮಗನನ್ನು ಬದುಕಿಸಿದ್ದು ,ಸಜ್ಜನ ಪರಪ್ಪ ಶೆಟ್ಟಿಯ ಮನೆಯಲ್ಲಿ ಎಣ್ಣೆಗಾಣ ಹೊಡೆದದ್ದು , ಪರಪ್ಪ ಶೆಟ್ಟಿಗೆ ಐಶ್ವರ್ಯವನ್ನು ಕರುಣಿಸಿದ್ದು, ಹೀಗೆ ಮೌನೇಶ್ವರರು ಬಾಲಲೀಲೆ ಪವಾಡವನ್ನು ಮಾಡುತ್ತಾ ದೊಡ್ಡವರಾಗಿ ಕರ್ನಾಟಕ ಮಹಾರಾಷ್ಟ್ರ ಆಂಧ್ರ ಮುಂತಾದವು ಊರುಗಳನ್ನು ಸಂಚರಿಸುತ್ತಾ ಅನೇಕ ಪವಾಡಗಳನ್ನು ಮಾಡುತ್ತಾರೆ .ಲಕ್ಷ್ಮೇಶ್ವರದಲ್ಲಿ ಸತ್ತ ಪಿಡ್ಡವ್ವಳನ್ನು ಬದುಕಿಸಿ ಮರಳಿ 100 ಆಯುಷ್ಯವನ್ನು ಕೊಟ್ಟಿದ್ದು, ವರವಿಯಲ್ಲಿ ಕುರಿ ಹೆಜ್ಜೆ ಮೂಡಿಸಿದ್ದು, ಮತ್ತು ಕಾಶಿಯ ಗಂಗೆಯನ್ನು ಜಕ್ಕವ್ವಳ ಭಕ್ತಿಗೆ ಒಲಿದು ವರವಿ ಯಲ್ಲಿ ತರಿಸಿ ಅಂಬಲಿಒಂಡ ನಿರ್ಮಿಸಿದ್ದು, ತಿಂಥಣಿಯಲ್ಲಿ ಕಂಬಳಿಯನ್ನು ಹಾಸಿ ನದಿ ದಾಟಿದ್ದು, ಮತ್ತು ಸಿಡಿಲನ್ನು ಹಿಡಿದು ಹುಕ್ಕಿನ ಊಜಿ ಮಾಡಿದ್ದು, ಕಾಶಿ ತಿರುಪತಿಯಲ್ಲಿ ಪವಾಡ ಮಾಡಿದ್ದು, ಲಿಂಗನಬಂಡಿಯಲ್ಲಿ ತಿರುಪತಿಗೆ ಹೋಗುವ ಭಕ್ತರಿಗೆ ತಿರುಪತಿಯನ್ನು ಲಿಂಗನಬಂಡಿಯಲ್ಲಿ ತಾವೇ ಎಂದು ತೋರಿಸಿದ್ದು, ಬಿಜಾಪುರ್ ಆದಿಲ್ ಶಾಹಿನಿಗೆ ಸೊಕ್ಕನ್ನು ಅಳಿಸಿ ನ್ಯಾಯ ನೀತಿ ಧರ್ಮವನ್ನು ಬೋಧಿಸಿದ್ದು, ಮುದುಗಲ್ಲ ವೀರಗೊಲ್ಲಾಳನಿಗೆ ದೀರ್ಘಾಯುಷ್ಯ ಕೊಟ್ಟಿದ್ದು, ಶಿರಸಂಗಿಯಲ್ಲಿ ಮಲ ಮುತ್ರ ಬಂಗಾರವಾದದ್ದು, ಗದ್ದನಕೇರಿ ಮಳೆಪ್ಪನಿಗೆ ಜನ್ಮ ಕೊಟ್ಟಿದ್ದು, ತಿಂಥಣಿ ಯಲ್ಲಿ ಕೋಣದ ಗವಿ ಹತ್ತಿರ ಕುಲುಮೆ ಕೆಲಸ ಮಾಡಿದ್ದು ,ರಾಕ್ಷಸ ಸ್ವರೂಪದ ಕೋಣವನ್ನು ಕೋಣದ ಗವಿಯಲ್ಲಿ ಬಂಧಿಸಿದ್ದು ,ಕೋಣದ ಗವಿ ಹತ್ತಿರ ಗುಡ್ಡದಲ್ಲಿ ಮೌನೇಶ್ವರ ಹೆಜ್ಜೆ ಮೂಡಿದ್ದು ,ತಿಂಥಣಿಯ ಕೈಲಾಸ ಕಟ್ಟೆಯಲ್ಲಿ ಶಿಷ್ಯ ಗಂಗಪ್ಪಯ್ಯನಿಗೆ ಅಂಗೈಯಲ್ಲಿ ಕೈಲಾಸವನ್ನು ತೋರಿಸಿದ್ದು, ಶಿರಹಟ್ಟಿ ಮಠಕ್ಕೆ ಮರಿ ಕರುಣಿಸಿದ್ದು ,ಮುಳಗುಂದ ಸ್ವಾಮಿಗಳನ್ನು ಹಳ್ಳ ದಾಟಿಸಿದ್ದು, ಜಲದುರ್ಗದಲ್ಲಿ ಕೃಷ್ಣಾ ನದಿಗೆ ಎದುರು ಈಜುವ ಅಂತಹ ಶ್ರೀಗಂಧದ ಕಟ್ಟಿಗೆಯನ್ನು ನೋಡಿ ಅದನ್ನು ತೆಗೆದುಕೊಂಡು ಬಂದು ಶ್ರೀ ಮೌನೇಶ್ವರ ಗಂಗಪ್ಪಯ್ಯಾ ಮತ್ತು ಬಡೆಮಯ್ಯ ಸಂಗಡಿಗರು ಎಲ್ಲರೂ ಸೇರಿ ಒಂದೇ ಶ್ರೀಗಂಧದ ಕಟ್ಟಿಗೆಯಲ್ಲಿ ದೇವರಗಡ್ಡಿ ಶ್ರೀ ಗದ್ದೆಮ್ಮದೇವಿ ಹಾಲಬಾವಿ ಶ್ರೀ ದ್ಯಾಮಮ್ಮದೇವಿಯ ಮೂರ್ತಿಯನ್ನು ಕೆತ್ತಿದರು .ಈ ಎರಡು ಮೂರ್ತಿಗಳು ಇಂದಿಗೂ ನೋಡಲು ಸಿಗುತ್ತವೆ, (ಈ ಶ್ರೀಗಂಧದ ಕಟ್ಟಿಗೆಯು ಮೂಲತಃ ವಿಜಯನಗರ ಸಾಮ್ರಾಜ್ಯವನ್ನು ತೋರದ ದೇವತೆಯು ಶ್ರೀಗಂಧದ ಕಟ್ಟಿಗೆಯ ರೂಪದಲ್ಲಿ ಕೃಷ್ಣಾ ನದಿಗೆ ಎದುರು ಈಜುತ್ತಾಳೆ.) ತಿಂಥಣಿಯಲ್ಲಿ ಗಂಗಾ ಮಾತೆಯನ್ನು ಪ್ರತ್ಯಕ್ಷ ಗೊಳಿಸಿ ನದಿಯು ಸದ್ದು ಮಾಡದೇ ಹೋಗಬೇಕೆಂದು ವಚನ ತಗೊಂಡಿದ್ದು ,ನದಿಯು ಈಗಲೂ ಎಂತಹ ಪ್ರವಾಹ ಬಂದರು ಸದ್ದಿಲ್ಲದೇ ಸಾಗುತ್ತಿದೆ .ಇದೊಂದು ವಿಜ್ಞಾನಕ್ಕೆ ಸವಾಲಾಗಿದೆ.ಲಕ್ಷ್ಮೇಶ್ವರದಲ್ಲಿ ಬಾವಿಯಲ್ಲಿ ನೀರು ತರಿಸಿದ್ದು ,ಹೀಗೆ ಕರ್ನಾಟಕದ ಅತ್ಯಂತ ಅನೇಕ ಪವಾಡಗಳನ್ನು ಮಾಡಿದ್ದಾರೆ.ಇವರು ಕರ್ನಾಟಕದ ಸಂಚಾರ ಮಾಡಿದ ಊರುಗಳೆಂದರೆ ತಿಂಥಣಿ, ದೇವರಗೋನಾಳ ,ವರವಿ,ಲಿಂಗನಬಂಡಿ ,ಶಿರಸಂಗಿ, ತಾವರಗೇರಾ ,ಮುದಗಲ್ಲ ,ಹಂಪಿ ,ವಿಜಯಪುರ, ಮುದ್ದೇಬಿಹಾಳ, ಕೊಣ್ಣೂರು, ಪಾಲತೀ, ದೇವರಗಡ್ಡಿ ,ಕಾಶಿ ,ತಿರುಪತಿ, ಹೊಳೆ ಮಸೂತಿ ,ಅಂತ್ರದಾನಿ, ಲೆಕ್ಕಿಹಾಳ, ಹೀಗೆ ಇನ್ನೂ ಹಲವಾರು ಊರುಗಳನ್ನು ಸಂಚರಿಸುತ್ತಾ ಶ್ರೀ ಮೌನೇಶ್ವರರು ಕೊನೆಗೆ ತಿಂಥಣಿ ಗ್ರಾಮಕ್ಕೆ ಬಂದು ಅಲ್ಲಿ ಗುಡ್ಡಗಳ ಮಧ್ಯ ಗವಿಯಲ್ಲಿ ಹೋಗಿ ಊಜಿ ಮತ್ತು ಕೊಡಲಿಯನ್ನು ಬಿಟ್ಟು ಅದೃಶ್ಯರಾಗುತ್ತಾರೆ.ಓಂ ಶ್ರೀ ಮೌನೇಶ್ವರಾಯ ನಮಹ ಓಂ ಶ್ರೀ ವಿಶ್ವಕರ್ಮ ಪರಬ್ರಹ್ಮನೆ ನಮಹ 🙏🏽🌹❤✝️☪️🕉.

Комментарии

Информация по комментариям в разработке