#Sankranti_rituals
#festival_rituals
#Sankranthi_aarathi
ಸಂಕ್ರಾಂತಿ ಹಬ್ಬದಲ್ಲಿ ಮಕ್ಕಳಿಗೆ ಆರತಿ ಮಾಡುವುದು.
ಆರತಿ ಎಂದರೇನು ಅದರ ಮಹತ್ವ :
ನಾವು ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಹಾಕಿ, ಅಲಂಕಾರ ಮಾಡಿದರೆ ಸಾಕು ನೋಡುವವರ ಕಣ್ಣು ಕುಕ್ಕುವಂತಿರುತ್ತದೆ. ಆಗ ದೃಷ್ಟಿ ತುಂಬ ಆಗುತ್ತದೆ. ಕೆಂಪು ನೀರು ಮಾಡಿ ತುಪ್ಪದ ದೀಪಗಳನ್ನ ಅದರಲ್ಲಿ ಇಟ್ಟು ಹಚ್ಚಿ ಮಕ್ಕಳಿಗೆ ಬೆಳಗಿದರೆ ದೃಷ್ಟಿ ನಿವಾರಣೆ ಆಗುತ್ತದೆ. ಇದಕ್ಕೆ ಆರತಿ ಮಾಡುವುದು.
ಆರತಿಯ ಮಹತ್ವ ತುಂಬಾನೇ ಇದೆ. ಮಕ್ಕಳು ಮಂಕಾಗುವುದು, ಹಠ ಹಿಡಿಯುವುದು, ರಚ್ಚೆ ಹಿಡಿಯುವುದು, ಉಸಿರು ಕಟ್ಟುವುದು, ಅಳುವುದು ಹೀಗೆ ಅನೇಕ ರೀತಿಯ ರಂಪಾಟಗಳು ಮಾಡುತ್ತಾರೆ. ಆರತಿ ಮಾಡಿದರೆ ಇದೆಲ್ಲ ಕಡಿಮೆ ಯಾಗಿ ಮಕ್ಕಳು ನಗುನಗುತ್ತಾ ಇರುತ್ತಾರೆ.
ಆರತಿ ಮಾಡಿದರೆ ದೃಷ್ಠಿ ತೆಗೆದಂತೆ. ಮಕ್ಕಳಿಗೂ ಖುಷಿ, ಹಾಗು ಒಳ್ಳೆಯದು.
ಯಾವ ಸಮಯದಲ್ಲಿ ಆರತಿ ಮಾಡಬೇಕು:
ಬೆಳಿಗ್ಗೆ ಎದ್ದು ಸ್ನಾನ, ಪೂಜೆ, ತಿಂಡಿ ಎಲ್ಲ ಮುಗಿದ ಮೇಲೆ ಆರತಿ ಮಾಡಬಹುದು. ನಂತರ ಎಳ್ಳು ಬೀರಲು ಹೋಗಬಹುದು. ಅಥವಾ ಮದ್ಯಾನ ಊಟದ ನಂತರ ಆರತಿ ಮಾಡಬಹುದು.
ಬೇರೆಯವರು ನಮ್ಮ ಮನೆಗೆ ಬಂದು ಎಳ್ಳು ಬೀರುವ ಮುನ್ನ ನಾವು ಆರತಿ ಮಾಡಿ, ನಾವು ಕೂಡ ಎಳ್ಳು ಬೀರಲು ರೆಡಿ ಮಾಡಿ ಕೊಳ್ಳ ಬೇಕು. ಆಗ ಬಂದವರಿಗೆ ಎಳ್ಳು ಕೊಡಲು ಸುಲಭವಾಗುತ್ತೆ.
ಆರತಿ ಮಾಡುವಾಗ ಎಷ್ಟು ತಟ್ಟೆಗಳ್ಳನ್ನು ರೆಡಿ ಮಾಡಿಕೊಳ್ಳ ಬೇಕು:
ಕೆಳಗೆ ತಿಳಿಸಿರುವ ತಟ್ಟೆಗಳ್ಳನ್ನು ರೆಡಿ ಮಾಡಿಕೊಳ್ಳಿ.
