ಮೂರ್ಖನ ಮಾತುಗಳು

Описание к видео ಮೂರ್ಖನ ಮಾತುಗಳು

ಬೆನ್ನುಡಿ..........

ಮುನ್ನುಡಿ ಅನ್ನೋದು ಒಂದು ಪುಸ್ತಕದ Entry ಆದ್ರೆ! ಬೆನ್ನುಡಿ ಅನ್ನೋದು Exit ತರಾ!!
ಏನಪ್ಪಾ ಇದು Entry, Exit ಅಂತ ತಲೆ ಕೆರ್ಕೋಂತಾ ಇದ್ದೀರಾ?
ಈ Entry, Exit ನ ಮಹತ್ವ ನಿಮಗರ್ಥಾಗ್ಬೇಕೂಂದ್ರೆ.. ನೀವೆಲ್ರೂ ಈ ಪುಸ್ತಕನಾ ಓದ್ಲೇಬೇಕು.....
Exit ಏನೂ ಅಂತ ತಿಳ್ಕೋಬೇಕೂಂದ್ರೆ  ಈ ಪುಸ್ತಕದೊಳಗಡೇ Entry ಆಗ್ಲೇಬೇಕು.......
'ಅಹೋರಾತ್ರ' ಬರೆದಿರೋ ಈ
'ಮೂರ್ಖನ ಮಾತುಗಳು..!'
ಮೂರ್ಖ....!   ಅಹೋರಾತ್ರ..! ಅ್ಹಹ್್
ಛೇ. ಛೇ.. ಎಲ್ಲಾದ್ರು ಉಂಟೇ....
ಮೂರ್ಖಾನಾ..? ಅಹೋರಾತ್ರರು ಮೂರ್ಖರಾಗೋಕೆ ಸಾಧ್ಯಾನೇ ಇಲ್ಲ..
ನನ್ನ ಪ್ರಕಾರ 'ಮೂರ್ಖನ ಮಾತುಗಳು' ಗಿಂತ
'ಮೂರುಕಣ್ಣನ ಮಾತುಗಳು' ಅಂತ ಇಡಬೇಕಾಗಿತ್ತು ಈ ಪುಸ್ತಕಕ್ಕೆ.....
ಯಾಕೆ ಅಂದ್ರೆ ಬಹಳ ವರ್ಷದಿಂದ ನನಗೆ ಅಹೋರಾತ್ರರವರು ಪರಿಚಯ....
ಈ ವ್ಯಕ್ತಿ ಹತ್ತಿರ ಏನಿಲ್ಲ..! ಏನಿಲ್ಲ..?
ಅಹೋರಾತ್ರ ಅವರನ್ನು meet ಮಾಡ್ದಾಗ,
ಅವರತ್ರ ಮಾತಾಡ್ದಾಗೆಲ್ಲ ನಂಗನ್ಸೋದು,
ಜ್ಞಾಪಕ ಬರೋದು ಏನಂದ್ರೆ...
ಮೋದಿ ಹೇಳಿದ ಮಾತುಗಳು..
'ಕುಚ್ ಬನ್ನೇಕ ಮತ್ಸೋಚೋ...
ಕುಚ್ ಕರ್ನೇಕ ಸೋಚೋ....'
ಏನೋ ಆಗೋದಿಕ್ ಯೋಚನೆ ಮಾಡ್ಬೇಡ..!
ಏನು ಮಾಡ್ಬೇಕು ಅಂತ ಯೋಚನೆ ಮಾಡು..
ಏನೋ ಆಗೋದಕ್ಕಿನ್ನ ಏನೋ ಮಾಡೋದ್ರಲ್ಲಿ ಸಂತೋಷ ಖುಷೀ ಜಾಸ್ತಿ ಇದೆ ಅಂತಾ......
ಅಕ್ಷರಶಃ ಇದೇತರಃ ....
ಇದಕ್ಕೆ ನಾನ್ಕಂಡ ಪ್ರತ್ಯಕ್ಷ ಉದಾಹರಣೆ ಅಂದ್ರೆ ಅಹೋರಾತ್ರರವರು......
ದೇಶ ಸುತ್ತುತಾಯಿರ್ತಾರೆ......
ಕೋಶ ಓದ್ತಾಯಿರ್ತಾರೆ.......
ಏನೋ ಮಾಡ್ತಾ ಹೋಗ್ತಾಇರ್ತಾರೆ....
ಎಲ್ಲವನ್ನೂ ಮಾಡ್ತಾಯಿರ್ತಾರೆ....
ಯಾವಾಗ್ಸಿಕ್ಕುದ್ರೂ Free ಆಗಿದ್ದಂಗಿರ್ತಾರೆ...
ತಾನು Free Free ಅಂತಾನೇ ಹೇಳ್ತಾರೆ..
ಸಂತೋಷವಾಗಿರ್ತಾರೆ....
ಖುಷಿಯಾಗಿರ್ತಾರೆ......
ತುಂಬಾ Busyಯಾಗಿರ್ತಾರೆ......
ಅವರು ಸುತ್ತಿರೋ ದೇಶ, ಅವರು ತಿಳ್ಕೊಂಡಿರೋದು, ಓದಿದ್ದನ್ನಾ, ನೋಡಿದ್ದನ್ನೆಲ್ಲಾ ಅರ್ಗಿಸ್ಕೊಂಡು, ಎಲ್ಲವನ್ನೂ ಸಂಗ್ರಹಿಸಿ ಅನ್ನಿಸಿದ್ದೇಲ್ಲಾ ಬರೆದಿದ್ದಾರೆ.....
But ಅದು ಅದ್ಭುತವಾಗಿ ಮೂಡಿಬಂದಿದೆ....
ಈ 'ಮೂರ್ಖನ ಮಾತುಗಳು' ಛೇಛೇ ಅಲ್ಲ
'ಮೂರು-ಕಣ್ಣನ ಮಾತುಗಳು' ತಪ್ಪದೇ ನೀವು ಓದಬೇಕು.....
ಈ ಪುಸ್ತಕಕ್ಕೆ ಬೆನ್ನುಡಿ ಬರೆಯೋದಕ್ಕೆ
ನಿಜವಾಗ್ಲೂ ನಾನು
ಅಷ್ಟು 'ಬುದ್ಧಿವಂತ' ಅಲ್ಲ ಅನ್ನಿಸಿತು ನಾನು ಪುಸ್ತಕ ಓದಿದಾಗ....
ಆದ್ರೂ ಈ ಮೂರ್ಖನ ಮಾತುಗಳು ಬೆನ್ನುಡಿಯಾಗಿ ಏನೋ ಬರೆದಿದ್ದೀನಿ.....
ದಯವಿಟ್ಟು ನೀವೆಲ್ರೂ ಈ ಪುಸ್ತಕಾನ ಓದಿ.....
ಅದ್ಭುತವಾಗಿದೆ........
Miss ಮಾಡ್ಬೇಡಿ......
Thank you.........
                      : ಉPENದ್ರ

Комментарии

Информация по комментариям в разработке