Ep-4|ಹೆಂಡತಿಯ ಅಕ್ರಮ ಸಂಬಂಧ! ಗಂಡ ಮಾಡಿದ್ದೇನು ಗೊತ್ತಾ?|Dy.SP(r) J B Rangaswamy|Officer|Channapattana|GaS

Описание к видео Ep-4|ಹೆಂಡತಿಯ ಅಕ್ರಮ ಸಂಬಂಧ! ಗಂಡ ಮಾಡಿದ್ದೇನು ಗೊತ್ತಾ?|Dy.SP(r) J B Rangaswamy|Officer|Channapattana|GaS

Interview with J B Rangaswamy :    • J B Rangaswamy - Retd DySP  

ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
===========
ಶ್ರೀ ಜೆ.ಬಿ.ರಂಗಸ್ವಾಮಿ , ನಿವೃತ್ತ ಡಿವೈಎಸ್ಪಿ‌ – ವ್ಯಕ್ತಿ ಪರಿಚಯ

ನಿವೃತ್ತ ಡಿವೈಎಸ್ಪಿ‌ ಶ್ರೀ ಜೆ.ಬಿ.ರಂಗಸ್ವಾಮಿಯವರು , ವೃತ್ತಿಯಲ್ಲಿ ಪೊಲೀಸ್‌ ಅಧಿಕಾರಿ , ಪ್ರವೃತ್ತಿಯಲ್ಲಿ ಕಲೆ –ಸಾಹಿತ್ಯ –ಸಂಗೀತಗಳ ಆರಾಧಕ. ಜೇಬರ್‌ ಎಂದೇ ಹೆಸರಾದ ಇವರು ಮೂಲತಃ ಹಾಸನದವರು. ಕನ್ನಡ ಸಾಹಿತ್ಯದ ಎಂ.ಎ. ಮತ್ತು ಕಾನೂನು ಪದವೀಧರರು. ಇಂಗ್ಲೀಷ್‌ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ , ವೃತ್ತಿ ಸಂಬಂಧಿತ ಅನೇಕ ತರಬೇತಿ ಪಡೆದಿರುವ ಜೇಬರ್‌ ಸದಾ ಅಧ್ಯಯನ ನಿರತ. ವಿದ್ಯಾರ್ಥಿ ದೆಸೆಯಿಂದಲೂ ಕನ್ನಡ ಪರ ಚಳುವಳಿ , ಜೆ.ಪಿ.ಚಳುವಳಿ , ಮೂಢನಂಬಿಕೆಗಳ ವಿರುದ್ಧ ಹೋರಾಟ, ಅಂತರ್ಜಾತೀಯ ಸರಳ ಮದುವೆಗಳು ಮುಂತಾದ ಆಂದೋಲನಗಳ ಮುಂಚೂಣಿಯಲ್ಲಿ ಕಾಣಿಸಿಕೊಂಡವರು. ವೈಜ್ಞಾನಿಕ ವಿಚಾರವಾದ ಕುರಿತಂತೆ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಮೊದಲಿನಿಂದ ಜಾತ್ಯತೀತ ಧೋರಣೆಯನ್ನು ಪ್ರತಿಪಾದಿಸುತ್ತಾ ಬಂದಿರುವ ಜೇಬರ್‌ ಜಾತ್ಯತೀತ ಆಂದೋಲನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮೂಢನಂಬಿಕೆ ಹಾಗೂ ಮತೀಯ ವೈಷಮ್ಯವನ್ನು ತೊಡೆಯಲು ಶ್ರಮಿಸುತ್ತಿದ್ದಾರೆ. ಜಾತ್ಯತೀತ ವೈಚಾರಿಕ ಮನೋಧರ್ಮ ಬೆಳೆಸುವುದು ಅವರ ಆಂದೋಲನದ ಗುರಿ.