1. ಮೊದಲನೆಯ ತಟ್ಟೆ ಯಲ್ಲಿ ಅರಿಶಿನ ಕುಂಕುಮ, ಹೂವು, ಅಕ್ಷತೆ, ಊದಬತ್ತಿ.
2. ವಿಲದೆಲೆ ಅಡಿಕೆ ದಕ್ಷಿಣೆ ಹಣ್ಣುಗಳು
3. ಕಬ್ಬಿಣ ತುಂಡುಗಳು ತುಂಬಿರುವ ತಟ್ಟೆ.
4. ಎಳ್ಳು ಹಾಗು ಸಕ್ಕರೆ ಅಚ್ಚು,
5. ಕೆಂಪು ನೀರು(ಸುಣ್ಣ ಅರಿಶಿನದ ನೀರು=ಕೆಂಪು ನೀರು) (ತುಪ್ಪದ ಬತ್ತಿ ಹಾಕಿದ ಎರಡು ದೀಪಗಳು).
6. ಒಂದು ಕಪ್ ನಲ್ಲಿ ಚಿಲ್ಲರೆ ಕಾಸು, ಹಾಗು ಒಂದು ಕಪ್ ನಲ್ಲಿ ಎಲಚಿ ಹಣ್ಣು, ಕಬ್ಬಿಣ ಪೀಸ್ ಗಳು (1 inch ಕಟ್ ಮಡಿದ ಪೀಸ್ ಗಳು) ಒಂದು ತಟ್ಟೆಯಲ್ಲಿ ಇಡಿ.
7. ಮಕ್ಕಳು ಹುಟ್ಟಿದ ಮೊದಲ ವರ್ಷದಲ್ಲಿ - ಗಂಡು ಮಗುವಾದರೆ ಅಂಬೆಗಾಲು ಕೃಷ್ಣ (ಬೆಳ್ಳಿದು), ಹೆಣ್ಣು ಮಗುವಾದರೆ ಬೆಳ್ಳಿಯ ಕುಂಕುಮದ ಬೊಟ್ಟಲು (ಬೆಳ್ಳಿ ಅಂಗಡಿಯಲ್ಲಿ ಪುಟ್ಟ ಪುಟ್ಟದು ಸಿಗುತ್ತದೆ). (ಆದರೆ ಪಂಚಲೋಹದ್ದು ಕೊಡಬೊಹುದು, ಅಥವಾ ಗೊಂಬೆ ಕೊಡಬಹುದು) (This is optional).
ಯಾವ ವಯಸ್ಸಿನ ಮಕ್ಕಳಿಗೆ ಆರತಿ ಮಾಡಬೇಕು.
ಗಂಡು ಮಗುವಾದರೆ - ಮಗು ಹುಟ್ಟಿದಾಗಿನಿಂದ ೧೦ -೧೨ ವಯಸ್ಸಿನ ವರೆಗೆ ಮಾಡಬಹುದು.
ಹೆಣ್ಣು ಮಗುವಾದರೆ - ಮಗು ಹುಟ್ಟಿದಾಗಿನಿಂದ ಋತುಮತಿ ಯಾಗುವವರೆಗೂ ಆರತಿ ಮಾಡಬಹುದು.
