Venkatesha Parijatha Adhyaya 6 - Part 1 | ವೆಂಕಟೇಶ ಪಾರಿಜಾತ ಅಧ್ಯಾಯ-೬ ಭಾಗ-೧

Описание к видео Venkatesha Parijatha Adhyaya 6 - Part 1 | ವೆಂಕಟೇಶ ಪಾರಿಜಾತ ಅಧ್ಯಾಯ-೬ ಭಾಗ-೧

Written by Sri Gokavi Anantaryaru (Anantadrisha).
Composed and sung by Venugopal Khatavkar.

Venkatesha Parijatha Playlist:    • Venkatesha Parijatha  

6-1
ಪುಲಿಂದರೂಪಧರಾಯ ನಮಃ

ಅಘಟ್ಯಘಟನಾಪಟ್ವೀ ಪುಲಿಂದಾ ಶ್ರೀಪತೇಸ್ತನುಃ
ನೃಪಜಾಸ್ಮರಪೀಡಾಂ ತಾಂ ಕಥಯಂತೀ ಹರೇದಘಮ್‌ ॥

ಜಯ ಜಯ
ಜಯ ಜಯಪ್ರದವೇಷ ಜಯ ನಿತ್ಯಸಂತೋಷ
ಜಯತು ಜಯ ಲಕ್ಷ್ಮೀಶ ಜಯ ವೆಂಕಟೇಶಾ ॥೧॥

ಪದ್ಮಜಾಕೃತ ಯಾತ್ರಾ ಪದ್ಮವಿಕಸಿತನೇತ್ರಾ ॥
ಪದ್ಮಜಾಸನ ಮುಖ್ಯ ಪದ್ಮನಾಭಾಖ್ಯಾ ॥೨॥

ಗುರ್ವನುಗ್ರಹಗಮ್ಯ ಗುರುಗುಣಾರ್ಣವ ಸೌಮ್ಯ ॥
ಗುರ್ವನಂತಾದ್ರೀಶ ಗುರುಸುಪ್ರಕಾಶಾ ॥೩॥

ವಚನ

ಸಿರಿಸಹಿತ ಶೇಷಾಖ್ಯಗಿರಿಯಲ್ಲಿ ಇರುವಂಥ ಪರಮಪುರುಷನ ಪಾದಸರಸಿಜಂಗಳ ನಿತ್ಯ ಸ್ಮರಿಸಿ ನತಿಸುವೆ ಮತ್ತೆ ಮರೆಯದಲೆ ಮನದಲ್ಲಿ ಸ್ಮರಿಸಿ ಗುರುಗಳಿಗೆಲ್ಲ ಕರವ ಮುಗಿವೆ ॥
ವರ ಬುದ್ಧಿಯಲಿಯೆನ್ನ ಶಿರಮೆಟ್ಟಿ ಹಾರುತಲೆ ಇರುವಂಥ ಲೋಕದಲಿ ವರ ಕವೀಶ್ವರರುಗಳಿಗೆ ಕರಮುಗಿದು ಎನ ಬುದ್ಧಿ ಹರಿದಷ್ಟು ಪೇಳುವೆನು ವರ ವೆಂಕಟಾಧೀಶ ಕೊರವಂಜಿ ಕಥೆಯ ॥೧॥

ಚನ್ನಿಗನು ಘನಮಹಿಮ ಪನ್ನಗಾದ್ರೀಶ ತಾ ಮುನ್ನಾಗಿ ನಾರಿಕುಲರನ್ನ ಬಕುಲಾವತಿಗೆ ಚನ್ನಾಗಿ ಬೋಧಿಸುತ ತನ್ನ ಕಾರ್ಯಕೆ ಕಳುಹಿ ಮುನ್ನ ಆಲೋಚಿಸಿದ ತನ್ನ ಮನದೊಳಗೆ ॥
ಎನ್ನ ಕಾರ್ಯಕ್ಕೆ ಅನ್ಯರೂಪವ ಧರಿಸಿ ಇನ್ನು ನಾ ಪೋಗುವೆನು ತನ್ನ ಕಾರ್ಯವು ಮತ್ತೆ ಅನ್ಯರಿಗೆ ಪೇಳಿದರೆ ತನ್ಹಾಗೆ ಮನಗೊಟ್ಟು ಮುನ್ನ ಮಾಡುವರಲ್ಲ ಚನ್ನವಾಗೀ ॥೨॥

ಒಬ್ಬ ಮಗ ಮಗನಲ್ಲ ಒಕ್ಕಣ್ಣು ಕಣ್ಣಲ್ಲ ಉಬ್ಯುಬ್ಬಿ ವನಿತೆಯರು ಕೊಬ್ಬಿಲಾಡಿದ ಮಾತು ಒಬ್ಬರಲಿ ನಿಜವಲ್ಲವೆಂಬ ಈ ರೀತಿ ಅವಲಂಬಿಸುತ ಕೊರವಂಜಿಯೆಂಬೋ ರೂಪವಾದಾ ॥
ಗಂಭೀರ ಕೊರವಿ ಮುಖವೆಂಬುವದು ಬಾಡಿಹದು ಗುಂಭ ಬಾಯ್ವಳಗ್ಹಲ್ಲುವೆಂಬುವದು ಒಂದಿಲ್ಲ ಲಂಬಕರ್ಣಗಳಿಹವು ಲಂಬ ಕುಚಗಳು ಮತ್ತೆ ಲಂಬೋದರೀಯೆನಿಸಿಕೊಂಬುವಳು ತಾನೂ ॥೩॥