ತರಂಗ ,ಸುಧಾ ಮುಂತಾದ ಪತ್ರಿಕೆಗಳಲ್ಲಿ ಕತೆ – ಲೇಖನಗಳನ್ನು ಪ್ರಕಟಿಸಿರುವ ಜೇಬರ್‌ ಅವರ ಆಸಕ್ತಿ ಬಹುಮುಖವಾದದ್ದು. ಅಪರಾಧ ತಡೆ ಕುರಿತ ಲೇಖನಗಳು , ವೈಜ್ಞಾನಿಕ ವಿಚಾರವಾದ ; ಕುಸ್ತಿ , ಚಿತ್ರ ಸಂಗೀತ , ಲಲಿತಕಲೆಗಳ ಬಗ್ಗೆ ಬರೆದಿರುವ ಜೇಬರ್ ಅವರು ಅಂಕಣಕಾರರಾಗಿ ಆಂದೋಲನ ಪತ್ರಿಕೆಯಲ್ಲಿ ಪ್ರತಿ ಬುಧವಾರ ಬರೆಯುವ ʼ ನಿನ್ನೆ ಮೊನ್ನೆ ನಮ್ಮ ಜನ ʼ ಜನಪ್ರಿಯ. ಕಳೆದ ಐವತ್ತು ವರ್ಷಗಳಲ್ಲಿ ನಡೆದಿರುವ ಸಾಮಾಜಿಕ , ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ದಾಖಲಿಸುತ್ತಿದ್ದಾರೆ. ಇಲಾಖೆಯಲ್ಲಿದ್ದಾಗಲೂ ಜನಪರ ಆಂದೋಲನಗಳಿಂದ ದೂರಸರಿಯದೆ ಇದ್ದವರು. ಅಂದಿನ ಪೊಲೀಸ್‌ ಕಮೀಷನರ್‌ ಶ್ರೀ ಕೆಂಪಯ್ಯನವರ ನೇತೃತ್ವದ ʼ ಶಕ್ತಿಧಾಮ ʼ ರೂಪಿಸುವಲ್ಲಿ ಜೇಬರ್‌ ರವರ ದುಡಿಮೆ ಅನನ್ಯವಾದದ್ದು. ಜೈಲಿನಲ್ಲಿದ್ದ ಖೈದಿಗಳಿಗೆ ನಾಟಕ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರಲ್ಲಿ ಸಾಂಸ್ಕೃತಿಕ ಹಾಗೂ ನೈತಿಕ ಜಾಗೃತಿಯನ್ನು ಮೂಡಿಸುವಲ್ಲಿ ಜೇಬರ್‌ ಪಾತ್ರ ಮಹತ್ವದ್ದು. ಅಂತೆಯೇ ಮಾಜಿ ಕೇಡಿಗಳಿಗೆ , ರೌಡಿಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ದೊರಕಿಸಿ ಕೊಟ್ಟು ಮುಖ್ಯವಾಹಿನಿಗೆ ಕರೆತಂದವರು.

ಜಗದ್ವಿಖ್ಯಾತ ದಸರಾ ಮೆರವಣಿಗೆ , ಬನ್ನಿಮಂಟಪ ಟಾರ್ಚ್‌ ಲೈಟ್‌ ಪೆರೇಡ್‌ ಗಳಲ್ಲಿ ಇವರು ನೀಡುವ ಕನ್ನಡ ವೀಕ್ಷಕ ವಿವರಣೆ ಅದರದೇ ಆದ ಸೊಬಗಿನದು. ೧೯೭೮ ರಿಂದ ಸತತವಾಗಿ ೪೩ ವರ್ಷಗಳ ಕಾಲ ದಸರಾ ವೀಕ್ಷಕ ವಿವರಣೆ ನೀಡಿದ ಹೆಗ್ಗಳಿಕೆ ಇವರದು. ಸಾಹಿತಿ ಮಳಲಿ ವಸಂತಕುಮಾರ್‌ ಜೊತೆಗೂಡಿ ಕುವೆಂಪು ನಗರದ ರಸ್ತೆಗಳಿಗೆ ಕುವೆಂಪು ಕೃತಿಗಳಿಂದ ಆಯ್ದು ನಾಮಕರಣ ಮಾಡಿದ ಶ್ರೇಯಸ್ಸು ಇವರದೇ. ಪೊಲೀಸ್‌ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಜೆ.ಬಿ.ರಂಗಸ್ವಾಮಿಯವರು ಪೊಲೀಸ್‌ ಅಧಿಕಾರಿಗಳ ತರಬೇತಿದಾರರಾಗಿ ಬೋಧಿಸಿದ್ದಾರೆ , ಲೋಕಾಯುಕ್ತ , ಸಿಐಡಿ , ಗುಪ್ತಚಾರ ದಳಗಳಲ್ಲೂ ಕೆಲಸ ಮಾಡಿದ್ದಾರೆ.
ಮೂರು ದಶಕಗಳ ವೃತ್ತಿ ಬದುಕಿನಲ್ಲಿ ಯಾವುದೇ ಕಳಂಕವಿಲ್ಲದೆ , ಸಸ್ಪೆಂಡು, ರೈಡು ಮುಂತಾದ ಶಿಕ್ಷೆಗಳಿಲ್ಲದೆ ಮರ್ಯಾದೆಯಿಂದ ನಿವೃತ್ತರಾಗಿರುವುದು ವೈಯಕ್ತಿಕವಾಗಿ ಅವರಿಗೆ ಹೆಮ್ಮೆಯ ಸಂಗತಿ !.

J.B.RANGASWAMY.
M.A., LL.B ; DySP ( r ).

[email protected]
====================
FOLLOW US ON :
Our Official website: www.almamediaschool.com

Our Official Website : https://www.gaurishakkistudio.com/

Facebook Page :   / gaurishakkis.  .

Instagram : https://www.instagram.com/?hl=en

LinkedIn :   / gaur.  .

Share Chat : https://sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.

For One Time Payment -
gaurishakkistudio@upi
......................................................................
Join this channel to get access to perks:
   / @gaurishakkistudio  
...............................................
  / gaurishakkistudio  
................................................
https://www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================







#channapatna #jbr
#jbrangaswamy #retdDySP #hassan #ksp #mysuru #poornachandratejaswi #mdnanjundaswamy #chandrashekharpatil #champa #corruptuion

#GaurishAkkiStudio, #Gas, #GaurishAkki

Комментарии

Информация по комментариям в разработке