ಎಳ್ಳು ಬೀರುವಾಗ ಏನೇನು ತೆಗೆದು ಕೊಂಡು ಹೋಗಬೇಕು
ಮೊದಲು 5 ಮನೆಗೆ - ವಿಲೇದೆಲೆ, ಅಡಿಕೆ, ದಕ್ಷಿಣೆ, ಕಬ್ಬು, ಎಳ್ಳು, ಸಕ್ಕರೆ ಅಚ್ಚು, ಬಲೇ ಹಣ್ಣು, ಕಿತ್ತಳೆ ಹಣ್ಣು (ಯಾವ ಹಣ್ಣು ಇದರೆ ಅದನ್ನೇ ಕೊಡಿ), ಹಾಗೆ ಕಡ್ಲೆ ಕಾಯಿ,ಗೆಣಸಿನ ಪೀಸ್, ಅವರೆಕಾಯಿ, ಕುಂಬಳಕಾಯಿ ಪೀಸ್, ಎಲಚಿ ಹಣ್ಣು. ಇಷ್ಟನ್ನು ಪ್ಯಾಕ್ ಮಾಡಿ ಕೊಡಿ. ಇಷ್ಟನ್ನು ಕೊಟ್ಟರೆ ಶ್ರೇಯಸು ಸಿಗುತ್ತದೆ. ಇಷ್ಟನ್ನು ಒಂದು ತಟ್ಟೆಯಲ್ಲಿ ಇಟ್ಟು ಕೈಗೆ ಕೊಟ್ಟರೆ ದಾನ ಕೊಟ್ಟ ಹಾಗೆ ಆಗುತ್ತದೆ.
ಮಕ್ಕಳಿರುವ ಮನೆಯಲ್ಲಿ ಈ ರೀತಿ ಮಾಡಿ, ತಲೆಯ ಮೇಲೆ ಬಂದದ್ದು ಎಲೆ ಮೇಲೆ ಹೋಯಿತು ಎಂಬ ಗಾದೆ ಇದೆ.
ಗಾದೆ ಎಂದು ಸುಳ್ಳಾಗುವುದಿಲ್ಲ.
ಮಕ್ಕಲ್ಲ ತಲೆ ಮೇಲೆ ಏನೇನು ಹಾಕ ಬೇಕು
ಕಬ್ಬನ್ನು ಸಿಪ್ಪೆ ತೆಗೆದು ನಾಲ್ಕು ಹೋಳು ಮಾಡಿ ಒಂದೊಂದ್ ಇಂಚ್ ಗೆ ಕಟ್ ಮಾಡಿಕೊಳ್ಳಿ.
ರೆಡಿ ಮಾಡಿರುವ ಎಳ್ಳನ್ನು ಕವರ್ ಗೆ ಹಾಕಿ ಪಟ್ಟಣಗಳ್ಳನ್ನು ರೆಡಿ ಮಾಡಿಕೊಳ್ಳಿ.
ಒಂದು ಕಪ್ನಲ್ಲಿ ಎಲಚಿ ಹಣ್ಣು, ಮತ್ತೊಂದು ಕಪ್ ನಲ್ಲಿ ಕಾಸುಗಳ್ಳನ್ನು ರೆಡಿ ಮಾಡಿ.
ಪಾವು, ಅರ್ಧಸೇರು, ಸೇರು ಹೀಗೆ ಏನಾದರೂ ಅಳತೆ ಮಾಡುವುದಕ್ಕೆ ಇಟ್ಟುಕೊಂಡಿರುವುದರಲ್ಲಿ ತುಂಬಿ ತಲೆಯ ಮೇಲೆ ಸುರಿಯಿರಿ.
ಚಿಕ್ಕ ಕುಟುಂಬವಾಗಲಿ ದೊಡ್ಡ ಕುಟುಂಬವಾಗಲಿ ಎಷ್ಟು ಮಕ್ಕಳಿದ್ದರೂ ಸಾಲಾಗಿ ಕೂರಿಸಿ.
ಕೂರಿಸುವ ಮೊದಲು ಮಕ್ಕಳು ಕೂರುವ ಜಗದಲ್ಲಿ ಸ್ವಲ್ಪ ಅಕ್ಷತೆಯನ್ನು ಹಾಕಿ ನಂತರ ಕೂರಿಸಿ.
ಎಲ್ಲ ಮಕ್ಕಳಿಗೂ ಮೂರು ಬಾರಿ ಸುರಿಯಬೇಕು.
ಹೀಗೆ ಎಲ್ಲ ಮಕ್ಕಳಿಗೂ ಸುರಿಯಿರಿ.