ಚೀರವಸ್ತ್ರವನುಟ್ಟು ಛಿದ್ರಕುಪ್ಪುಸ ತೊಟ್ಟು ಥೋರಜಡೆಗಳ ಧರಿಸಿ ಧೀರ ಕಮಲೋದ್ಭವನ ಆರೊಂದು ತಿಂಗಳದ ಚೀರ ಶಿಶುವಿನ ಮಾಡಿ ಸಾರ ಬ್ರಹ್ಮಾಂಡವೆ ಧೋರ ಬುಟ್ಟಿಯ ಮಾಡಿ ಚಾರು ನವಧಾನ್ಯಗಳ ಪೂರ ತುಂಬಿದಳೂ ॥
ಚಾರು ಫಣೆಯಲ್ಲಿ ಕಸ್ತೂರಿತಿಲಕವನಿಟ್ಟು ಹಾರ ಪದಕವ ಧರಿಸಿ ಥೋರ ಮೂಗುತಿನಿಟ್ಟು ಗೀರು ಕಂಕಣ ಕೈಗೆ ಚಾರು ಬಿರದಾವಳಿಯು ತೋರುತಲೆ ಕಟ್ಟಿದಳು ನಾರಿ ತಾ ಐವತ್ತುಪೂರ ವಯದವಳಾಗಿ ತೋರುತಿಹಳೂ ॥೪॥

ಜೋಲಗಿವಿಯಲಿ ತಕ್ಕ ವಾಲೆಯನು ಇಟ್ಟು ಮಣಿಮಾಲೆಗಳ ಧರಿಸಿದಳು ಮೂಲದಲಿ ಶಂಖಮಣಿ ಮೇಲೆ ಗುಲುಗುಂಜಿಮಣಿ ಮೇಲಾದ ತುಲಸಿಮಣಿ ಮೇಲೆ ಶ್ರೀಗಂಧಮಣಿ ಮೇಲೆ ಕರ್ಪೂರಮಣಿ ಮೆಲ್ಲಗ್ಹಾಕಿದಳೂ ॥
ಮೇಲೆ ಸ್ಫಟಿಕದಮಣಿಯು ಮೇಲೆ ಕಮಲಾಕ್ಷಮಣಿ ಜೋಲೆ ಮೊಲೆಗಳ ಮೇಲೆ ಸಾಲ್ಹಿಡಿದು ವಿವಿಧ ಮಣಿಮಾಲೆಗಳು ತಾ ಧರಿಸಿ ಬಾಲೆ ಕಟ್ಟಿದಳು ತನ್ನ ಬಾಲಕನ ಉಡಿಯಲ್ಲಿ ಕೋಲು ಕೈಯಲಿ ಪಿಡಿದು ನಡದಳಾಗಾ ॥೫॥


pulindarupadharaya namah

aghatyaghatanapatvi pulinda shripatestanuh
nripajasmarapidam tam kathayanti haredagham ..

jaya jaya
jaya jayapradavesha jaya nityasantosha
jayatu jaya lakshmisha jaya venkatesha ..1..

padmajakrita yatra padmavikasitanetra ..
padmajasana mukhya padmanabhakhya ..2..

gurvanugrahagamya gurugunarnava saumya ..
gurvanantadrisha gurusuprakasha ..3..

vachana

sirisahita sheshakhyagiriyalli iruvantha paramapurushana padasarasijangala nitya smarisi natisuve matte mareyadale manadalli smarisi gurugaligella karava mugive ..
vara buddhiyaliyenna shirametti harutale iruvantha lokadali vara kavishvararugalige karamugidu ena buddhi haridashtu peluvenu vara venkatadhisha koravanji katheya ..1..

channiganu ghanamahima pannagadrisha ta munnagi narikularanna bakulavatige channagi bodhisuta tanna karyake kaluhi munna alochisida tanna manadolage ..
enna karyakke anyarupava dharisi innu na poguvenu tanna karyavu matte anyarige pelidare tanhage managottu munna maduvaralla channavagi ..2..

obba maga maganalla okkannu kannalla ubyubbi vaniteyaru kobbiladida matu obbarali nijavallavemba i riti avalambisuta koravanjiyembo rupavada ..
gambhira koravi mukhavembuvadu badihadu gumbha bayvalaghalluvembuvadu ondilla lambakarnagalihavu lamba kuchagalu matte lambodariyenisikombuvalu tanu ..3..

chiravastravanuttu chhidrakuppusa tottu thorajadegala dharisi dhira kamalodbhavana arondu tingalada chira shishuvina madi sara brahmandave dhora buttiya madi charu navadhanyagala pura tumbidalu ..
charu phaneyalli kasturitilakavanittu hara padakava dharisi thora mugutinittu giru kankana kaige charu biradavaliyu torutale kattidalu nari ta aivattupura vayadavalagi torutihalu ..4..

jolagiviyali takka valeyanu ittu manimalegala dharisidalu muladali shankhamani mele gulugunjimani melada tulasimani mele shrigandhamani mele karpuramani mellaghakidalu ..
mele sphatikadamaniyu mele kamalakshamani jole molegala mele salhididu vividha manimalegalu ta dharisi bale kattidalu tanna balakana udiyalli kolu kaiyali pididu nadadalaga ..5..
.
.
Spotify:
https://open.spotify.com/artist/3jNaY...

Prime music:
https://music.amazon.in/artists/B09V2...

Apple music:
  / daasoham  

Комментарии

Информация по комментариям в разработке