ಬೆಂಗಳೂರಿನ ಆರ್ಥಿಕತೆಗೆ ಉತ್ತರದವರೇ ಆಧಾರ? ಅಹಂಕಾರದ ಮಾತಿಗೆ ಕನ್ನಡಿಗ ಕೊಟ್ಟ ಖಡಕ್‌ ಉತ್ತರ ನೋಡಿ

Описание к видео ಬೆಂಗಳೂರಿನ ಆರ್ಥಿಕತೆಗೆ ಉತ್ತರದವರೇ ಆಧಾರ? ಅಹಂಕಾರದ ಮಾತಿಗೆ ಕನ್ನಡಿಗ ಕೊಟ್ಟ ಖಡಕ್‌ ಉತ್ತರ ನೋಡಿ

ಬೆಂಗಳೂರಿನ ಇತಿಹಾಸ ದೊಡ್ಡದಿದೆ. ಐಟಿ-ಸಿಟಿ ಖ್ಯಾತಿಯನ್ನು ಪಡೆಯುವುದಕ್ಕೂ ಮುಂಚಿನಿಂದಲೂ ಬೆಂಗಳೂರು ಹಲವು ಕ್ಷೇತ್ರಗಳಲ್ಲಿ ಹೆಸರಾಗಿತ್ತು. ವ್ಯಾಪಾರ-ವ್ಯವಹಾರಗಳ ಪ್ರಮುಖ ಕೇಂದ್ರವಾಗಿತ್ತು. ಶಿಕ್ಷಣ ಸಂಸ್ಥೆಗಳು, ಕಂಪನಿಗಳು, ಸಾಂಸ್ಕೃತಿಕ ಕೇಂದ್ರಗಳು, ಸುಂದರ ಪರಿಸರವು ಜಗತ್ತಿನ ಹಲವು ಜನರು ಬೆಂಗಳೂರಿನತ್ತ ನೋಡುವಂತೆ ಮಾಡಿದ್ದವು. ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳ ಸಾಲಿನಲ್ಲಿ ಬೆಂಗಳೂರು ಸಹ ಇದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದು ಇಲ್ಲಿಯೇ ನೆಲೆಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಅಂಥ ಜನರು ಇಲ್ಲಿನ ಸಂಸ್ಕೃತಿ ಮತ್ತು ಭಾಷೆಯನ್ನು ತಮ್ಮದಾಗಿಸಿಕೊಳ್ಳುವ ಯತ್ನವನ್ನೇ ಮಾಡುತ್ತಿಲ್ಲ. ಆರೋಪಗಳನ್ನು ಮಾಡುತ್ತಾ ಮೊಂಡುತನ ಪ್ರದರ್ಶಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಅಂಥವರಿಗೆ ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ವಿಡಿಯೋ ಸಂದೇಶದ ಮೂಲಕ ಕನ್ನಡ ಕಲಿಯುವಂತೆ ತಾಕೀತು ಮಾಡಿದ್ದಾರೆ.

#KannadainBengaluru #Nonkannadigas #NorthindiansinBengaluru

Bengaluru developing because of north indians and non kannadigas discrimination allegations Kannadigas reaction

Комментарии

Информация по комментариям в разработке