ಅದನ್ನೆಲ್ಲಾ ತೆಗೆದು ಇಟ್ಟುಕೊಂಡು, ಎಳ್ಳು ಬೀರುವಾಗ ಅದನ್ನೇ ಕೊಡಿ.
ಪ್ಲಾಸ್ಟಿಕ್ ಸಾಮಾನು ಕೊಡಬೇಡಿ, ಸ್ಟೀಲ್ ಆದ್ರೆ ಓಕೆ. ಸ್ಟೀಲ್ ಕಬ್ಬಿಣಕ್ಕೆ ಸಮಾನ, ಎಳ್ಳು ಕಬ್ಬಿಣ ಎರಡನ್ನು ಕೊಟ್ಟರೆ ಶನಿಗೆ ಶಾಂತಿ ಯಾಗುತ್ತದೆ.
ಒಂದೊಂದು ಪದಾರ್ಥಗಳ್ಳನ್ನು ಕೊಡುವಾಗಲೂ ಆದರೆ ಆದಾ ಮಹತ್ವ ಇರುತ್ತದೆ.
ದೊಡ್ಡವರು ಹಿಂದಿನಿಂದಲೂ ನಡಿಸಿಕೊಂಡು ಬಂದಿದ್ದಾರೆ ಸಂಪ್ರದಾಯವನ್ನ. ನಾವು ಕೂಡ ಹೀಗೆ ಮುಂದುವರಿಸಿಕೊಂಡು ಹೋಗುವುದರಿಂದ ಮಕ್ಕಳು ಕೂಡ ಇದನ್ನು ಮುಂದುವರಿಸಿಕೊಂಡು ಹೋಗುವ ನಂಬಿಕೆ ಇದೆ.
ಆರತಿಯಾದ ನಂತರ ಅಲ್ಲಿ ಇರುವವರೆಲ್ಲರೂ ಮಕ್ಕಳಿಗೆ ಅಕ್ಷತೆ ಯನ್ನು ಹಾಕಿ ಆಶೀರ್ವಾದ ವನ್ನು ಮಾಡಿ.
ಹಿರಿಯರ ಆಶೀರ್ವಾದ ದೇವರ ಆಶೀರ್ವಾದ ಎಲ್ಲವೂ ಮಕ್ಕಳಿಗೆ ಮುಖ್ಯ.
ನೀವುಗಳು ಈ ವಿಡಿಯೋ ನೋಡಿ, ನಿಮ್ಮ ಸ್ನೇಹಿತರಿಗೆ, ಬಂಧು ಬಳಗದವರಿಗೆ, ಅಕ್ಕ ಪಕ್ಕ ದವರಿಗೆ ಎಲ್ಲರಿಗೂ ಶೇರ್ ಮಾಡಿ, ಲೈಕ್ ಮಾಡಿ, ಸಬ್ಸ್ಕ್ರೈಬ್ ಮಾಡಿ.
ನಿಮಗೆ ಎಲ್ಲ ರೀತಿಯ ಹಬ್ಬಗಳು, ಅಡಿಗೆಗಳು, ಸಂಪ್ರದಾಯಗಳನ್ನು, ಪೂಜೆಗಳು ತೋರಿಸುತ್ತೇವೆ.
ಅವರೆಕಾಯಿ, ಕಡ್ಲೆಕಾಯಿ, ಗೆಣಸು, ೨ ಕಬ್ಬಿಣ್ಣ ಪೀಸ್, ಬೇಯಿಸುವುದು ಮಕ್ಕಳಿಗೆ ಒಳ್ಳೆದಾಗಲಿ ಎಂದು.
ಜೀರಿಗೆ ಮೆಣಸಿನಿಂದ ತಯಾರಾದ ಅಡುಗೆ ಈ ಹಬ್ಬಕ್ಕೆ ಮುಖ್ಯ - ಆದ್ದರಿಂದ ಪೊಂಗಲ್ ಮಾಡುವುದು.
visit: www.cookinggranny.com.
to order amma's products click on the link below
https://wa.me/c/917337602455
Информация по комментариям в разработке